ಆ್ಯಪ್ನಗರ

ಅಲ್ಲಿಹೋಗುವಂತಿಲ್ಲ, ಇಲ್ಲಿಇರುವಂತಿಲ್ಲ

ದುಡಿಮೆಯೇ ನಮ್ಮ ಬದುಕು. ಆ ರಾಜ್ಯದಲ್ಲಿಹೇಗೋ ದುಡಿದು ಜೀವನ ಸಾಗಿಸುತ್ತಿದ್ದೆವು. ಕೊರೊನಾ ನಮ್ಮ ಜಂಗಾಬಲವನ್ನೇ ಅಡಗಿಸಿದೆ, ಸತ್ತರೂ ನಮ್ಮೂರಲ್ಲೇ ಸಾಯೋಣ ಎಂದು ಇಲ್ಲಿಗೆ ಬಂದೆವು. ಸದ್ಯಕ್ಕೆ ವಲಸೆ ಹೋಗಲಾಗಲ್ಲ, ಇಲ್ಲಿಯೂ ನಮಗೆ ಸರಿಯಾಗಿ ದುಡಿಮೆ ಸಿಗಲ್ಲ. ಮುಂದೇನು... ದೇವರೇ ನಮ್ಮ ಕೈಹಿಡಿಬೇಕು.

Vijaya Karnataka Web 21 May 2020, 5:00 am
ವಿಜಯಪುರ: ದುಡಿಮೆಯೇ ನಮ್ಮ ಬದುಕು. ಆ ರಾಜ್ಯದಲ್ಲಿಹೇಗೋ ದುಡಿದು ಜೀವನ ಸಾಗಿಸುತ್ತಿದ್ದೆವು. ಕೊರೊನಾ ನಮ್ಮ ಜಂಗಾಬಲವನ್ನೇ ಅಡಗಿಸಿದೆ, ಸತ್ತರೂ ನಮ್ಮೂರಲ್ಲೇ ಸಾಯೋಣ ಎಂದು ಇಲ್ಲಿಗೆ ಬಂದೆವು. ಸದ್ಯಕ್ಕೆ ವಲಸೆ ಹೋಗಲಾಗಲ್ಲ, ಇಲ್ಲಿಯೂ ನಮಗೆ ಸರಿಯಾಗಿ ದುಡಿಮೆ ಸಿಗಲ್ಲ. ಮುಂದೇನು... ದೇವರೇ ನಮ್ಮ ಕೈಹಿಡಿಬೇಕು.
Vijaya Karnataka Web VALASE-BJP20 2052310


ಇದು ಮಹಾರಾಷ್ಟ್ರ, ಗೋವಾ ಮತ್ತಿತರ ರಾಜ್ಯಗಳಿಗೆ ಗುಳೆ ಹೋಗಿ, ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿ, ತಾವಿದ್ದಲ್ಲಿನರಕಯಾತನೆ ಅನುಭವಿಸಿ ಕೊನೆಗೂ ತವರು ಜಿಲ್ಲೆಗೆ ಮರಳಿದ ಸಾವಿರಾರು ಕಾರ್ಮಿಕರ ನೋವಿನ ಮಾತುಗಳು. ಜಿಲ್ಲೆಯಿಂದ ಸುಮಾರು ಲಕ್ಷ ಸಂಖ್ಯೆಯ ಕಾರ್ಮಿಕರು ಪ್ರತಿವರ್ಷ ಜೀವನ ಸಾಗಿಸಲು ಮಹಾರಾಷ್ಟ್ರ, ಗೋವಾ ರಾಜ್ಯಕ್ಕೆ ವಲಸೆ ಹೋಗುತ್ತಾರೆ. ಕಟ್ಟಡ ಕಾಮಗಾರಿ, ಬಂದರುಗಳಲ್ಲಿ ಹಡಗುಗಳಿಗೆ ವಸ್ತಗಳ ಲೋಡ್‌-ಅನ್‌ಲೋಡ್‌, ಹೋಟೆಲ್‌ಗಳಲ್ಲಿದುಡಿದು ನಿತ್ಯ ಸಾವಿರಾರು ರೂ.ಗಳಿಸುವ ವಲಸೆ ಕಾರ್ಮಿಕರು ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ.

ಮಹಾರಾಷ್ಟ್ರ, ಗೋವಾ ಸರಕಾರಗಳನ್ನು ತಮ್ಮನ್ನು ಕನಿಷ್ಠವಾಗಿ ಕಂಡಿದ್ದರಿಂದ ನೊಂದುಬೆಂದ ಕಾರ್ಮಿಕರು ಕರ್ನಾಟಕ ಸರಕಾರ, ಜಿಲ್ಲಾಡಳಿಕ್ಕೆ ಕಣ್ಣೀರಿಟ್ಟು , ಸತ್ತರೇ ನಮ್ಮೂರಲ್ಲೇ ಸಾಯುತ್ತೇವೆ. ದಯಮಾಡಿ ಕರೆಸಿಕೊಳ್ಳಿ ಎಂದು ಕಣ್ಣೀರಿಟ್ಟರು. ಕೊನೆಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಪ್ರಯತ್ನದಿಂದ ಬಸ್‌ಗಳು, ವಿಶೇಷ ರೈಲುಗಳಲ್ಲಿ ವಾರದ ಹಿಂದೆ ಬಂದು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ ಕಾರ್ಮಿಕರಿಗೆ ಬದುಕಿನ ಮುಂದಿನ ದಾರಿ ಕಾಣದಾಗಿದೆ.

ಮೇ 6ರಿಂದ ಅಧಿಕೃತವಾಗಿ ಜಿಲ್ಲೆಗೆ ಬಂದ ವಲಸೆ ಕಾರ್ಮಿಕರು ಜಿಲ್ಲೆಯ ವಿವಿಧೆಡೆ ಶಾಲೆ, ಹಾಸ್ಟೆಲ್‌ಗಳಲ್ಲಿ ತಾತ್ಕಾಲಿಕ ಆಶ್ರಯದಲ್ಲಿದ್ದು , ಮೇ 21ರಿಂದ 14 ದಿನಗಳ ಕ್ವಾರೈಂಟೈನ್‌ ಮುಗಿಸಿ ಸ್ವಂತ ಸೂರಿಗೆ ತೆರಳಲು ಅಣಿಯಾಗಿದ್ದಾರೆ.

ಕೊರೊನಾ ಸಂಕಷ್ಟ ಮುಗಿಯದೆ ದುಡಿಮೆಗೆ ಮಹಾರಾಷ್ಟ್ರ, ಗೋವಾಕ್ಕೆ ಹೋಗುವಂತಿಲ್ಲ. ಹಾಗಂತ ಬದುಕು ಸಾಗಿಸಲು ಇಲ್ಲಿಯೂ ಪೂರಕ ವಾತಾವರಣ ಇಲ್ಲ. ದುಡಿಯದಿದ್ದರೆ ಕುಟುಂಬ ಸದಸ್ಯರಿಗೆ ಹೊಟ್ಟೆ ತುಂಬಿಸಲಾಗದ ನೋವು ವಲಸೆ ಕಾರ್ಮಿಕರನ್ನು ಕಾಡುತ್ತಿದೆ.

ಇಲ್ಲಿಕೂಲಿ ಗಿಟ್ಟಲ್ಲ
ಮತ್ತೆ ವಲಸೆ ಹೋಗಲಾಗದೆ ಇಲ್ಲಾದರೂ ಕೂಲಿ ಮಾಡಿ ಜೀವನ ಸಾಗಿಸಬೇಕೆಂದರೂ ಸಮಸ್ಯೆ ಎದುರಾಗಿದೆ. ಹೊರರಾಜ್ಯಗಳಲ್ಲಿ ನಿತ್ಯ ಸಾವಿರ ರೂ.ಕಡಿಮೆ ಇಲ್ಲದಂತೆ ಪಗಾರ ಪಡೆಯುತ್ತಿದ್ದೆವು. ಇಲ್ಲಿ ಏನೇ ಕೆಲಸ ಮಾಡಿದರೂ ಅಲ್ಲಿಯಷ್ಟು ಕೂಲಿ ಹಣ ಸಿಗಲ್ಲ. ಹಾಗಂತ ಕೆಲಸ ಮಾಡದೆ ವಿಧಿಯಲ್ಲಎಂದು ದೇವರಹಿಪ್ಪರಗಿ ಸಮೀಪದ ಮಣೂರು ತಾಂಡಾದ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿರುವ ಕಾರ್ಮಿಕರು ಅಳಲು ತೋಡಿಕೊಂಡರು.

ಕೆಲವರಿಗೆ ಅಲ್ಪಸ್ವಲ್ಪ ಜಮೀನಿದ್ದರೂ ಮಳೆಬೆಳೆಯಾಗದೆ ಅನಿವಾರ್ಯವಾಗಿ ಗುಳೆ ಹೋಗಿದ್ದರು. ಆದರೀಗ ಲಾಕ್‌ಡೌನ್‌ನಿಂದ ಇವರ ಬದುಕು ಲಾಕ್‌ ಆಗಿದೆ. ಏನಾದರೂ ಸರಿ ಇಲ್ಲೇ ಇರೋಣ ಎಂದು ನಿರ್ಧರಿಸಿದ ಅನೇಕರು ಮತ್ತೆ ಕೃಷಿ ಕೈಗೊಳ್ಳುವ ನಿರ್ಧಾರ ತಾಳಿದ್ದಾರೆ.

ಎಲ್ಲಾದರೂ ಕೂಲಿ ಮಾಡಲೇಬೇಕು. ಹೊರರಾಜ್ಯಗಳಲ್ಲಿಹೆಚ್ಚಿನ ಹಣ ದುಡಿಯುತ್ತಿದ್ದೆವು. ಕೊರೊನಾ ನಮ್ಮ ಬದುಕನ್ನೇ ಹಾಳು ಮಾಡಿದೆ, ಹೇಗಾದರೂ ಬದುಕು ಕಟ್ಟಿಕೊಳ್ಳಲೇಬೇಕು. ಅದಕ್ಕಾಗಿ ಕಡಿಮೆ ಕೂಲಿಯಾದರೂ ಸರಿ ಇಲ್ಲೇ ದುಡಿಯುವ ಮನಸ್ಸು ಮಾಡಿದ್ದಾರೆ.

ಖಾತ್ರಿ ಯೋಜನೆಯೇ ಆಸರೆ
ವಲಸೆ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ನೀಡಲು ಅವರ ಬದುಕಿಗೆ ನೆರವಾಗಲು ಜಿಲ್ಲಾಡಳಿತ ಮುಂದಾಗಿದೆ. ಅದಕ್ಕಾಗಿ 275 ರೂ.ಗೆ ಕೂಲಿಯನ್ನೂ ಏರಿಕೆ ಮಾಡಿದೆ. ಆದರೂ ಸಾವಿರ ಸಾವಿರ ರೂ. ದುಡಿಯುತ್ತಿದ್ದ ಕಾರ್ಮಿಕರಿಗೆ ಖಾತ್ರಿ ಯೋಜನೆಯ ಹಣ ಕಡಿಮೆ ಎನಿಸಿದೆ. ಅನಿವಾರ್ಯದಿಂದಾಗಿ ಅನೇಕರು ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಮುಂದಾಗಿದ್ದಾರೆ.

ಅನಧಿಕೃತವಾಗಿ ಮೊದಲೇ ಊರು ಸೇರಿಕೊಂಡ ಸಾವಿರಾರು ಕಾರ್ಮಿಕರು ಸ್ಥಳೀಯವಾಗಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ತಾತ್ಕಾಲಿಕವಾಗಿ ಇಲ್ಲಿದ್ದು , ಕೊರೊನಾ ಪರಿಸ್ಥಿತಿ ತಿಳಿಯಾದ ಮೇಲೆ ಮತ್ತೆ ವಲಸೆ ಹೋಗುವ ನಿರ್ಧಾರವನ್ನು ಅನೇಕರು ತಾಳಿದ್ದರೆ, ಇನ್ನು ಗುಳೆ ಸಹವಾಸವೇ ಬೇಡ, ಕೊರೊನಾ ಸರಿಯಾಗಿ ಪಾಠ ಕಲಿಸಿದೆ. ಇಲ್ಲೇ ದುಡಿದು ನಮ್ಮವರ ಜತೆ ಬದುಕೋಣ ಎನ್ನುವ ನಿಲುವನ್ನು ಒಂದಿಷ್ಟು ಕಾರ್ಮಿಕರು ಹೊಂದಿದ್ದಾರೆ.


ಲೆಕ್ಕಕ್ಕೆ ಸಿಗದ ವಲಸೆ ಕಾರ್ಮಿಕರು
ಜಿಲ್ಲೆಗೆ ಮೇ 18ರ ತನಕ ಮಹಾರಾಷ್ಟ್ರ, ಗೋವಾ, ಉತ್ತರ ಪ್ರದೇಶ, ರಾಜಸ್ತಾನ ಮತ್ತಿತರ ರಾಜ್ಯಗಳಿಂದ ರಾಜ್ಯಗಳಿಂದ ಅಧಿಕೃತವಾಗಿ 14,105 ಜನ ವಲಸೆ ಕಾರ್ಮಿಕರು ಬಂದಿದ್ದರೆ, ಮೇ 19ರ ತನಕ ಮಹಾರಾಷ್ಟ್ರದಿಂದಲೇ 15 ಸಾವಿರ ಕಾರ್ಮಿಕರು ಬಂದ ಬಗ್ಗೆ ಜಿಲ್ಲಾಡಳಿತವೇ ತಿಳಿಸಿದೆ. ಅನಧಿಕೃತವಾಗಿ 20 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಜಿಲ್ಲೆಗೆ ಮರಳಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ, ತಾಲೂಕು ಕೇಂದ್ರಗಳಿಗೆ 26168 ವಲಸೆ ಕಾರ್ಮಿಕರು ಆಗಮಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ