Please enable javascript.ಪಠ್ಯ, ಪಠ್ಯೇತರ ಎರಡು ಕಲಿಸಿ - ಪಠ್ಯ, ಪಠ್ಯೇತರ ಎರಡು ಕಲಿಸಿ - Vijay Karnataka

ಪಠ್ಯ, ಪಠ್ಯೇತರ ಎರಡು ಕಲಿಸಿ

Vijaya Karnataka Web 26 Jul 2015, 6:28 pm
Subscribe

ವಿದ್ಯಾರ್ಥಿಗಳಿಗೆ ಪಠ್ಯದ ಜತೆ ಪಠ್ಯೇತರ ವಿಷಯಗಳನ್ನು ಕಲಿಸುವಲ್ಲಿ ಶಿಕ್ಷಕರು ಮುಂದಾಗಬೇಕು. ಎನ್ನೆಸ್ಸೆಸ್ ಸೇರುವುದರಿಂದ ಸಮಾಜಮುಖಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಮಕ್ಕಳ ಸಾಹಿತಿ ಚಂದ್ರಗೌಡ ಕುಲಕರ್ಣಿ ಹೇಳಿದರು.

ಪಠ್ಯ, ಪಠ್ಯೇತರ ಎರಡು ಕಲಿಸಿ
ತಾಳಿಕೋಟೆ: ವಿದ್ಯಾರ್ಥಿಗಳಿಗೆ ಪಠ್ಯದ ಜತೆ ಪಠ್ಯೇತರ ವಿಷಯಗಳನ್ನು ಕಲಿಸುವಲ್ಲಿ ಶಿಕ್ಷಕರು ಮುಂದಾಗಬೇಕು. ಎನ್ನೆಸ್ಸೆಸ್ ಸೇರುವುದರಿಂದ ಸಮಾಜಮುಖಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಮಕ್ಕಳ ಸಾಹಿತಿ ಚಂದ್ರಗೌಡ ಕುಲಕರ್ಣಿ ಹೇಳಿದರು.

ಪಟ್ಟಣದ ಎಸ್‌ಕೆ ಪಪೂ ಕಾಲೇಜ್‌ನಲ್ಲಿ ನಡೆದ ಪ್ರತಿಭಾ ಪುರಸ್ಕಾರ, ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘದ ಹಾಗೂ ಎನ್ನೆಸ್ಸೆಸ್ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿಭೆಗೆ ಪುರಸ್ಕಾರ ಅತ್ಯವಶ್ಯವಾಗಿದೆ. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಮಾಜದಲ್ಲಿನ ಸಂಘ ಸಂಸ್ಥೆಗಳು, ಶಿಕ್ಷಣ ಪ್ರೇಮಿಗಳು ಮತ್ತು ಶಿಕ್ಷಣ ಸಂಘಗಳು ಗುರುತಿಸಿ ಸನ್ಮಾನಿಸಬೇಕು ಎಂದರು.

ಪ್ರಾಚಾರ್ಯ ಬಿ.ಆರ್.ಕುಮಟಗಿ, ಪ್ರಾಧ್ಯಾಪಕ ಕಾರ್ಯದರ್ಶಿ ಕಿಶೋರಕುಮಾರ ಕೆ, ಎನ್ನೆಸ್ಸೆಸ್ ಯೋಜನಾಧಿಕಾರಿ ಜಿ.ಎಸ್.ಜಮ್ಮಲದಿನ್ನಿ, ವಿವಿ ಸಂಘದ ಕಾರ್ಯದರ್ಶಿ ಬಿ.ಎಸ್.ಗಬಸಾವಳಗಿ, ಎಸ್.ಐ.ಗಾಣಗೇರ, ಬಿ.ಎಂ.ನಾಟಿಕರ ಮಾತನಾಡಿದರು.

ಕಾಲೇಜ್ ಅಧ್ಯಕ್ಷ ಶಂಕರಗೌಡ ಹಿಪ್ಪರಗಿ ಕೊಣ್ಣೂರ, ಎಸ್.ಕೆ.ಹೈಸ್ಕೂಲ್ ಅಧ್ಯಕ್ಷ ಕಾಶೀನಾಥ ಸಜ್ಜನ, ದೈಹಿಕ ನಿರ್ದೇಶಕ ಎ.ಬಿ.ಬಿರಾದಾರ, ಪಿ.ಜಿ.ಹೆಗಡೆ, ಅಶ್ವಿನಿ ಜೋಗೂರ, ಎಸ್.ಎಸ್.ನೆಲ್ಲಗಿ, ಐ.ಬೇರಗಿ, ಟಿ.ಕೆ.ಕಾಂಬಳೆ, ಬಸನಗೌಡ ಸುರಪುರ, ಡಾ.ಹಣಮಂತ್ರಾಯಸೇರಿದಂತೆ ಇತರರು ಇದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ