ಆ್ಯಪ್ನಗರ

ಕುಡಿವ ನೀರಿಗೆ ಬೀದಿಗಿಳಿದ ಮಹಿಳೆಯರು

ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಮಹಿಳೆಯರು ಹಾಗೂ ಜೈ ಕರ್ನಾಟಕ ಕಾರ್ಯಕರ್ತರು ಕುಡಿವ ನೀರಿಗಾಗಿ ಖಾಲಿ ಕೊಡ ತೋರಿಸಿ, ಎರಡು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ-13ನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ವಿಕ ಸುದ್ದಿಲೋಕ 5 Apr 2016, 6:08 pm
ಹೊರ್ತಿ(ವಿಜಯಪುರ): ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಮಹಿಳೆಯರು ಹಾಗೂ ಜೈ ಕರ್ನಾಟಕ ಕಾರ್ಯಕರ್ತರು ಕುಡಿವ ನೀರಿಗಾಗಿ ಖಾಲಿ ಕೊಡ ತೋರಿಸಿ, ಎರಡು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ-13ನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
Vijaya Karnataka Web
ಕುಡಿವ ನೀರಿಗೆ ಬೀದಿಗಿಳಿದ ಮಹಿಳೆಯರು


ಜ್ಯೋತಿ ರೂಗಿ ಹಾಗೂ ಸುವರ್ಣಾ ರೂಗಿ, ಅಂದಾಜು 20 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಕೇವಲ 15 ಟ್ಯಾಂಕರ್ ನೀರು ಪೂರೈಕೆ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ನಿತ್ಯ ಕೇವಲ 5 ಲೀಟರ್ ನೀರು ಪ್ರತಿಯೊಬ್ಬರಿಗೂ ಸಿಗುತ್ತಿಲ್ಲ. ಒಂದು ವಾರ್ಡ್‌ಗೆ ಒಂದು ಟ್ಯಾಂಕರ್ ನೀರು ಪೂರೈಕೆ ಮಾಡುತ್ತಿದ್ದಾರೆ. 15 ಟ್ಯಾಂಕರ್‌ನಿಂದ ನಿತ್ಯ 3 ಬಾರಿ ನೀರು ಪೂರೈಕೆ ಮಾಡುವ ಆದೇಶವಿದ್ದರೂ ನೀರು ಮಾತ್ರ ಪೂರೈಕೆಯಾಗುತ್ತಿಲ್ಲ. ಕುಡಿವ ನೀರಿಗಾಗಿ ಕಿ.ಮೀ.ಗಟ್ಟಲೆ ಅಲೆದಾಡಿದರೂ ಶುದ್ಧ ನೀರು ಸಿಗದೆ ಕಲುಷಿತ ನೀರು ಸಿಗುತ್ತಿದೆ ಎಂದು ಹೇಳಿದರು.

ಕೂಡಲೇ ಗ್ರಾಮಕ್ಕೆ ಸಮರ್ಪಕ ನೀರು ಪೂರೈಕೆ ಮಾಡುವಂತೆ ಶಾಸಕರಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನೆಯಾಗಿಲ್ಲ ಎಂದು ಅರೋಪಿಸಿದ ಅವರು, ಉಗ್ರ ಹೋರಾಟ ಮಾಡುವ ಎಚ್ಚರಿಕೆಯೂ ನೀಡಿದರು.

ಜೈ ಕರ್ನಾಟಕ ಸಂಘದ ಅಧ್ಯಕ್ಷ ಮಂಜುನಾಥ ರೂಗಿ, ಟ್ಯಾಂಕರ್ ಮೂಲಕ ನೀರು ಸರಿಯಾಗಿ ಪೂರೈಕೆ ಮಾಡುತ್ತಿಲ್ಲ. ನೀರಿಗೆ ಅಲೆದಾಡಿದರೂ ಕುಡಿಯಲು ಯ್ಯೋಗ್ಯವಲ್ಲದ ನೀರು ದೊರೆಯುತ್ತಿದೆ. ಜನರಿಗೇ ನೀರು ಸಿಗುತ್ತಿಲ್ಲ, ಇನ್ನು ಜಾನುವಾರಗಳ ಗೋಳು ಹೇಳತೀರದಾಗಿದೆ. ನೀರು ಹಾಗೂ ಮೇವಿನ ಕೊರತೆಯಿಂದ ರೈತರು ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ. ಕುಡಿವ ನೀರಿಗೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನೆಯಾಗಿಲ್ಲ. ಜನಪ್ರತಿನಿಗಳು ಕೆಲಸ ಮಾಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ನಂತರ ರಸ್ತೆ ಸಂಚಾರ ತಡೆ ಮಾಡುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ಪೊಲೀಸರು ಮನವರಿಕೆ ಮಾಡಿದಾಗ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಗ್ರಾಮ ಪಂಚಾಯಿತಿ ಎದುರು ಸ್ಥಳಾಂತರ ಮಾಡಿ, ನೀರು ಕೊಡಿ ಇಲ್ಲವೇ ರಾಜೀನಾಮೆ ನೀಡಿ ಎಂದು ಕೂಗುತ್ತಾ ಅರ್ಧ ಗಂಟೆಗೂ ಅಕ ಕಾಲ ಪ್ರತಿಭಟನೆ ಮಾಡಿದರು.

ಮನವಿ ಸ್ವೀಕರಿಸಿದ ಪಿಡಿಒ ಎಸ್.ಆರ್.ಖಡೇಕರ್, ಸಮರ್ಪಕವಾಗಿ ಕುಡಿವ ನೀರು ಪೂರೈಕೆ ಮಾಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಪ್ರತಿಭಟನೆಯಲ್ಲಿ ಮಹಾದೇವ ಜಂಗಮಶೆಟ್ಟಿ, ಶೋಭಾ ಪೂಜಾರಿ, ಪ್ರೇಮಾ ಮಕಣಿ, ರಾಜಶ್ರೀ ಗುಮಡಗೌಡಿ, ಲಯವ್ವಾ ತೇಲಿ, ಚಾಂದಸಾಬ್ ಮುಲ್ಲಾ, ಗುರುರಾಜ ಡೊಳ್ಳಿ, ಮಂಜುನಾಥ ರೂಗಿ ಹಾಗೂ ನೂರಾರು ಮಹಿಳೆಯರು, ಜೈ ಕರ್ನಾಟಕ ಸಂಘದ ಕಾರ್ಯಕರ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ