ಆ್ಯಪ್ನಗರ

ವಿಜಯಪುರ: ಕೊನೆಗೂ ಬೋನಿಗೆ ಬಿತ್ತು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ

ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಅರಣ್ಯ ಇಲಾಖೆ ಅಲ್ಲಲ್ಲಿ ಬೋನು, ಕ್ಯಾಮೆರಾ ಟ್ರ್ಯಾಪರ್ ಅಳವಡಿಸಿತ್ತು. ಅರಣ್ಯಾಧಿಕಾರಿ ಸರೀನಾ ಸಿಕ್ಕಲಗಾರ ನೇತೃತ್ವದ ತಂಡ ಚಿರತೆಯನ್ನು ಸೆರೆ ಹಿಡಿದಿದೆ.

Vijaya Karnataka Web 5 Jun 2020, 7:27 am
ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವರಗೆಣ್ಣೂರು ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ವಾರದಿಂದ ಜಾನುವಾರುಗಳ ಮೇಲೆ ದಾಳಿ ಮಾಡಿ ಜನತೆಯಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ.
Vijaya Karnataka Web ಚಿರತೆ


ಕಬ್ಬಿನ ಗದ್ದೆ, ತೋಟಗಳಲ್ಲಿ ಆಗಾಗ್ಗೆ ಪ್ರತ್ಯಕ್ಷವಾಗಿ ಏಳೆಂಟು ಮೇಕೆಗಳನ್ನು ತಿಂದಿದ್ದ ಚಿರತೆಯಿಂದ ಆತಂಕಗೊಂಡಿದ್ದ ಸಾರ್ವಜನಿಕರು ಚಿರತೆಯನ್ನು ಹಿಡಿಯಲು ಆಗ್ರಹಿಸಿದ್ದರು.

ಕಾರ್ಯಾಚರಣೆ ಕೈಗೊಂಡಿದ್ದ ಅರಣ್ಯ ಇಲಾಖೆ ಅಲ್ಲಲ್ಲಿ ಬೋನು, ಕ್ಯಾಮೆರಾ ಟ್ರ್ಯಾಪರ್ ಅಳವಡಿಸಿತ್ತು. ಚಿರತೆ ಬೋನಿಗೆ ಬಿದ್ದಿದೆ ಎಂದು ರೈತ ಮುಖಂಡ ಪ್ರಶಾಂತ ದೇಸಾಯಿ ತಿಳಿಸಿದ್ದಾರೆ.

ಬೀಳಗಿ ತಾಲೂಕಿ ವನ್ಯಜೀವಿ ಪ್ರದೇಶದಿಂದ ಲಾಕ್ ಡೌನ್ ಅವಧಿಯಲ್ಲಿ ಮುಕ್ತವಾಗಿ ಸಂಚರಿಸಿ ಕೃಷ್ಣಾನದಿ ದಾಟಿ ಈ ಭಾಗಕ್ಕೆ ಬಂದಿರಬಹುದು ಎಂದು ಪ್ರಶಾಂತ್ ದೇಸಾಯಿ ತಿಳಿಸಿದ್ದಾರೆ.

ವಾರದಿಂದ ಈ ಭಾಗದಲ್ಲಿ ಕುರಿ, ಆಡು ಮತ್ತಿತರ ಪ್ರಾಣಿಗಳ ಮೇಲೆ ದಾಳಿ ನಡೆಸಿ ತಿಂದು ಹಾಕಿದ್ದ ಈ ಪ್ರಾಣಿ ಚಿರತೆಯೇ ಇರಬಹುದು ಎಂದು ಅಂದಾಜಿಸಿ ಸೆರೆ ಹಿಡಿಯಬೇಕೆಂದು ಶಾಸಕ ಎಂ.ಬಿ.ಪಾಟೀಲ ಅರಣ್ಯ ಇಲಾಖೆಗೆ ತಿಳಿಸಿದ್ದರು.
ಅರಣ್ಯಾಧಿಕಾರಿ ಸರೀನಾ ಸಿಕ್ಕಲಗಾರ ನೇತೃತ್ವದ ತಂಡ ಚಿರತೆಯನ್ನು ಸೆರೆ ಹಿಡಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ