ಆ್ಯಪ್ನಗರ

ವಿಜಯಪುರ: ನಿಂತ ಲಾರಿಗೆ ಕಾರು ಡಿಕ್ಕಿ, ಐವರ ಸಾವು

ಮುಂಡೇವಾಡಿ ಕುಟುಂಬ ಸದಸ್ಯರು ಪ್ರವಾಸಕ್ಕೆ ಗೋವಾಕ್ಕೆ ತೆರಳಿದ್ದರು. ಗೋವಾದಿಂದ ಬುಧವಾರ ಬೆಳಗ್ಗೆ ವಿಜಯಪುರಕ್ಕೆ ಮರಳುತ್ತಿದ್ದರು. ಇನ್ನೇನು ಕೇವಲ 5 ಕಿಮೀ ಕ್ರಮಿಸಿದ್ದರೆ ಮುಂಡೇವಾಡಿ ಕುಟುಂಬ ಸದಸ್ಯರೆಲ್ಲ ಸುರಕ್ಷಿತವಾಗಿ ಮನೆ ತಲುಪುತ್ತಿದ್ದರು.

Vijaya Karnataka 20 Oct 2021, 10:14 pm
ವಿಜಯಪುರ: ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಅದರಲ್ಲಿದ್ದ ಒಂದೇ ಕುಟುಂಬದ ನಾಲ್ವರು ಹಾಗೂ ಲಾರಿ ಚಾಲಕ ಸೇರಿ ಐವರು ಮೃತಪಟ್ಟಿದ್ದು, ಅದೃಷ್ಟವಶಾತ್‌ ಕಾರಿನಲ್ಲಿದ್ದ ಒಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದೆ.
Vijaya Karnataka Web ಅಪಘಾತ
ಅಪಘಾತ


ನಗರದ ಸಾಯಿಪಾರ್ಕ್ ನಿವಾಸಿ, ವೃತ್ತಿಯಲ್ಲಿ ಶಿಕ್ಷಕನಾಗಿದ್ದ ಮಂಜುನಾಥ ಮುಂಡೇವಾಡಿ (42), ಪತ್ನಿ ಸಾವಿತ್ರಿ (37), ಪುತ್ರಿ ಆರಾಧ್ಯಾ (08) ಹಾಗೂ ಕೆಟ್ಟು ನಿಂತಿದ್ದ ಲಾರಿ ರಿಪೇರಿ ಮಾಡುತ್ತಿದ್ದ ಮಹಾರಾಷ್ಟ್ರ ಬೀಡ್‌ ಜಿಲ್ಲೆಯ ಲಾರಿ ಚಾಲಕ ಥಾಯಿರ್‌ ಪಠಾಣ (33) ಸ್ಥಳದಲ್ಲೇ ಮೃತಪಟ್ಟವರು.

ವಿಜಯಪುರಕ್ಕೆ ಭೂವಿಜ್ಞಾನಿಗಳ ತಂಡ ಭೇಟಿ, ಭೂಕಂಪನದ ಬಗ್ಗೆ ಆತಂಕ ಅಗತ್ಯವಿಲ್ಲ ಎಂದ ತಜ್ಞರು

ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪುತ್ರರಾದ ಅಶೋಕ ಹಾಗೂ ಆಯುಕ್ತಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು‌. ಆದರೆ ಚಿಕಿತ್ಸೆ ಫಲಿಸದೇ ಆಯುಕ್ತಾ ಕೊನೆಯುಸಿರೆಳೆದಿದ್ದಾಳೆ. ಇವಳೊಂದಿಗೆ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿದಂತಾಯಿತು.

ಕಾರಿನಲ್ಲಿದ್ದ ಮಂಜುನಾಥ, ಮುಂಡೇವಾಡಿಯ ಪುತ್ರರಾದ ಅಶೋಕ ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ವೈಯಕ್ತಿಕ ಚರ್ಚೆ ಬೇಡ, ಆರ್.ಎಸ್.ಎಸ್ ಶಾಖೆಯಿಂದ ನಾನು ಕಲಿಯೋದು ಏನಿಲ್ಲ - ಕುಮಾರಸ್ವಾಮಿ

ಹೇಗಿದು ಘಟನೆ?

ಮುಂಡೇವಾಡಿ ಕುಟುಂಬ ಸದಸ್ಯರು ಪ್ರವಾಸಕ್ಕೆ ಗೋವಾಕ್ಕೆ ತೆರಳಿದ್ದರು. ಗೋವಾದಿಂದ ಬುಧವಾರ ಬೆಳಗ್ಗೆ ವಿಜಯಪುರಕ್ಕೆ ಮರಳುತ್ತಿದ್ದರು. ಇನ್ನೇನು ಕೇವಲ 5 ಕಿಮೀ ಕ್ರಮಿಸಿದ್ದರೆ ಮುಂಡೇವಾಡಿ ಕುಟುಂಬ ಸದಸ್ಯರೆಲ್ಲ ಸುರಕ್ಷಿತವಾಗಿ ಮನೆ ತಲುಪುತ್ತಿದ್ದರು. ಆದರೆ ಹೊನಗನಹಳ್ಳಿ ಬಳಿ ಹೊಂಚು ಹಾಕಿ ಕುಳಿತಿದ್ದ ವಿಧಿ, ಕುಟುಂಬದ ಮೂವರನ್ನು ಆಪೋಷಣ ಮಾಡಿಕೊಂಡಿದೆ.

ನಿದ್ರೆಯ ಮಂಪರು

ಗೋವಾದಿಂದ ಮಂಗಳವಾರವೇ ಮರಳುತ್ತಿದ್ದರು. ಹೀಗಾಗಿ ನಿದ್ರೆಯಿಲ್ಲದ್ದರಿಂದಾಗಿ ಕಾರು ಚಲಾಯಿಸುತ್ತಿದ್ದ ಮಂಜುನಾಥ ಮುಂಡೇವಾಡಿ ವಿಜಯಪುರ ಸಮೀಪಿಸುತ್ತಿದ್ದಂತೆಯೇ ನಿದ್ರೆಯ ಮಂಪರಿಯಲ್ಲಿ ಬಲ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ರಭಸದಿಂದ ಡಿಕ್ಕಿ ಹೊಡೆಸಿದ್ದರಿಂದ, ಕಾರು ಲಾರಿಯಡಿ ಸಿಲುಕಿ ನಜ್ಜು- ಗುಜ್ಜಾಗಿದೆ. ಮಾತ್ರವಲ್ಲ, ಲಾರಿ ದುರಸ್ತಿ ಮಾಡುತ್ತಿದ್ದ ಅಮಾಯಕ ಚಾಲಕನೂ ಕಾರಿನ ರಭಸಕ್ಕೆ ಸ್ಥಳದಲ್ಲೇ ಅಸುನೀಗಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ

ದುರ್ಘಟನೆಯಲ್ಲಿಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಸುದ್ದಿ ಕುಟುಂಬ ಸದಸ್ಯರಿಗೆ ಬರ ಸಿಡಿಲು ಬಡಿದಂತಾಗಿದ್ದು, ಮನೆಯಲ್ಲಿ ದುಃಖದ ಕಟ್ಟೆಯೊಡೆದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ