ಆ್ಯಪ್ನಗರ

ಸಿಬಿಐ ತನಿಖೆ ಅನಗತ್ಯ: ಎಂ.ಬಿ.ಪಾಟೀಲ

ವಿಜಯಪುರ: ನಮ್ಮ ಪೊಲೀಸ್‌ ಇಲಾಖೆಯಲ್ಲೇ ಅನೇಕ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಹೀಗಾಗಿ ಟೆಲಿಫೋನ್‌ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅವಶ್ಯಕತೆ ಇರಲಿಲ್ಲ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

Vijaya Karnataka 20 Aug 2019, 5:00 am
ವಿಜಯಪುರ: ನಮ್ಮ ಪೊಲೀಸ್‌ ಇಲಾಖೆಯಲ್ಲೇ ಅನೇಕ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಹೀಗಾಗಿ ಟೆಲಿಫೋನ್‌ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅವಶ್ಯಕತೆ ಇರಲಿಲ್ಲ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
Vijaya Karnataka Web cbi probe unnecessary mb patel
ಸಿಬಿಐ ತನಿಖೆ ಅನಗತ್ಯ: ಎಂ.ಬಿ.ಪಾಟೀಲ


ವಿಜಯಪುರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂದೀಪ್‌ ಪಾಟೀಲ ಸೇರಿದಂತೆ ಅನೇಕ ದಕ್ಷ ಅಧಿಕಾರಿಗಳು ರಾಜ್ಯದಲ್ಲಿದ್ದಾರೆ. ಹೀಗಾಗಿ ನಾನು ಸಿಬಿಐ ತನಿಖೆಗೆ ಎಂದೂ ಒತ್ತಾಯ ಮಾಡಿಲ್ಲ. ನಮ್ಮಲ್ಲೇ ಪ್ರಾಮಾಣಿಕರಿರುವಾಗ ಸಿಬಿಐ ತನಿಖೆ ಅಗತ್ಯವಿರಲಿಲ್ಲ ಎಂದರು.

ಎಲ್ಲಾ ಕ್ಷೇತ್ರದಲ್ಲೂ ಒಬ್ಬಿಬ್ಬರು ಅಪ್ರಮಾಣಿಕರಿರುತ್ತಾರೆ. ಇಲ್ಲಿ ಯಾರೂ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ನಾನೂ ಸಚಿವನಾಗಿದ್ದವನು. ನನ್ನ ಆಪ್ತ ಕಾರ್ಯದರ್ಶಿ ಫೋನ್‌ ಟ್ಯಾಪ್‌ ಆಗಿರುವ ಗುಮಾನಿ ಇದೆ. ಹೀಗಾಗಿ ಸತ್ಯ ಗೊತ್ತಾಗಲು ನಾನೇ ತನಿಖೆಗೆ ಆಗ್ರಹಿಸಿದ್ದೇನೆ. ಹಾಗಂತ ಸಿಬಿಐ ತನಿಖೆ ಅವಶ್ಯಕತೆ ಇರಲಿಲ್ಲ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ