Please enable javascript.ಹಾವುಗಳ ಹಿಡಿದು ಪ್ರದರ್ಶಿಸಿದ ಸರ್ಪಮಿತ್ರ - ಹಾವುಗಳ ಹಿಡಿದು ಪ್ರದರ್ಶಿಸಿದ ಸರ್ಪಮಿತ್ರ - Vijay Karnataka

ಹಾವುಗಳ ಹಿಡಿದು ಪ್ರದರ್ಶಿಸಿದ ಸರ್ಪಮಿತ್ರ

Vijaya Karnataka Web 7 Jun 2014, 4:15 pm
Subscribe

ಗ್ರಾಮದ ಹೊರವಲಯದಲ್ಲಿರುವ ಮನೆಯೊಂದರಲ್ಲಿ ಕಾಣಿಸಿಕೊಂಡಿದ್ದ ಎರಡು ಹಾವುಗಳನ್ನು ಸರ್ಪಮಿತ್ರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹಾವುಗಳ ಹಿಡಿದು ಪ್ರದರ್ಶಿಸಿದ ಸರ್ಪಮಿತ್ರ
ದೇವಣಗಾಂವ: ಗ್ರಾಮದ ಹೊರವಲಯದಲ್ಲಿರುವ ಮನೆಯೊಂದರಲ್ಲಿ ಕಾಣಿಸಿಕೊಂಡಿದ್ದ ಎರಡು ಹಾವುಗಳನ್ನು ಸರ್ಪಮಿತ್ರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮದ ಅಣವೀರಪ್ಪ ಖೇಳಗಿ ಅವರ ಜಮೀನೀನಲ್ಲಿ ಇರುವ ಮನೆಯಲ್ಲಿ ಎರಡು ಹಾವುಗಳು ಸೇರಿಕೊಂಡಿದ್ದವು. ತಕ್ಷಣ ಆಲಮೇಲದ ಸರ್ಪಮಿತ್ರ ಇರ್ಫಾನ್ ಜಮಾದಾರ ಅವರಿಗೆ ಕರೆ ಮಾಡಿದ ತಕ್ಷಣ 15 ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸಿದ ಅವರು ಸುಮಾರು 8 ಅಡಿ
ಉದ್ದದ ದಾಮಿನಿ(ದಾಮಣಿ) ಹಾವುಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮಸ್ಥರಿಗೆ ಹಾವುಗಳನ್ನು ಪ್ರದರ್ಶಿಸಿ ನಂತರ ನಿರ್ಜನ ಪ್ರದೇಶಕ್ಕೆ ಒಯ್ದು ಬಿಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಎಲ್ಲ ಹಾವುಗಳು ವಿಷಕಾರಿ ಅಲ್ಲ. ಹಾವು ಕಡಿದಾಗ ಓಡಿ ಹೋಗುವುದು, ಗಾಬರಿಗೊಳಗಾಗುವುದು ಮಾಡಬಾರದು. ಹಾವು ಕಡಿದ ಸ್ಥಳದ ಮೇಲ್ಬಾಗದಲ್ಲಿ ದಾರದಿಂದ ಬಿಗಿಯಾಗಿ ಕಟ್ಟಿ ರಕ್ತ ಪರಿಚಲನೆಯಾಗದಂತೆ ತಡೆದು
ಆಸ್ಪತ್ರೆಗೆ ಹೋಗಬೇಕು. ಆಲಮೇಲದ ಡಾ. ಇಂದುಮತಿ ಪಾಟೀಲ ಸರ್ಪಪ್ರತಿಷ್ಠಾನ(ರಿ) ಕಳೆದ 10 ವರ್ಷಗಳಿಂದ ಹಾವು ಕಡಿದವರಿಗೆ ಉಪಚಾರ ನೀಡುತ್ತಿದ್ದು, ಸರ್ಪಪ್ರದರ್ಶನ ಏರ್ಪಡಿಸಿ ಜನರಲ್ಲಿನ ಭಯ ಆತಂಕ ನಿವಾರಿಸಿ ಹಾವು ಕಡಿಸಿಕೊಂಡವರಿಗೆ
ಉಪಚಾರಿಸುತ್ತಿದೆ. ಇಂಥ ಹಾವುಗಳು ಬಂದಾಗ ಸುತ್ತಲಿನ ಗ್ರಾಮಗಳ ಜನ ತಮ್ಮನ್ನು ಸಂಪರ್ಕಿಸಿ ಹಾವುಗಳನ್ನು ಕೊಲ್ಲಬೇಡಿ ಎಂದು ಮನವಿ ಮಾಡಿದರಲ್ಲದೆ. ತಮ್ಮ ದೂರವಾಣಿ ಸಂಖ್ಯೆ 9731895782 ಗೆ ಕರೆ ಮಾಡಿದರೆ ಉಚಿತ ಸೇವೆ ನೀಡಲು ಸರ್ಪಮಿತ್ರ ನಿಮ್ಮ
ಮುಂದೆ ಹಾಜರಾಗುವುದಾಗಿ ಗ್ರಾಮಸ್ಥರಿಗೆ ತಿಳಿಸಿದರು.

ಇನ್ನೂ ಸಾಲುಟಗಿ, ಅಣವೀರಪ್ಪ ಖೇಳಗಿ, ರವಿಗೌಡ ಗಂಗನಳ್ಳಿ, ರಜಾಕ ನಾಗಾವಿ, ಮಲ್ಲಯ್ಯ ಮಠ, ಶರಣಪ್ಪ ಜೋಗೂರ, ಹಣಮಂತ ರಜಪೂತ ಇದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ