ಆ್ಯಪ್ನಗರ

ವಿಜಯಪುರ: ಮತ್ತೆ 80 ಮಂದಿಗೆ ಪಾಸಿಟಿವ್, 976ಕ್ಕೆ ಏರಿದ ಸೋಂಕಿತರ ಸಂಖ್ಯೆ

ಈವರೆಗಿನ 976 ಸೋಂಕಿತರಲ್ಲಿ 654 ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 19 ಮಂದಿ ಮೃತಪಟ್ಟಿದ್ದಾರೆ. 303 ಸಕ್ರಿಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿತನಕ 36,371 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, 32,604 ಜನರ ವರದಿ ನೆಗೆಟಿವ್ ಬಂದಿದೆ.

Vijaya Karnataka Web 15 Jul 2020, 9:13 pm
ವಿಜಯಪುರ: ಜಿಲ್ಲೆಯಲ್ಲಿ ಕೊರೊನಾರ್ಭಟ ಮುಂದುವರಿದಿದ್ದು , ಬುಧವಾರ 80 ಜನರಿಗೆ ಸೋಂಕು ತಗುಲಿದ್ದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 976ಕ್ಕೆ ಏರಿಕೆಯಾಗಿದ್ದು, ಸಾವಿರ ಸಂಖ್ಯೆಗೆ ಸಮೀಪಿಸಿದೆ.
Vijaya Karnataka Web ಕೊರೊನಾ
ಕೊರೊನಾ


ಸೋಂಕಿತರ ಸಂಪರ್ಕ, ಅಂತರ್ ಜಿಲ್ಲಾ ಪ್ರಯಾಣ, ಅನಾರೋಗ್ಯ (ಐಎಲ್) ದಿಂದ 80 ಜನಕ್ಕೆ ಸೋಂಕು ತಗುಲಿದೆ. ಅನೇಕರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ವರದಿಯಾಗಿದೆ.

ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ಸತತವಾಗಿ 80ರ ಆಸುಪಾಸು ಸೋಂಕಿತರು ಪತ್ತೆಯಾಗುತ್ತಿದ್ದು, ರಾಜ್ಯ ಮಟ್ಟದ ಪಟ್ಟಿಯಲ್ಲಿ 10-11ನೇ ಸ್ಥಾನದಲ್ಲಿರುತ್ತಿದ್ದ ವಿಜಯಪುರ ಜಿಲ್ಲೆ ಈಗ 5-6ನೇ ಸ್ಥಾನದಲ್ಲಿರುತ್ತಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ.

ಈವರೆಗಿನ 976 ಸೋಂಕಿತರಲ್ಲಿ 654 ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 19 ಮಂದಿ ಮೃತಪಟ್ಟಿದ್ದಾರೆ. 303 ಸಕ್ರಿಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲ್ಲಿತನಕ 36,371 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, 32,604 ಜನರ ವರದಿ ನೆಗೆಟಿವ್ ಬಂದಿದೆ. 2791 ಜನರ ವರದಿ ಬರಬೇಕಿದೆ. 1369 ಜನ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ