ಆ್ಯಪ್ನಗರ

ಚುನಾವಣಾ ಕ್ಲಬ್‌ಗಳ ರಚನೆಗೆ ಜಿಪಂ ಸಿಇಒ ಸೂಚನೆ

ಕಾರವಾರ :ಲೋಕಸಭಾ ಚುನಾವಣೆಗೆ ಯಾವೊಬ್ಬ ಮತದಾರರೂ ಮತದಾನ ಪ್ರಕ್ರಿಯೆಯಿಂದ ದೂರವಾಗಬಾರದೆಂಬುದು ಚುನಾವಣಾ ಆಯೋಗದ ಬಹು ಮುಖ್ಯ ಆಶಯ. ಈ ಹಿನ್ನೆಲೆಯಲ್ಲಿ ಮತಗಟ್ಟೆ ಮಟ್ಟದಲ್ಲಿ ಬಿಎಲ್‌ಒಗಳ ಮೂಲಕ ಚುನಾವಣಾ ಜಾಗೃತಿ ಕ್ಲಬ್‌ಗಳನ್ನು ರಚಿಸುವಂತೆ ಜಿ.ಪಂ. ಸಿಇಒ ಎಂ.ರೋಷನ್‌ ಸೂಚಿಸಿದ್ದಾರೆ.

Vijaya Karnataka 28 Feb 2019, 5:00 am
ಕಾರವಾರ :ಲೋಕಸಭಾ ಚುನಾವಣೆಗೆ ಯಾವೊಬ್ಬ ಮತದಾರರೂ ಮತದಾನ ಪ್ರಕ್ರಿಯೆಯಿಂದ ದೂರವಾಗಬಾರದೆಂಬುದು ಚುನಾವಣಾ ಆಯೋಗದ ಬಹು ಮುಖ್ಯ ಆಶಯ. ಈ ಹಿನ್ನೆಲೆಯಲ್ಲಿ ಮತಗಟ್ಟೆ ಮಟ್ಟದಲ್ಲಿ ಬಿಎಲ್‌ಒಗಳ ಮೂಲಕ ಚುನಾವಣಾ ಜಾಗೃತಿ ಕ್ಲಬ್‌ಗಳನ್ನು ರಚಿಸುವಂತೆ ಜಿ.ಪಂ. ಸಿಇಒ ಎಂ.ರೋಷನ್‌ ಸೂಚಿಸಿದ್ದಾರೆ.
Vijaya Karnataka Web zp ceo is instrumental in creating election clubs
ಚುನಾವಣಾ ಕ್ಲಬ್‌ಗಳ ರಚನೆಗೆ ಜಿಪಂ ಸಿಇಒ ಸೂಚನೆ

ವ್ಯವಸ್ಥಿತ ಶಿಕ್ಷ ಣ ಪದ್ಧತಿಯಿಂದ ಹೊರಗಿರುವ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದೇ ಇರುವವರನ್ನು ಗುರುತಿಸಲು ತಹಸೀಲ್ದಾರರು, ಕ್ಷೇತ್ರ ಶಿಕ್ಷ ಣಾಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಸಹಕಾರದೊಂದಿಗೆ ಬಿ.ಎಲ್‌.ಒ.ಗಳ ಮೂಲಕ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘ, ಯುವಕ ಸಂಘ ಸದ್ಯಸರು ಮತ್ತು ಹಿರಿಯ ನಾಗರಿಕರನ್ನು ಒಳಗೊಂಡ ಚುನಾವಣಾ ಜಾಗೃತಿ ಕ್ಲಬ್‌ಗಳನ್ನು ರಚಿಸಲು ಅವರು ತಿಳಿಸಿದ್ದಾರೆ.

ಮತದಾನಕ್ಕೆ ಅರ್ಹರಿದ್ದು ಆದರೆ ಮತದಾರರ ಪಟ್ಟಿಯಲ್ಲಿ ಇಲ್ಲದಿರುವ ಮತದಾರರನ್ನು ಗುರುತಿಸಿ ಅವರ ಹೆಸರುಗಳನ್ನು ನೋಂದಾಯಿಸಿ ಮತದಾನಕ್ಕೆ ಪ್ರೇರೇಪಣೆ ಕೈಗೊಳ್ಳಲು ಚುನಾವಣಾ ಜಾಗೃತಿ ಕ್ಲಬ್‌ಗಳನ್ನು ಸಿದ್ದಗೊಳಿಸಲು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ