ಆ್ಯಪ್ನಗರ

ಆಶಾ ಕಾರ್ಯಕರ್ತೆ ಪುತ್ರಿಗೆ ಥಳಿತ, ಪ್ರಕರಣ ದಾಖಲು

ಹೋಂ ಕ್ವಾರಂಟೈನ್‌ ಸೀಲ್‌ ಹಾಕುವ ವಿಷಯದಲ್ಲಿಆಶಾ ಕಾರ್ಯಕರ್ತೆ ಪುತ್ರಿಗೆ ಹಲ್ಲೆಮಾಡಿದ ವಲಸೆ ವ್ಯಕ್ತಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

Vijaya Karnataka Web 17 Apr 2020, 5:00 am
ನಿಡಗುಂದಿ: ಹೋಂ ಕ್ವಾರಂಟೈನ್‌ ಸೀಲ್‌ ಹಾಕುವ ವಿಷಯದಲ್ಲಿಆಶಾ ಕಾರ್ಯಕರ್ತೆ ಪುತ್ರಿಗೆ ಹಲ್ಲೆಮಾಡಿದ ವಲಸೆ ವ್ಯಕ್ತಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.
Vijaya Karnataka Web asha activists daughter lodged
ಆಶಾ ಕಾರ್ಯಕರ್ತೆ ಪುತ್ರಿಗೆ ಥಳಿತ, ಪ್ರಕರಣ ದಾಖಲು


ತಾಲೂಕಿನ ಅಂಗಡಗೇರಿ ಗ್ರಾಮಕ್ಕೆ ಗುಳೇದಗುಡ್ಡದಿಂದ ಏ.8ರಂದು ವಲಸೆ ಬಂದಿದ್ದ 6 ಜನರಲ್ಲಿಓರ್ವ ಹೋಂ ಕ್ವಾರಂಟೈನ್‌ ಸೀಲ್‌ ಹಾಕಿಸಿಕೊಂಡಿರಲಿಲ್ಲ. ಸೀಲು ಹಾಕಿಕೊಳ್ಳವಂತೆ ಹೇಳಿದ ಆಶಾ ಕಾರ್ಯಕರ್ತೆ ಶಿಲ್ಪಾ ಹೊಸಮನಿ ಸೂಚಿಸಿದಾಗ ವಲಸಿಗ ಕಾರ್ಯಕರ್ತೆಯ ಮಗಳಿಗೆ ಥಳಿಸಿದ್ದಾನೆ. ಕೂಡಗಿ ಎನ್‌ಟಿಪಿಸಿ ಠಾಣೆಯಲ್ಲಿಪ್ರಕರಣ ದಾಖಲಾಗಿದೆ. ಬುಧವಾರ ಬಸವನಬಾಗೇವಾಡಿ ಡಿವೈಎಸ್‌ಪಿ ಈ.ಶಾಂತವೀರ, ಕೂಡಗಿ ಎನ್‌ಟಿಪಿಸಿ ಪಿಎಸೈ ರೇಣುಕಾ ಜಕನೂರ, ವಂದಾಲ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರವಿ ಬಿದ್ನೂರ ಭೇಟಿ ನೀಡಿ ಆಶಾ ಕಾರ್ಯಕರ್ತೆಗೆ ಸಾಂತ್ವನ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ