Please enable javascript.ಪಠ್ಯದ ಜತೆ ಪಠ್ಯೇತರ ಚಟುವಟಿಕೆ ಅವಶ್ಯ - ಪಠ್ಯದ ಜತೆ ಪಠ್ಯೇತರ ಚಟುವಟಿಕೆ ಅವಶ್ಯ - Vijay Karnataka

ಪಠ್ಯದ ಜತೆ ಪಠ್ಯೇತರ ಚಟುವಟಿಕೆ ಅವಶ್ಯ

Vijaya Karnataka Web 6 Feb 2016, 7:22 pm
Subscribe

ಪಠ್ಯ ವಿಷಯದ ಜತೆಗೆ ಪಠ್ಯೇತರ ವಿಷಯಗಳು ಪೂರ್ಣವಾಗಿದ್ದಾಗ ಮಾತ್ರ ಉತ್ತಮ ವಿದ್ಯಾರ್ಥಿ ಯಶಸ್ಸು ಕಾಣಲು ಸಾಧ್ಯ ಎಂದು ಸಿಂದಗಿ ಪೋರವಾಲ ಕಾಲೇಜ್‌ನ ದೈಹಿಕ ನಿರ್ದೇಶಕ ರವಿ ಗೋಲಾ ಹೇಳಿದರು.

ಪಠ್ಯದ ಜತೆ ಪಠ್ಯೇತರ ಚಟುವಟಿಕೆ ಅವಶ್ಯ
ತಾಳಿಕೋಟೆ: ಪಠ್ಯ ವಿಷಯದ ಜತೆಗೆ ಪಠ್ಯೇತರ ವಿಷಯಗಳು ಪೂರ್ಣವಾಗಿದ್ದಾಗ ಮಾತ್ರ ಉತ್ತಮ ವಿದ್ಯಾರ್ಥಿ ಯಶಸ್ಸು ಕಾಣಲು ಸಾಧ್ಯ ಎಂದು ಸಿಂದಗಿ ಪೋರವಾಲ ಕಾಲೇಜ್‌ನ ದೈಹಿಕ ನಿರ್ದೇಶಕ ರವಿ ಗೋಲಾ ಹೇಳಿದರು. ಪಟ್ಟಣದ ಎಸ್‌ಕೆ ಪದವಿ ಕಾಲೇಜ್‌ನಲ್ಲಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಏಕವಲಯ ಪುರುಷರ ಹ್ಯಾಂಡ್ ಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಬುದ್ಧಿಶಕ್ತಿ ಎಷ್ಟು ಮುಖ್ಯವೋ ಅದರಷ್ಟೇ ದೈಹಿಕ ಶಕ್ತಿಯೂ ಮುಖ್ಯವಾಗಿರುತ್ತದೆ. ಪ್ರತಿಯೊಂದೂ ಪಂದ್ಯದಲ್ಲೂ ಸೋಲು ಗೆಲವು ಕಟ್ಟಿಟ್ಟ ಬುತ್ತಿ. ಸೋತಾಗ ಧೃತಿಗೆಡದೇ ಮುಂದಿನ ಗೆಲುವಿನತ್ತ ಮುನ್ನಗ್ಗಬೇಕು ಎಂದರು. ಕಾಲೇಜ್ ಪ್ರಾಚಾರ್ಯ ಡಾ.ಎಂ.ಎಸ್.ಪಾಟೀಲ, ದೈಹಿಕ ನಿರ್ದೇಶಕ ದಯಾನಂದ ಮೂಗಡ್ಲಿಮಠ, ಕಾಲೇಜ್ ಅಧ್ಯಕ್ಷ ವಿ.ಸಿ.ಹಿರೇಮಠ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಈರಪ್ಪಣ್ಣ ಜಾಲವಾದಿ, ಕಾರ್ಯದರ್ಶಿ ಬಿ.ಎಸ್.ಗಬಸಾವಳಗಿ, ಉಪಾಧ್ಯಕ್ಷ ಎಸ್.ಎ.ಸರೂರ, ಸಂತೋಷ ರಜಪೂಜ, ಸಂತೋಷ ದಂಡ್ಯಗೋಳ, ಪ್ರೊ.ಎ.ಪಿ.ನಾಂದನಿ, ರಮೇಶ ಬಾವೂರ, ಎ.ಎಸ್.ಪೂಜಾರಿ, ಕಾಶಿನಾಥ ಮುರಾಳ, ಪ್ರೊ.ಶಿವನಗೌಡ ನಾಡಗೌಡ್ರ ಮತ್ತಿತರರು ಇದ್ದರು. ಪ್ರೊ.ಫಣಿಬಂದ ಸ್ವಾಗತಿಸಿದರು. ಪ್ರೊ.ಆರ್.ವಿ.ಜಾಲವಾದಿ ವಂದಿಸಿದರು. ಈ ಪಂದ್ಯಾವಳಿಯಲ್ಲಿ ಬಾಗಲಕೋಟೆ, ಸಿಂದಗಿ, ಗುಳೇದಗುಡ್ಡ, ಚಿಕ್ಕೋಡಿ, ಅಥಣಿ, ಹಾರೋಗೇರಿ ಕಾಲೇಜುಗಳ ತಂಡಗಳ ಪಾಲ್ಗೊಂಡಿದ್ದವು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ