ಆ್ಯಪ್ನಗರ

ಎಸಿಬಿ ಬಲೆಗೆ ತಪಾಸಣೆ ಸಿಬ್ಬಂದಿ

ವಿಜಯಪುರ: ಜಮೀನಿನ ಪಿಟಿ ಶೀಟ್‌ ತಯಾರಿಸಲು 5 ಸಾವಿರ ರೂ.ಗಳ ಲಂಚ ಸ್ವೀಕರಿಸುತ್ತಿದ್ದ ಇಂಡಿ ಎಡಿಎಲ್‌ಆರ್‌ ಕಚೇರಿಯ ತಪಾಸಣಾ ಸಿಬ್ಬಂದಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

Vijaya Karnataka 10 Jan 2019, 5:00 am
ವಿಜಯಪುರ: ಜಮೀನಿನ ಪಿಟಿ ಶೀಟ್‌ ತಯಾರಿಸಲು 5 ಸಾವಿರ ರೂ.ಗಳ ಲಂಚ ಸ್ವೀಕರಿಸುತ್ತಿದ್ದ ಇಂಡಿ ಎಡಿಎಲ್‌ಆರ್‌ ಕಚೇರಿಯ ತಪಾಸಣಾ ಸಿಬ್ಬಂದಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.
Vijaya Karnataka Web acb trap inspection staff
ಎಸಿಬಿ ಬಲೆಗೆ ತಪಾಸಣೆ ಸಿಬ್ಬಂದಿ


ಇಂಡಿ ಎಡಿಎಲ್‌ಆರ್‌ ಕಚೇರಿಯ ತಪಾಸಣಾ ಸಿಬ್ಬಂದಿ ಸದಾಶಿವ ಚಂದ್ರಶೇಖರ ದಾನಪ್ಪಗೋಳ ಎಸಿಬಿ ಬಲೆಗೆ ಬಿದ್ದವರು.

ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಯಶವಂತ ಪೂಜಾರಿ ಇವರು ಚೋರಗಿ ಗ್ರಾಮದ ಸರ್ವೇ ನಂ. 125/1,2,3,4,5 ನೇ ಜಮೀನುಗಳ ಪಿಟಿ ಶೀಟ್‌ನಲ್ಲಿ ಮೀಟರ್‌ ಅಳತೆಯಲ್ಲಿ ತಪ್ಪಾಗಿದ್ದರಿಂದ ಡಿಡಿಎಲ್‌ಆರ್‌ ವಿಜಯಪುರ ಕಚೇರಿಯಲ್ಲಿ ಪೀಟಿ ಶೀಟ್‌ ರದ್ದುಪಡಿಸಿದ್ದರು. ಈ ಸರ್ವೆ ನಂಬರಿನ 5 ಪಟ್ಟಿಯ ಹೊಸದಾಗಿ ಪೀಟಿ ಶೀಟ್‌ ತಯಾರಿಸಲು ಇಂಡಿ ಎಡಿಎಲ್‌ಆರ್‌ ಕಚೇರಿಯ ತಪಾಸಕ ಸದಾಶಿವ ದಾನಪ್ಪಗೋಳ 5 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು.

ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಧಿಕಾರಿಗಳು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ, ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ. ತನಿಖೆ ಮುಂದುವರೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ