ಆ್ಯಪ್ನಗರ

ಮಹಿಳಾ ಕಾಂಗ್ರೆಸ್‌ ಅಡಿಪಾಯ ದಿನಾಚರಣೆ

ಅಂಕೋಲಾ : ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ 36ನೇ ವರ್ಷದ ಅಡಿಪಾಯದ ದಿನವನ್ನು ಆಚರಿಸಿಕೊಳ್ಳುತ್ತಿರುವ ಶುಭ ಸಂದರ್ಭದಲ್ಲಿನಾವೆಲ್ಲಜೊತೆಯಾಗಿದ್ದೇವೆ ಎಂದು ಜಿಲ್ಲಾಕಾಂಗ್ರೆಸ್‌ ಮಹಿಳಾಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.

Vijaya Karnataka 16 Sep 2019, 5:00 am
ಅಂಕೋಲಾ : ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ 36ನೇ ವರ್ಷದ ಅಡಿಪಾಯದ ದಿನವನ್ನು ಆಚರಿಸಿಕೊಳ್ಳುತ್ತಿರುವ ಶುಭ ಸಂದರ್ಭದಲ್ಲಿನಾವೆಲ್ಲಜೊತೆಯಾಗಿದ್ದೇವೆ ಎಂದು ಜಿಲ್ಲಾಕಾಂಗ್ರೆಸ್‌ ಮಹಿಳಾಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.
Vijaya Karnataka Web womens congress foundation day
ಮಹಿಳಾ ಕಾಂಗ್ರೆಸ್‌ ಅಡಿಪಾಯ ದಿನಾಚರಣೆ


ಪಟ್ಟಣದ ಬ್ಲಾಕ್‌ ಕಾಂಗ್ರೆಸ್ಸಿನ ಕಾರ್ಯಾಲಯದಲ್ಲಿಭಾನುವಾರ ಹಮ್ಮಿಕೊಂಡ ಮಹಿಳಾ ಕಾಂಗ್ರೆಸ್ಸಿನ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಅಖಿಲ ಭಾರತ ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷೆ ಸುಶ್ಮೀತಾ ದೇವರ ಅವರ ಆದೇಶದಂತೆ ಇಂದು ಎಲ್ಲಮಹಿಳೆಯರು ಸೇರಿ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿದ್ದೇವೆ ಎಂದರು.

1983 ರಲ್ಲಿಯ ಸಮಾವೇಶದಲ್ಲಿಕಾಂಗ್ರೆಸ್‌ ಮಹಿಳಾ ಘಟಕವನ್ನು ಸ್ವಾಯತ್ತ ಮುಂಭಾಗದ ಸಂಘಟನೆಯಾಗಿ ಸಾಂವಿಧಾನಿಕವಾಗಿ ಪರಿವರ್ತಿಸಲು ತೀರ್ಮಾನಿಸಿ ಅಂಗೀಕರಿಸಿದ ಪರಿಣಾಮವಾಗಿ ಮಹಿಳೆಯರಿಗೆ ಕಾಂಗ್ರೆಸ್‌್ಸ ಪಕ್ಷ ಅಧಿಕಾರವನ್ನು ನೀಡಿದೆ ಎಂದರು. ಪ್ರಿಯದರ್ಶಿನಿ ಮಹಿಳಾ ಕಾಂಗ್ರೆಸ್ಸಿನ ತಾಲೂಕಾಧ್ಯಕ್ಷೆ ಜಯಲಕ್ಷಿತ್ರ್ಮೕ ಮಡಿವಾಳ, ಹೊನ್ನೆಬೈಲ್‌ ಗ್ರಾಪಂ ಅಧ್ಯಕ್ಷೆ ಲೀಲಾವತಿ ನಾಯ್ಕ, ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಮಂಜುನಾಥ ನಾಯ್ಕ, ಪುರಸಭೆಯ ಸದಸ್ಯರಾದ ಜೈರಾಬಿ ಬೆಂಗ್ರೆ, ನಿರ್ಮಲಾ ಹುಲಸ್ವಾರ, ಮಾಜಿ ಅಧ್ಯಕ್ಷೆ ಅಂಜಲಿ ಐಗಳ, ಮಾಜಿ ಸದಸ್ಯೆ ಸೀಮಾ ಬಂಟ, ಪ್ರಮುಖರಾದ ಜೀವಿತಾ ಗಾಂವಕರ, ಸುನೀತಾ ನಾಯ್ಕ, ದೀಪಾಲಿ ನಾಯ್ಕ, ಗ್ರಾಪಂ ಸದಸ್ಯೆ ಸವಿತಾ ನಾಯ್ಕ, ಬೇಬಿ ನಾಯ್ಕ, ಕುಸುಮಾ ನಾಯ್ಕ, ಮಂಜುಳಾ ವೇರ್ಣೆಕರ, ಯುವ ಕಾಂಗ್ರೆಸ್ಸ ತಾಲೂಕಾಧ್ಯಕ್ಷ ಮಂಜುನಾಥ ನಾಯ್ಕ ಉಪಸ್ಥಿತರಿದ್ದರು. ತಾಪಂ ಉಪಾಧ್ಯಕ್ಷೆ ತುಳಸಿ ಗೌಡ ಸ್ವಾಗತಿಸಿದರು, ತಾಪಂ ಸದಸ್ಯೆ ಶಾಂತಿ ಆಗೇರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ