ಆ್ಯಪ್ನಗರ

ಎಸಿಬಿ ಬಲೆಗೆ ಕಂದಾಯ ನಿರೀಕ್ಷಕ

ವಿಜಯಪುರ: ಸರಕಾರದಿಂದ ಮಂಜೂರಾಗಿದ್ದ ಪರಿಹಾರ ಧನ ನೀಡಲು 4 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಇಂಡಿ ಕೆಬಿಜೆನ್ನೆಲ್‌ನ ಭೂ ಸ್ವಾಧೀನ ಕಚೇರಿಯ ಕಂದಾಯ ನಿರೀಕ್ಷಕ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Vijaya Karnataka 9 Jan 2020, 5:00 am
ವಿಜಯಪುರ: ಸರಕಾರದಿಂದ ಮಂಜೂರಾಗಿದ್ದ ಪರಿಹಾರ ಧನ ನೀಡಲು 4 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಇಂಡಿ ಕೆಬಿಜೆನ್ನೆಲ್‌ನ ಭೂ ಸ್ವಾಧೀನ ಕಚೇರಿಯ ಕಂದಾಯ ನಿರೀಕ್ಷಕ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Vijaya Karnataka Web acb trap revenue officer
ಎಸಿಬಿ ಬಲೆಗೆ ಕಂದಾಯ ನಿರೀಕ್ಷಕ


ಇಂಡಿ ಪಟ್ಟಣದಲ್ಲಿರುವ ವಿಶೇಷ ಭೂಸ್ವಾಧೀನ ಕಚೇರಿಯ ಬಸವರಾಜ ತೇಲಿ ಎಸಿಬಿ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ. ಸಿಂದಗಿ ತಾಲೂಕಿನ ವರ್ಕಾನಳ್ಳಿ ಗ್ರಾಮದ ಮಹಾಂತೇಶ ಅಗಸರ ಎಂಬುವರ ಜಮೀನಿನಲ್ಲಿಕೆನಾಲ್‌ ನಿರ್ಮಾಣಕ್ಕೆ ಸರಕಾರ ಭೂಸ್ವಾಧೀನ ಮಾಡಿಕೊಂಡಿತ್ತು. ಇದಕ್ಕೆ ಸರಕಾರ ಮಹಾಂತೇಶ ಅಗಸರ ಅವರ ಒಂದೂವರೆ ಎಕರೆ ಜಮೀನಿಗೆ ಪರಿಹಾರವಾಗಿ 2.85 ಲಕ್ಷ ರೂ. ಮಂಜೂರು ಮಾಡಿತ್ತು.

ಮಂಜೂರಾಗಿದ್ದ ಹಣವನ್ನು ರೈತ ಮಹಾಂತೇಶ ಅಗಸರ ಅವರಿಗೆ ನೀಡಲು ಕಂದಾಯ ನಿರೀಕ್ಷಕ ಬಸವರಾಜ ತೇಲಿ 4 ಸಾವಿರ ರೂ. ಲಂಚದ ಬೇಡಿಕೆಯಿಟ್ಟು, ಆ ಮೊತ್ತವನ್ನು ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಪೊಲೀಸರು ಬೀಸಿದ ಬಲೆಗೆ ಬಸವರಾಜ ತೇಲಿ ಬಿದ್ದಿದ್ದಾರೆ. ಆರೋಪಿ ತೇಲಿ ಅವರನ್ನು ಎಸಿಬಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದಾಳಿಯಲ್ಲಿಎಸಿಬಿ ಡಿವೈಎಸ್ಪಿ ವೇಣುಗೋಪಾಲ, ಸಿಪಿಐಗಳಾದ ಶಿವಶಂಕರ ಗಣಾಚಾರಿ, ಸಚಿನ್‌ ಚಲವಾದಿ ಹಾಗೂ ಮೂವರು ಸಿಬ್ಬಂದಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ