ಆ್ಯಪ್ನಗರ

ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಯೋಗ ಪಾಠ

ಶಿರಸಿ: ನಗರದ ಲಯನ್ಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮೂರು ದಿನಗಳ ಕಾಲ ಯೋಗ ಪಾಠ ಮಾಡಲಾಯಿತು.

Vijaya Karnataka 16 Jul 2019, 5:00 am
ಶಿರಸಿ: ನಗರದ ಲಯನ್ಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮೂರು ದಿನಗಳ ಕಾಲ ಯೋಗ ಪಾಠ ಮಾಡಲಾಯಿತು.
Vijaya Karnataka Web SRS-15SRS6


ಯೋಗ ಗುರು ಕುಂದಾಪುರದ ಶಂಕರನಾರಾಯಣ ಶಾಸ್ತ್ರಿ ಜ್ಞಾಪಕ ಶಕ್ತಿ ವೃದ್ಧಿ, ಚಾರಿತ್ರ ಪಾಲನೆಗೆ ಅನುಕೂಲವಾಗುವ ಯೋಗಾಸನ ಪಾಠ ಪ್ರಾತ್ಯಕ್ಷಿಕೆಯ ಮೂಲಕ ಕಲಿಸಿದರು. ಉದರವನ್ನು ನೀರಿನಿಂದಲು, ಪುಪ್ಪುಸವನ್ನು ಪ್ರಾಣಾಯಾಮಾಧಿ ಕ್ರೀಯೆಯಿಂದ, ಮೆದುಳನ್ನು ಹೆಚ್ಚಿನ ಆಮ್ಲಜನಕ ಸಿಗುವಂತೆ ಯೋಗ ಮಾರ್ಗದಿಂದ ಶುದ್ಧಗೊಳಿಸಿ ಹೆಚ್ಚೆಚ್ಚು ಶುದ್ಧ ಪ್ರಾಣವಾಯು ದೇಹಕ್ಕೆ ನೀಡಿ ಜ್ಞಾಪಕಶಕ್ತಿ, ಆರೋಗ್ಯ, ಕ್ರೀಯಾಶೀಲತೆ ವೃದ್ಧಿಸಿಕೊಳ್ಳಬೇಕು. ಇದರಿಂದ ಹೆಚ್ಚಿನ ಅಂಕ ಪಡೆಯಲು ಸಾಧ್ಯವಿದೆ ಎಂದರು. ಏಕಾಗ್ರತೆಯ ಸೂತ್ರ ತಿಳಿಸಿ ವಿದ್ಯಾರ್ಥಿಗಳ ಮನಗೆದ್ದರು. ಸಂಸ್ಥೆಯ ಕಾರ್ಯದರ್ಶಿ ಎಂ.ಎಂ.ಭಟ್ಟ ಕಾರೇಕೊಪ್ಪ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯಾಧ್ಯಾಪಕ ಮೋಹನ ಹೆಗಡೆ, ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕ ಗಣಪತಿ ಗೌಡ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ