ಆ್ಯಪ್ನಗರ

3 ವರ್ಷದಿಂದ ಕಾಲುವೆ ದುರಸ್ತಿಯಿಲ್ಲ

ಆಲಮಟ್ಟಿ ಎಡದಂಡೆ ಕಾಲುವೆಯ (ಎಎಲ್‌ ಬಿಸಿ) ವಿತರಣಾ ಕಾಲುವೆಗಳ ಆಧುನೀಕರಣ ಕಾಮಗಾರಿಯ ನೆಪವೊಡ್ಡಿ ಕಳೆದ 3 ವರ್ಷಗಳಿಂದ ಕಾಲುವೆಗಳ ಸ್ವಚ್ಛ ಹಾಗೂ ದುರಸ್ತಿ ಕಾರ್ಯ ಕೈಗೊಂಡಿಲ್ಲಎಂದು ರೈತ ಮುಖಂಡ ಬಸವರಾಜ ಕುಂಬಾರ ಆರೋಪಿಸಿದರು.

Vijaya Karnataka Web 23 May 2020, 5:00 am
ಆಲಮಟ್ಟಿ: ಆಲಮಟ್ಟಿ ಎಡದಂಡೆ ಕಾಲುವೆಯ (ಎಎಲ್‌ ಬಿಸಿ) ವಿತರಣಾ ಕಾಲುವೆಗಳ ಆಧುನೀಕರಣ ಕಾಮಗಾರಿಯ ನೆಪವೊಡ್ಡಿ ಕಳೆದ 3 ವರ್ಷಗಳಿಂದ ಕಾಲುವೆಗಳ ಸ್ವಚ್ಛ ಹಾಗೂ ದುರಸ್ತಿ ಕಾರ್ಯ ಕೈಗೊಂಡಿಲ್ಲಎಂದು ರೈತ ಮುಖಂಡ ಬಸವರಾಜ ಕುಂಬಾರ ಆರೋಪಿಸಿದರು.
Vijaya Karnataka Web canal has not been repaired since 3 years
3 ವರ್ಷದಿಂದ ಕಾಲುವೆ ದುರಸ್ತಿಯಿಲ್ಲ


ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಎಎಲ್‌ಬಿಸಿಯ ವಿತರಣಾ ಕಾಲುವೆ ಸಂಖ್ಯೆ 1ರಿಂದ 5 ರವರೆಗೆ ಆಧುನೀಕರಣಗೊಳಿಸಲು ಕಳೆದ 3 ವರ್ಷಗಳ ಹಿಂದೆಯೇ ಮಂಜೂರಿಯಾಗಿ ಟೆಂಡರ್‌ ಕೂಡಾ ಕರೆಯಲಾಗಿದೆ. ಆದರೆ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲಎಂದು ಆರೋಪಿಸಿದರು.

1ನೇ ವಿತರಣಾ ಕಾಲುವೆಯೂ 6.753 ಮೀ ಉದ್ದವಿದ್ದರೂ ಅದರಲ್ಲಿಮೊದಲ 4 ಕಿಮೀ ಮಾತ್ರ ಟೆಂಡರ್‌ ಕರೆಯಲಾಗಿದೆ, ಇನ್ನುಳಿದ 2.753 ಕಿ.ಮೀ ಕಾಲುವೆಯ ದುರಸ್ತಿಯೂ ಇಲ್ಲ, ಆಧುನೀಕರಣವೂ ಇಲ್ಲ, ಅಲ್ಲದೇ ಅಚ್ಚುಕಟ್ಟು ಪ್ರದೇಶ ಎಂದು ಉತಾರಿಯಲ್ಲಿನಮೂದುಗೊಂಡರೂ ಕೆಲವು ಜಮೀನು ನೀರಾವರಿ ಸೌಲಭ್ಯದಿಂದ ವಂಚಿತಗೊಂಡಿವೆ ಎಂದರು.

ಕಳೆದ 18 ವರ್ಷಗಳಲ್ಲಿಪ್ರತಿ ವರ್ಷ ದುರಸ್ತಿಯ ಕ್ಲೋಸರ್‌ ಕಾಮಗಾರಿಯ ಟೆಂಡರ್‌ ಕರೆಯುತ್ತಾರೆ, ಆದರೆ ನಿಗದಿಪಡಿಸಿದ ದಿನದೊಳಗೆ ಗುಣಮಟ್ಟದಿಂದ ಕಾಮಗಾರಿ ಪೂರ್ಣ್ಣಗೊಳ್ಳುವುದೇ ಇಲ್ಲಾ, ಕಾಲುವೆಯೂ ಸ್ವಚ್ಛಗೊಳ್ಳದೇ ನೀರು ಬಿಟ್ಟರೇ ಹೊಲದ ಬದಲಾಗಿ ಹಳ್ಳಕ್ಕೆ ಹೋದ ಉದಾಹರಣೆಗಳು ಜಾಸ್ತಿ ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ