ಆ್ಯಪ್ನಗರ

ವಿಜಯಪುರ: ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ ಸೋಂಕು

ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ದೃಢಪಟ್ಟ 53 ಸೋಂಕಿತರಲ್ಲಿ 39 ಜನರಿಗೆ ಮಹಾರಾಷ್ಟ್ರ ಸಂಪರ್ಕದಿಂದ ಸೋಂಕು ತಗುಲಿದೆ. 3 ಜನರಿಗೆ ದಿಲ್ಲಿ ಸಂಪರ್ಕದಿಂದ ಸೋಂಕು ತಗುಲಿದ ಬಗ್ಗೆ ಪರಿಶೀಲಿಸಲಾಗುತ್ತಿದೆ

Vijaya Karnataka Web 5 Jun 2020, 10:12 pm
ವಿಜಯಪುರ: ಕಂಟೇನ್ಮೆಂಟ್ ವಲಯದಲ್ಲಿ ಆರೋಗ್ಯ ಸಮೀಕ್ಷೆಯಲ್ಲಿ ತೊಡಗಿದ್ದ ಇಬ್ಬರು ಆಶಾ ಕಾರ್ಯಕರ್ತೆಯರು ಮತ್ತು ಓರ್ವ ಅಂಗನವಾಡಿ ಮೇಲ್ವಿಚಾರಕಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
Vijaya Karnataka Web ಕೊರೊನಾ
ಕೊರೊನಾ


ಹಲವು ದಿನಗಳಿಂದ ಕೆಲಸದಲ್ಲಿದ್ದು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರು. ಆದರೂ ಕಂಟೇನ್ಮೆಂಟ್ ವಲಯದಲ್ಲಿ ವಸ್ತುಗಳ ಸಂಪರ್ಕದಿಂದ ಸೋಂಕು ತಗುಲಿರಬಹುದೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ಸಿಬ್ಬಂದಿ ಸೋಂಕು ತಗುಲಿದರೂ ಧೈರ್ಯ ತೋರಿದ್ದಲ್ಲದೆ ಕೆಲಸ ನಿರ್ವಹಿಸುವ ಹುಮ್ಮಸ್ಸಿನಲ್ಲಿದ್ದಾರೆ. ಲಕ್ಷಣ ಇಲ್ಲದಿದ್ದರೂ ಸ್ವಯಂಪ್ರೇರಿತವಾಗಿ ಸ್ವ್ಯಾಬ್ ನೀಡಿದ್ದಾರೆ.

ಸೋಂಕು ದೃಢಪಟ್ಟಿದ್ದರಿಂದ ಅವಶ್ಯಕ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ದೃಢಪಟ್ಟ 53 ಸೋಂಕಿತರಲ್ಲಿ 39 ಜನರಿಗೆ ಮಹಾರಾಷ್ಟ್ರ ಸಂಪರ್ಕದಿಂದ ಸೋಂಕು ತಗುಲಿದೆ. 3 ಜನರಿಗೆ ದಿಲ್ಲಿ ಸಂಪರ್ಕದಿಂದ ಸೋಂಕು ತಗುಲಿದ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ವೈಎಸ್‌ ಪಾಟೀಲ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ