ಆ್ಯಪ್ನಗರ

ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಿ, ರಾಮಮಂದಿರ ವಿರೋಧಿಗಳನ್ನು ಪಾಕ್‌‍ಗೆ ಕಳಹಿಸಿ: ಮುತಾಲಿಕ್

ಹಿಂದೂ-ಮುಸ್ಲಿಂ ಮುಖಂಡರ ಮಧ್ಯೆ ರಾಮಮಂದಿರ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ. ಆದಾಗ್ಯೂ ಕೆಲ ಮುಸ್ಲಿಂ ಸಂಘಟನೆಗಳು ಪುನಃ ಬಾಬರ್‌ಮಸೀದಿ ನಿರ್ಮಿಸುವುದಾಗಿ ಹೇಳಿಕೆ ನೀಡಿದ್ದು, ಸಂಘಟನೆಯನ್ನು ನಿಷೇಧಿಸಬೇಕೆಂದು ಮುತಾಲಿಕ್‌ ಒತ್ತಾಯಿಸಿದ್ದಾರೆ.

Vijaya Karnataka Web 10 Aug 2020, 5:22 pm
ವಿಜಯಪುರ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ ದಿನದಂದೇ ಆಲ್‌ ಇಂಡಿಯಾ ಮುಸ್ಲಿಂ ಪರ್ಸನಲ್‌ ಲಾ ಬೋರ್ಡ್‌ ಮತ್ತು ಎಸ್‌‍ಡಿಪಿಐ ಸಂಘಟನೆಗಳು ಪ್ರತ್ಯೇಕವಾಗಿ ಪುನಃ ಬಾಬರ್‌ಮಸೀದಿ ನಿರ್ಮಿಸುವುದಾಗಿ ನೀಡಿದ ಹೇಳಿಕೆಗಳು ನ್ಯಾಯಾಂಗ ನಿಂದನೆಯಾಗಿವೆ. ಈ ಸಂಘಟನೆಗಳನ್ನು ತಕ್ಷಣ ನಿಷೇಧಿಸಿ, ಪಾಕಿಸ್ತಾನಕ್ಕೆ ಕಳುಹಿಸಬೇಕೆಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ ಒತ್ತಾಯಿಸಿದರು.
Vijaya Karnataka Web pramod muthalik


ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರಿಂಕೋರ್ಟ್‌ ತೀರ್ಪು ಬಂದ ನಂತರ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. 40 ದಿನಗಳ ವಾದ, ಪ್ರತಿವಾದ ನಡೆದ ಬಳಿಕ ಐವರು ನ್ಯಾಯಮೂರ್ತಿಗಳಿದ್ದ ಪೀಠ ಐತಿಹಾಸಿಕ ತೀರ್ಪು ನೀಡಿದೆ. ಬಳಿಕ ಹಿಂದೂ-ಮುಸ್ಲಿಂ ಮುಖಂಡರ ಮಧ್ಯೆ ರಾಮಮಂದಿರ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ. ಆದಾಗ್ಯೂ ಈ ಸಂಘಟನೆಗಳು ಹೇಳಿಕೆ ನೀಡುವುದು ಎಷ್ಟು ಸರಿ ಎಂದರು.

ಸಂವಿಧಾನವನ್ನೇ ಒಪ್ಪದ ಈ ಸಂಘಟನೆಗಳು ಈ ದೇಶದಲ್ಲಿರಲಿಕ್ಕೆ ನಾಲಾಯಕ್ಕಾಗಿವೆ. ಆದಾಗ್ಯೂ ಈ ವಿಷಯದಲ್ಲಿಸರಕಾರ ಮೌನಕ್ಕೆ ಜಾರಿದ್ದರ ವಿರುದ್ಧ ಕಿಡಿಕಾರಿದ ಅವರು, 2019ರ ನವೆಂಬರ್‌ನಲ್ಲಿತೀರ್ಪು ಬಂದಿದೆ. ಆಗ ನಿದ್ರೆಗೆ ಜಾರಿದವರು, ಈಗ ಅಪಸ್ವರ ಎತ್ತಿದ ಮುಸ್ಲಿಂ ಸಂಘಟನೆಗಳು ಸಮಾಜ ಹಾಗೂ ದೇಶದ್ರೋಹಿಯಾಗಿವೆ ಎಂದು ವ್ಯಾಖ್ಯಾನಿಸಿದರು.

ಅನುಮತಿ ಕೊಡದಿದ್ರೂ ಗಣೇಶ ಕೂರಿಸುತ್ತೇವೆ, ತಾಕತ್ತಿದ್ದರೆ ತಡೆಯಿರಿ: ಸರಕಾರಕ್ಕೆ ಮುತಾಲಿಕ್‌ ಸವಾಲು

ಅಲೋಪತಿ ಮಾಫಿಯಾ
ಕೊರೊನಾ ಚಿಕಿತ್ಸೆಯ ಹೆಸರಲ್ಲಿಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ರೊಕ್ಕ ಕೊಳ್ಳೆ ಹೊಡೆಯುತ್ತಿದ್ದಾರೆ. ಒಬ್ಬರಿಗೆ 3 ಲಕ್ಷ ರೂ. ಸುಲಿಗೆ ಮಾಡುತ್ತಿದ್ದಾರೆ. ಆದರೆ ಡಾ. ಗಿರಿಧರ ಕಜೆ ಕೇವಲ 300 ರೂ. ಹಣದಲ್ಲಿ ಆಯುರ್ವೇದಿಕ್‌ ಚಿಕಿತ್ಸೆ ನೀಡುತ್ತಿದ್ದಾರೆ. ತನ್ಮೂಲಕ ರೋಗಿಗಳನ್ನು ನಿರೋಗಿಗಳನ್ನಾಗಿ ಮಾಡುತ್ತಿದ್ದಾರೆ. ಮಾತ್ರವಲ್ಲ, ಡಾ.ಕಜೆ ಅವರು, 70 ಲಕ್ಷ ರೂ. ಬೆಲೆಬಾಳುವ ಮಾತ್ರೆಗಳನ್ನು ಸರಕಾರಕ್ಕೆ ಪೂರೈಸಿದ್ದಾರೆ. ಆದರೆ ಅವರಿಗೆ ಸರಕಾರ ಹಣ ನೀಡದೇ ಸತಾಯಿಸುತ್ತಿದೆ ಎಂದು ಆರೋಪಿಸಿದರು.

ನರೇಂದ್ರ ಮೋದಿ ಆನೆ, ಓವೈಸಿ ನಾಯಿ ಇದ್ದಂತೆ: ಪ್ರಮೋದ್‌ ಮುತಾಲಿಕ್

ಕೊರೊನಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಡಾ. ಕಜೆ ಹೇಳಿದರೂ, ಸರಕಾರ ಇವರಿಗೆ ಹಣ ಬಿಡುಗಡೆ ಮಾಡದೇ ಇರುವುದು ಬೇಸರದ ಸಂಗತಿಯಾಗಿದೆ. ಇದನ್ನೆಲ್ಲ ನೋಡಿದರೆ, ಸರಕಾರ ಅಲೋಪಥಿಕ್‌ ಮಾಫಿಯಾ ಲಾಭಿಗೆ ಮಣಿದಿದೆ ಎಂದು ಆರೋಪಿಸಿದರು.

ರಾಜಕಾರಣಿಗಳು ಪಾಪಿಗಳು, ಅವರನ್ನು ಜನ ಬೀದಿ ಬೀದಿಗಳಲ್ಲಿ ಹೊಡೆಯಬೇಕು: ಮುತಾಲಿಕ್‌ ವಿವಾದ

ಗಣೇಶೋತ್ಸವಕ್ಕೆ ಅವಕಾಶ ಕೊಡಿ
ಕರ್ನಾಟಕಕ್ಕಿಂತ ಪಕ್ಕದ ಮಹಾರಾಷ್ಟ್ರದಲ್ಲಿ ಕೊರೊನಾ ಭಯಾನಕವಾಗಿದೆ. ಅಲ್ಲಿನ ಸರಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಿದೆ. ಅದೇ ಮಾದರಿಯಲ್ಲೇ ರಾಜ್ಯದಲ್ಲೂ ಕೋವಿಡ್‌ ನಿಯಮಾವಳಿಯನುಸಾರ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕೆಂದು ಮುತಾಲಿಕ್‌ ಒತ್ತಾಯಿಸಿದರು.

ಹಂಪಿ ಆಂಜನಾದ್ರಿಯಿಂದ ಅಯೋಧ್ಯೆ ನಡುವೆ ರೈಲು ಸಂಚಾರಕ್ಕೆ ಪ್ರಮೋದ್ ‌ಮುತಾಲಿಕ್ ಆಗ್ರಹ

ಮಾಲ್‌, ಬಾರ್‌ ಮತ್ತು ಹೊಟೇಲ್‌‍ಗಳಿಗೆ ಸರಕಾರ ಅನುಮತಿ ನೀಡಿದೆ. ಆದರೆ ಸಂಪ್ರದಾಯದ ಪ್ರಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡದೇ ಇರುವ ಸರಕಾರದ ವಿರುದ್ಧ ಸಿಟ್ಟು ಪ್ರದರ್ಶಿಸಿದರು. ಸಂಘಟನೆಯ ಮುಖಂಡರಾದ ನೀಲಕಂಠ ಕಂದಗಲ್‌, ಗಂಗಾಧರ ಕುಲಕರ್ಣಿ, ರಾಕೇಶ ಮಠ, ಬಸವರಾಜ ಕಲ್ಯಾಣಪ್ಪಗೋಳ, ಆನಂದ ಕುಲಕರ್ಣಿ ಇದ್ದರು.

ಬಂಧಿಸಲು ಸರಕಾರಕ್ಕೆ ಸವಾಲು
ಮಾಲ್‌, ಬಾರ್‌, ಹೊಟೇಲ್‌‍ಗೆ ನೀಡಿರುವ ಅನುಮತಿಯನ್ನು ಗಣೇಶ ಉತ್ಸವಕ್ಕೆ ನೀಡಲು ಮೀನ-ಮೇಷ ಎನಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ನಾವು ಸರಕಾರ ವಿಧಿಸಿದ ಷರತ್ತುಗಳನ್ನು ಒಪ್ಪಿಕೊಂಡೇ ಸರಳವಾಗಿ ಉತ್ಸವ ಆಚರಿಸುತ್ತೇವೆ. ತೀರ್ಥ, ಪ್ರಸಾದ ಕೊಡಲ್ಲ. ಭಜನೆ ಮಾಡಲ್ಲ. ಸರಳ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸಿದರು. ಒಂದು ವೇಳೆ ಅನುಮತಿ ನಿರಾಕರಿಸಿದರೆ, ಉತ್ಸವ ನಿಲ್ಲಿಸುವುದಿಲ್ಲ. ನಮ್ಮನ್ನು ಹಾಗೂ ಪ್ರತಿಷ್ಠಾಪಿಸಿದ ಗಣೇಶನನ್ನು ಬಂಧಿಸಲಿ ಎಂದು ಸರಕಾರಕ್ಕೆ ಸವಾಲು ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ