ಆ್ಯಪ್ನಗರ

ಭೀಮಾತೀರ ನಕಲಿ ಎನ್‌ಕೌಂಟರ್ ಪ್ರಕರಣ: 6 ಆರೋಪಿಗಳಿಗೆ ಜಾಮೀನು ನಿರಾಕರಣೆ

ಚಡಚಣದ ಅಂದಿನ ಸಿಪಿಐ ಎಂ.ಬಿ. ಅಸೋದೆ ಸೇರಿದಂತೆ ಇನ್ನು ಐದು ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಒಟ್ಟಾರೆ ಪ್ರಕರಣದ ಒಟ್ಟು ಆರು ಪ್ರಮುಖ ಆರೋಪಿಗಳ ಜಾಮೀನು ಅರ್ಜಿ ವಜಾಗೊಂಡಿದೆ.

Vijaya Karnataka Web 1 Jun 2019, 11:14 pm
ವಿಜಯಪುರ: ಭೀಮಾತೀರದ ಧರ್ಮರಾಜ್‌ ಹಾಗೂ ಗಂಗಾಧರ ಚಡಚಣ ಸಹೋದರರ ನಕಲಿ ಎನಕೌಂಟರ್ ಹಾಗೂ ನಿಗೂಢ ಹತ್ಯೆ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ.
Vijaya Karnataka Web bhima river banks


ಚಡಚಣದ ಅಂದಿನ ಸಿಪಿಐ ಎಂ.ಬಿ. ಅಸೋದೆ ಸೇರಿದಂತೆ ಇನ್ನು ಐದು ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಒಟ್ಟಾರೆ ಪ್ರಕರಣದ ಒಟ್ಟು ಆರು ಪ್ರಮುಖ ಆರೋಪಿಗಳ ಜಾಮೀನು ಅರ್ಜಿ ವಜಾಗೊಂಡಿದೆ.

ಪ್ರಕರಣದ ಜಾಮೀನು ಅರ್ಜಿ ಕೈಗೆತ್ತಿಕೊಂಡ ವಿಜಯಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಯಕ್ ಅವರು ಜಾಮೀನನ್ನು ನಿರಾಕರಿಸಿದ್ದಾರೆ. ಈ ಹಿನ್ನೆಲೆ ಆರೋಪಿಗಳಾದ ಎಂ.ಬಿ. ಅಸೋದೆ, ಪೊಲೀಸ್ ಪೇದೆ ಗಡ್ಡೆಪ್ಪ ನಾಯ್ಕೋಡಿ, ಹಣಮಂತ ಪೂಜಾರಿ, ಸಿದ್ದಗೊಂಡ ತಿಕ್ಕುಂಡಿ, ಭೀಮಾಶಂಕರ ಪೂಜಾರಿ, ಚಾಂದಹುಸೇನಿ ಚಡಚಣ ಜಾಮೀನು ಅರ್ಜಿ ವಜಾ ಆಗಿದೆ.

ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎ.ಎಸ್‌. ತಮಗೊಂಡ ವಾದ ಮಂಡಿಸಿದ್ದರು ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ