ಆ್ಯಪ್ನಗರ

ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಗಾಂಜಾ ಮಜಾ, ವಿದ್ಯಾರ್ಥಿಗಳ ಬಂಧನ

ವಿಜಯಪುರ : ಕಾರಿನಲ್ಲಿಗಾಂಜಾ ಇಟ್ಟುಕೊಂಡಿದ್ದ ಬೆಂಗಳೂರು ಮೂಲದ ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳನ್ನು ಬಳಗಾನೂರ ಕ್ರಾಸ್‌ನಲ್ಲಿಬಂಧಿಸಿರುವ ತಾಳಿಕೋಟೆ ಠಾಣೆ ಪೊಲೀಸರು, ಲಕ್ಷ ರೂ. ಮೌಲ್ಯದ ಕಾರು ಹಾಗೂ 7 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

Vijaya Karnataka 30 Nov 2019, 5:00 am
ವಿಜಯಪುರ : ಕಾರಿನಲ್ಲಿಗಾಂಜಾ ಇಟ್ಟುಕೊಂಡಿದ್ದ ಬೆಂಗಳೂರು ಮೂಲದ ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳನ್ನು ಬಳಗಾನೂರ ಕ್ರಾಸ್‌ನಲ್ಲಿಬಂಧಿಸಿರುವ ತಾಳಿಕೋಟೆ ಠಾಣೆ ಪೊಲೀಸರು, ಲಕ್ಷ ರೂ. ಮೌಲ್ಯದ ಕಾರು ಹಾಗೂ 7 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
Vijaya Karnataka Web bangalore based engineering students arrested for cannabis
ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಗಾಂಜಾ ಮಜಾ, ವಿದ್ಯಾರ್ಥಿಗಳ ಬಂಧನ

ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌ ನಿವಾಸಿಗಳಾದ ರಾಕೇಶ ಬಸವರಾಜ (24), ಅರ್ಜುನ ರಾಮೇಗೌಡ (25) ಹಾಗೂ ಬೆಂಗಳೂರಿನ ರಾಜಗೋಪಾಲ ನಗರ ನಿವಾಸಿ ವಿಕ್ರಾಂತ ಶಂಕರ ನಾಯಕ (22) ಬಂಧಿತ ಆರೋಪಿಗಳು.

ಈ ಮೂವರು ಕಾರಿನಲ್ಲಿಅಕ್ರಮವಾಗಿ ಗಾಂಜಾ ಇಟ್ಟುಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ತಾಳಿಕೋಟೆ ಪೊಲೀಸರು ಶುಕ್ರವಾರ ಬಳಗಾನೂರ ಕ್ರಾಸ್‌ನಲ್ಲಿಕಾರು ನಿಲ್ಲಿಸಿ ತಪಾಸಣೆಗೊಳಪಡಿಸಿದ್ದಾರೆ. ಆ ವೇಳೆ ಹಸಿ ಗಾಂಜಾ, ಹೂ ಮತ್ತು ಕಾಯಿಯನ್ನು ಪ್ಲಾಸ್ಟಿಕ್‌ ಗೊಬ್ಬರ ಚೀಲದಲ್ಲಿಟ್ಟಿದ್ದನ್ನು ಪತ್ತೆ ಮಾಡಿದ್ದಾರೆ.

ಪ್ರವಾಸದಲ್ಲಿಗಾಂಜಾ ಮಜಾ :

ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೊಳಪಡಿಸಿದಾಗ, ನಾವು ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಈ ಭಾಗದಲ್ಲಿಬಂದಿದ್ದೆವು. ತಾಳಿಕೋಟೆ ಬಳಿಯಿರುವ ರಾಮನಟ್ಟಿಯಲ್ಲಿಗಾಂಜಾ ಸಿಗುತ್ತದೆ ಎಂಬ ಮಾಹಿತಿ ಆಧರಿಸಿ, ಗಾಂಜಾ ಖರೀದಿಸಿ ಮಜಾ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಾಳಿಕೋಟೆ ಪಿಎಸ್‌ಐ ವಸಂತ ಬಂಡಗಾರ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ. ಬೆಂಗಳೂರು ತಲುಪುವವರೆಗೆ ಗಾಂಜಾ ಮಜಾ ಮಾಡಬೇಕೆಂಬ ಕಾರಣಕ್ಕಾಗಿ ಕಾರಿನಲ್ಲಿಹೆಚ್ಚುವರಿಯಾಗಿ ಗಾಂಜಾದೊಂದಿಗೆ ಪ್ರಯಾಣಿಸುತ್ತಿದ್ದುದಾಗಿಯೂ ತಪ್ಪೊಪ್ಪಿಕೊಂಡಿದ್ದಾರೆ ಎಂದವರು ತಿಳಿಸಿದ್ದಾರೆ.

-------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ