ಆ್ಯಪ್ನಗರ

ವಿದ್ಯಾರ್ಥಿಗಳನ್ನು ಏಕೆ ಹತ್ತಿಸಿಕೊಳ್ಳುತ್ತಿಲ್ಲ?

ಸಿದ್ದಾಪುರ : ತಾಲೂಕಿನಲ್ಲಿಸಾರಿಗೆ ಸಮಸ್ಯೆ ಹದಗೆಟ್ಟಿದೆ. ವಿದ್ಯಾರ್ಥಿಗಳು ಕಾಲೇಜ್‌ಗೆ ಹೋಗಲು ನಿಗದಿತ ಸಮಯಕ್ಕೆ ಬಸ್‌ ಬಿಡುತ್ತಿಲ್ಲ. ಚಾಲಕ-ನಿರ್ವಾಹಕರು ವಿದ್ಯಾರ್ಥಿಗಳ ಜತೆ ಅನುಚಿತವಾಗಿ ಏಕೆ ವರ್ತಿಸುತ್ತಿದ್ದೀರಿ ಎಂದು ತಾಲೂಕ ಪಂಚಾಯಿತಿ ಅಧ್ಯಕ್ಷ ಸುಧೀರ್‌ ಗೌಡರ್‌ ಪ್ರಶ್ನಿಸಿದರು.

Vijaya Karnataka 22 Sep 2019, 5:00 am
ಸಿದ್ದಾಪುರ : ತಾಲೂಕಿನಲ್ಲಿಸಾರಿಗೆ ಸಮಸ್ಯೆ ಹದಗೆಟ್ಟಿದೆ. ವಿದ್ಯಾರ್ಥಿಗಳು ಕಾಲೇಜ್‌ಗೆ ಹೋಗಲು ನಿಗದಿತ ಸಮಯಕ್ಕೆ ಬಸ್‌ ಬಿಡುತ್ತಿಲ್ಲ. ಚಾಲಕ-ನಿರ್ವಾಹಕರು ವಿದ್ಯಾರ್ಥಿಗಳ ಜತೆ ಅನುಚಿತವಾಗಿ ಏಕೆ ವರ್ತಿಸುತ್ತಿದ್ದೀರಿ ಎಂದು ತಾಲೂಕ ಪಂಚಾಯಿತಿ ಅಧ್ಯಕ್ಷ ಸುಧೀರ್‌ ಗೌಡರ್‌ ಪ್ರಶ್ನಿಸಿದರು.
Vijaya Karnataka Web why are students not boarding
ವಿದ್ಯಾರ್ಥಿಗಳನ್ನು ಏಕೆ ಹತ್ತಿಸಿಕೊಳ್ಳುತ್ತಿಲ್ಲ?


ತಾಲೂಕಿನಲ್ಲಿಸಾರಿಗೆ ಇಲಾಖೆಯವರು ಬಸ್‌ನ್ನು ಸರಿಯಾಗಿ ಬಿಡುತ್ತಿಲ್ಲ, ಇರುವ ಮಾರ್ಗವನ್ನು ನಿಲ್ಲಿಸುತ್ತಾರೆ, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ, ಕೂಡಲೇ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿ ಕೊಡಬೇಕು ಎಂದು ವಿದ್ಯಾರ್ಥಿಗಳು ಕಳೆದ ವಾರ ನಡೆದ ಕೆಡಿಪಿ ಸಭೆಗೆ ಆಗಮಿಸಿ ಆಗ್ರಹಿಸಿದ್ದರು.

ಇದಕ್ಕೆ ಕೂಡಲೇ ಸ್ಪಂದಿಸಿದ ತಾ.ಪಂ. ಅಧ್ಯಕ್ಷ ಸುಧೀರ್‌ ಗೌಡರ್‌ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿ ಮಾತನಾಡಿದರು.

ತಾಲೂಕಿನಲ್ಲಿ3400 ವಿದ್ಯಾರ್ಥಿ ಪಾಸ್‌ ವಿತರಣೆ ಮಾಡಿದ್ದು, 26.96 ಲಕ್ಷ ರೂ.ಗಳನ್ನು ವಿದ್ಯಾರ್ಥಿಗಳು ಇಲಾಖೆಗೆ ನೀಡಿದ್ದಾರೆ. ನೀವು ಅವರನ್ನು ಏಕೆ ಉಚಿತವಾಗಿ ಕರೆದುಕೊಂಡು ಹೋಗುತ್ತಿಲ್ಲಎಂದು ಪ್ರಶ್ನಿಸಿದರು.

ಸರಕಾರಿ ಪದವಿ ಕಾಲೇಜ್‌, ನಾಣಿಕಟ್ಟಾ ಪದವಿ ಪೂರ್ವ ಕಾಲೇಜ್‌, ಹಲಗೇರಿ ಪದವಿ ಪೂರ್ವ ಕಾಲೇಜ್‌ ಡಿಪೊ್ಲಮಾ ಕಾಲೇಜ್‌ನ ವಿದ್ಯಾರ್ಥಿಗಳು, ಸಾರ್ವಜನಿಕರು ಸಭೆಗೆ ಆಗಮಿಸಿ ತಮ್ಮ ಸಮಸ್ಯೆ ಹೇಳಿದರು.

ಸರಕಾರಿ ಪದವಿ ಕಾಲೇಜ್‌ ವಿದ್ಯಾರ್ಥಿ ಸಂತೋಷ ಮಾತನಾಡಿ, ಎರಡು ವರ್ಷದಿಂದ ವಿದ್ಯಾಭ್ಯಾಸಕ್ಕಾಗಿ ಕಷ್ಟಪಡುವುದು ಬಿಟ್ಟು ಬಸ್‌ಗಾಗಿ ಕಷ್ಟಪಡುತ್ತಿದ್ದೇವೆ. ಹಲವಾರು ಬಾರಿ ಮನವಿ ಮಾಡಿದರೂ ಸಾರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ತಹಸೀಲ್ದಾರಗೆ ಫೋನ್‌ ಮಾಡಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲಎಂದರೆ ಸಾರಿಗೆ ಇಲಾಖೆಯ ಅಧಿಕಾರಿಗಳು ಯಾಕೆ ಬೇಕು ಎಂದು ಪ್ರಶ್ನಿಸಿದರು.

ಹರೀಶ ದೇವಾಡಿಗ ಮಾತನಾಡಿ, ಶಿರಸಿ ಕಾಲೇಜ್‌ಗೆ ಹೋಗುವ ನಮಗೆ ಬಸ್‌ ವ್ಯವಸ್ಥೆ ಇಲ್ಲದೇ ಸಮಸ್ಯೆಯಾಗುತ್ತದೆ. ಬಸ್‌ ಬಗ್ಗೆ ವಿಚಾರಿಸಲು ನಿಯಂತ್ರಣ ವಿಭಾಗಕ್ಕೆ ಹೋದರೆ ಮೊದಲು ಗುಂಡಿ ಮುಚ್ಚಿಸಿ ಆಮೇಲೆ ಬಸ್‌ ಬಿಡುತ್ತೇವೆ ಎನ್ನುತ್ತಾರೆ ಇವೆಲ್ಲವಿದ್ಯಾರ್ಥಿಗಳ ಸಮಸ್ಯೆಯೇ? ಎಂದು ಪ್ರಶ್ನಿಸಿದರು.

ಬಸ್‌ಗಳ ಕೊರತೆ : ನಂತರ ಮಾತನಾಡಿದ ಸಾರಿಗೆ ಇಲಾಖೆಯ ಡಿಟಿಓ, ಸುರೇಶ ನಾಯ್ಕ, ಉತ್ತರ ಕರ್ನಾಟಕದ ನಿರ್ವಾಹಕ-ಚಾಲಕರು ರಜೆಯ ಮೇಲೆ ಹೋಗಿದ್ದಾರೆ ಇದರಿಂದ ಬಸ್‌ ಮಾರ್ಗದಲ್ಲಿಸರಿಯಾಗಿ ಬಿಡಲು ಆಗುತ್ತಿಲ್ಲ. ಕೆಲವು ವ್ಯತ್ಯಾಸಗಳು ಆಗುತ್ತಿವೆ. ಹೊಸ ಮಾರ್ಗಕ್ಕೆ ಬಸ್‌ ನೀಡಲು ಬಸ್‌ಗಳ ಕೊರತೆ ಇದೆ. ಇರುವ ಬಸ್‌ಗಳನ್ನು ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ರೀತಿಯಲ್ಲಿಬಿಡುವ ವ್ಯವಸ್ಥೆ ಮಾಡಿಕೊಡುತ್ತೇವೆ. ಹೊಸ ಮಾರ್ಗಗಳಿಗೆ ಸದ್ಯಕ್ಕೆ ಬಸ್‌ ನೀಡಲು ಆಗುವುದಿಲ್ಲ. ಡಿಪೋ ಆದರೆ ಬಸ್‌ ವ್ಯವಸ್ಥೆ ಕಲ್ಪಿಸಲು ಸಾಧ್ಯ ಎಂದು ಹೇಳಿದರು.

ಜಿಪಂ ಸದಸ್ಯ ಎಂ.ಜಿ.ಹೆಗಡೆ ಗೆಜ್ಜೆ,ತಾಪಮ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ,ಸದಸ್ಯರಾದ ವಿವೇಕ ಭಟ್ಟ,ರಘುಪತಿ ಹೆಗಡೆ ವಾಜಗೋಡ ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ ನಾಯ್ಕ, ಕೋಲಸಿರ್ಸಿ ಗ್ರಾಪಂ ಉಪಾಧ್ಯಕ್ಷ ವಿನಾಯಕ ಡಿಪೋ ಮ್ಯಾನೇಜರ್‌ ರವೀಂದ್ರ ಮುಂತಾದವರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ