ಆ್ಯಪ್ನಗರ

ಬತ್ತಿರುವ ಬಾವಿ, ಭರವಸೆ ಈಡೇರಿಸದ ತಹಸೀಲ್ದಾರ

ಸಿದ್ದಾಪುರ : ತಾಲೂಕಿನಲ್ಲಿ ಮಳೆ ಮಾಯವಾಗಿದ್ದು, ಬಾವಿಗಳೆಲ್ಲ ಬತ್ತಿ ಹೋಗಿವೆ. ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಅರೆಂದೂರು ಹೊಳೆಯಲ್ಲಿ ಇನ್ನೂ ಸಾಕಷ್ಟು ನೀರು ಬಂದಿಲ್ಲ. ಇದರಿಂದ ಕುಡಿಯುವ ನೀರಿಗಾಗಿ ಜನರ ಪರದಾಟ ಆರಂಭವಾಗಿದೆ.

Vijaya Karnataka 22 Jun 2019, 5:00 am
ಸಿದ್ದಾಪುರ : ತಾಲೂಕಿನಲ್ಲಿ ಮಳೆ ಮಾಯವಾಗಿದ್ದು, ಬಾವಿಗಳೆಲ್ಲ ಬತ್ತಿ ಹೋಗಿವೆ. ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಅರೆಂದೂರು ಹೊಳೆಯಲ್ಲಿ ಇನ್ನೂ ಸಾಕಷ್ಟು ನೀರು ಬಂದಿಲ್ಲ. ಇದರಿಂದ ಕುಡಿಯುವ ನೀರಿಗಾಗಿ ಜನರ ಪರದಾಟ ಆರಂಭವಾಗಿದೆ.
Vijaya Karnataka Web KWR-21SDPR2


ಪಟ್ಟಣದ ಹೊಸೂರು ಜನತಾ ಕಾಲೊನಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಸುಮಾರು 120 ಮನೆಗಳಿರುವ ಈ ಭಾಗದಲ್ಲಿ ಇರುವ ಮೂರು ಬಾವಿಗಳಲ್ಲಿ ನೀರು ಬತ್ತಿ ಹೋಗಿದೆ. ಜನರು ನೀರಿಗಾಗಿ ಅರ್ಧ ಕಿ.ಮೀ. ದೂರ ಹೋಗಬೇಕಾಗಿದೆ. ಮಕ್ಕಳು ಶಾಲೆ-ಕಾಲೇಜಿಗೆ ಹೋಗುವುದನ್ನು ಬಿಟ್ಟು ನೀರು ತುಂಬುವ ಕೆಲಸದಲ್ಲಿ ನಿರತರಾಗಿದ್ದಾರೆ. ಶಾಲೆಯಲ್ಲಿ ಕೊಟ್ಟ ಸೈಕಲ್‌ ಈಗ ನೀರು ಸಾಗಣೆ ವಾಹನವಾಗಿದೆ.

ಪ.ಪಂ. ವಾರ್ಡ್‌ ನಂ.12ರಲ್ಲಿ ಬರುವ ಜನತಾ ಕಾಲೊನಿಯ ಜನರು ಕುಡಿಯುವ ನೀರು ನೀಡಬೇಕು, ಈ ಭಾಗದ ಸಮಗ್ರ ಅಭಿವೃದ್ಧಿಯಾಗಬೇಕು ಎಂಬ ಬೇಡಿಕೆ ಇಟ್ಟು ಕಳೆದ ತಿಂಗಳು ನಡೆದ ಪ.ಪಂ. ಚುನಾವಣೆಯ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದರು. ಆ ಸಮಯದಲ್ಲಿ ಸ್ಥಳೀಯ ತಹಸೀಲ್ದಾರ ಕುಡಿಯುವ ನೀರಿನ ವ್ಯವಸ್ಥೆಯನ್ನು ತಕ್ಷ ಣದಲ್ಲೇ ಮಾಡಲಾಗುವುದು, ತೆರೆದ ಬಾವಿ ತೆಗೆಯಲಾಗುವುದು, ಕೆಟ್ಟು ನಿಂತಿರುವ ಬೋರ್‌ವೆಲ್‌ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದರು.

ಇದರಿಂದ ಜನರು ಮತದಾನವನ್ನೂ ಮಾಡಿದ್ದರು ಆದರೆ ಒಂದು ತಿಂಗಳು ಮುಗಿದರೂ ನೀರಿನ ವ್ಯವಸ್ಥೆ ಆಗಿಲ್ಲ.

ಈ ತಿಂಗಳ ಆರಂಭದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನಡೆಸಿದ ಕುಡಿಯುವ ನೀರಿನ ಸಭೆಯಲ್ಲಿ ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ನೀಡಲು ನಮಗೆ ದುಡ್ಡಿನ ಕೊರತೆ ಇಲ್ಲ. ಪಟ್ಟಣದ ಎಲ್ಲ ವಾರ್ಡ್‌ಗಳಿಗೂ ಟ್ಯಾಂಕರ್‌ ಮೂಲಕ ನೀರು ನೀಡಲಾಗುವುದು ಎಂದು ಹೇಳಿದ್ದರು. ಇದಾದ ಒಂದೆರಡು ದಿನದಲ್ಲಿ ಟ್ಯಾಂಕರ್‌ ಮೂಲಕ ಈ ಭಾಗದಲ್ಲಿ ಮನೆಗೆ ಐದು ಬಿಂದಿಗೆ ನೀರು ನೀಡಿದ್ದರು. ನಂತರ ನಾಲ್ಕು ದಿನಕ್ಕೊಮ್ಮೆ ನೀರು ನೀಡಲಾಗುವುದು ಎಂದು ಹೇಳಲಾಗಿತ್ತು. ಈಗ 15 ದಿನವಾದರೂ ನೀರು ನೀಡುತ್ತಿಲ್ಲ. ಕೆಲವು ವಾರ್ಡ್‌ಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ನೀಡಲಾಗುತ್ತಿದೆ ನಮ್ಮ ಭಾಗವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಈ ಭಾಗದ ಜನತೆ ಆರೋಪಿಸುತ್ತಿದ್ದಾರೆ.

ಕುಡಿಯುವ ನೀರಿಗೆ ಸಾಕಷ್ಟು ದುಡ್ಡಿದ್ದರೂ ಜನರಿಗೆ ನೀರು ಕೊಡಲು ಅಧಿಕಾರಿಗಳು ಯಾಕೆ ಹಿಂದೇಟು ಹಾಕುತ್ತಿದ್ದಾರೆ? ಸಾಕಷ್ಟು ದುಡ್ಡಿದೆ ಎಂದು ಶಾಸಕರು ಹೇಳುತ್ತಿರುವುದು ಸುಳ್ಳೇ ? ಅಥವಾ ಅಧಿಕಾರಿಗಳು ಇದು ಹೆಚ್ಚುವರಿ ಕೆಲಸ ಎಂದು ಮಾಡುತ್ತಿಲ್ಲವೇ? ಸಂಬಂಧಿಸಿದವರೇ ಉತ್ತರಿಸಬೇಕು.

ಅರೆಂದೂರು ಭಾಗದಲ್ಲಿ ಮಳೆಯಾಗಲು ಆರಂಭವಾಗಿದೆ. ಇನ್ನೂ ಒಂದೆರಡು ದಿನದಲ್ಲಿ ಅರೆಂದೂರಿನಿಂದ ನಲ್ಲಿಯ ಮೂಲಕ ನೀರು ನೀಡಲಾಗುವುದು. ಜನರು ಗಾಬರಿಯಾಗಬೇಕಾಗಿಲ್ಲ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ