ಆ್ಯಪ್ನಗರ

ವಾದಿರಾಜ ಮಠದಲ್ಲಿ ಶ್ರೀವಿಶ್ವಾಧೀಶ ತೀರ್ಥರ ಆರಾಧನೆ

ಶಿರಸಿ: ಆಷಾಢ ಬಹುಳ ಅಮಾವಾಸ್ಯೆ ಸೋಮವಾರ ಸೋದೆ ವಾದಿರಾಜ ಮಠದಲ್ಲಿಶ್ರೀವಿಶ್ವಾಧೀಶ ತೀರ್ಥರ ಆರಾಧನಾ ಅಂಗವಾಗಿ ಅವರ ಮೃತ್ತಿಕಾ ವೃಂದಾವನ ಸನ್ನಿಧಿಯಲ್ಲಿವಿಶೇಷ ಪೂಜೆ ನಡೆಯಿತು.

Vijaya Karnataka 21 Jul 2020, 5:00 am
ಶಿರಸಿ: ಆಷಾಢ ಬಹುಳ ಅಮಾವಾಸ್ಯೆ ಸೋಮವಾರ ಸೋದೆ ವಾದಿರಾಜ ಮಠದಲ್ಲಿಶ್ರೀವಿಶ್ವಾಧೀಶ ತೀರ್ಥರ ಆರಾಧನಾ ಅಂಗವಾಗಿ ಅವರ ಮೃತ್ತಿಕಾ ವೃಂದಾವನ ಸನ್ನಿಧಿಯಲ್ಲಿವಿಶೇಷ ಪೂಜೆ ನಡೆಯಿತು.
Vijaya Karnataka Web 20SRS7A_26
ವಾದಿರಾಜ ಮಠದಲ್ಲಿಶ್ರೀವಿಶ್ವಾಧೀಶ ತೀರ್ಥರ ಆರಾಧನಾ ಅಂಗವಾಗಿ ಅವರ ಮೃತ್ತಿಕಾ ವೃಂದಾವನ ಸನ್ನಿಧಿಯಲ್ಲಿ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಪೂಜೆ ಕೈಗೊಂಡರು.


ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಹಾಗೂ ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥ ಶ್ರೀಪಾದಂಗಳವರು ವಿಶೇಷ ಪೂಜೆ ಸಲ್ಲಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿವಿದ್ವಾಂಸರಾದ ಶ್ರೀ ವಾದಿರಾಜ ಜಮಖಂಡಿ ವೃಂದಾವನಾಚಾರ್ಯರ ಜೀವನ ಚರಿತೆ ಕುರಿತು ಉಪನ್ಯಾಸ ನೀಡಿದರು.

ಉಭಯ ಶ್ರೀಪಾದಂಗಳವರು ಆರಾಧನಾ ಸಂದೇಶ ನೀಡಿದರು. ವಾದಿರಾಜ ಮಠದ ಪರಂಪರೆಯಲ್ಲಿತಪಸ್ವೀ ಯತಿಗಳಾದ ವೃಂದಾವನಾಚಾರ್ಯರೆಂದೇ ಪ್ರಸಿದ್ಧರಾದ ಶ್ರೀ ವಿಶ್ವಪ್ರಿಯ ತೀರ್ಥರ ಹಾಗೂ ಅವರ ಶಿಷ್ಯ ಶ್ರೀ ವಿಶ್ವಾಧೀಶ ತೀರ್ಥರು ವಿಕ್ಟೋರಿಯಾ ರಾಣಿಯಿಂದ ಪುರಸ್ಕೃತರಾಗಿದ್ದರು ಎಂಬುದನ್ನು ಈ ಸಂದರ್ಭದಲ್ಲಿನೆನಪಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ