ಆ್ಯಪ್ನಗರ

ದುಡ್ಡು ಹಂಚೋದು ಕಾಂಗ್ರೆಸ್ ಸಂಸ್ಕೃತಿ: ಬಸವರಾಜ ಬೊಮ್ಮಾಯಿ

ಭಕ್ತ ಕನಕದಾಸರ ಬಾಡ ಗ್ರಾಮ ಕುಗ್ರಾಮವಾಗಿತ್ತು. ನಾನು ಯೋಜನೆ ರೂಪಿಸಿ ಅಭಿವೃದ್ಧಿ ಪಡಿಸಿದ್ದೇನೆ. ಕುರುಬ ಸಮಾಜ ಬಾಂಧವರನ್ನ ಬಾಡಗೆಗೆ ಆಗಮಿಸುವಂತೆ ಬಸವರಾಜ ಬೊಮ್ಮಾಯಿ ಆಹ್ವಾನಿಸಿದರು.

Vijaya Karnataka Web 24 Oct 2021, 5:25 pm
ವಿಜಯಪುರ: ಚುನಾವಣೆಯಲ್ಲಿ ದುಡ್ಡು ಹಂಚೋದು ಕಾಂಗ್ರೆಸ್ ಸಂಸ್ಕೃತಿ. ಸುಖಾಸುಮ್ಮನೆ ಬಿಜೆಪಿಯವರ ಮೇಲೆ ಆರೋಪಿಸುತ್ತಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
Vijaya Karnataka Web ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ


ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದ ಕನ್ನೊಳ್ಳಿ, ಕೊಕಟನೂರ, ಹಂದಿಗನೂರಿನಲ್ಲಿ ರೋಡ್ ಶೋ ಮೂಲಕ ಬಿಜೆಪಿ ಪಕ್ಚದ ಅಭ್ಯರ್ಥಿ ರಮೇಶ ಭೂಸನೂರ ಪರ ಪ್ರಚಾರ ನಡೆಸಿದರು.

ಕತ್ತಲ ಕಾರ್ಯಾಚರಣೆ ಮಾಡಿ ಎಲ್ಲ ಹೊಡೆದು ಬೀಡ್ತಿವಿ ಎನ್ನುತ್ತೆ ಕಾಂಗ್ರೆಸ್. ಕಾಂಗ್ರೆಸ್‌ ಪಕ್ಷದ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು! ಬಸವರಾಜ ಬೊಮ್ಮಾಯಿ

ಕಂಬಳಿ ಬಗ್ಗೆ ಸಿಎಂ ಪ್ರತಿಕ್ರಿಯೆ

ಯೋಗ್ಯತೆ ಇದ್ದವರು ಕಂಬಳಿಯನ್ನ ಹಾಕಬೇಕು. ಯೋಗ್ಯತೆ ಇದ್ರೆ ಮಾತ್ರ ಕಂಬಳಿ ಹಾಕಿ. ಕುರುಬ ಸಮಾಜಕ್ಕೆ ಕೊಡುಗೆ ಕೊಟ್ಟು ಕಂಬಳಿ ಹಾಕಬೇಕು ಎಂದು ತಿಳಿಸಿದರು.

ಭಕ್ತ ಕನಕದಾಸರ ಬಾಡ ಗ್ರಾಮ ಕುಗ್ರಾಮವಾಗಿತ್ತು. ನಾನು ಯೋಜನೆ ರೂಪಿಸಿ ಅಭಿವೃದ್ಧಿ ಪಡಿಸಿದ್ದೇನೆ. ಕುರುಬ ಸಮಾಜ ಬಾಂಧವರನ್ನ ಬಾಡಗೆಗೆ ಆಗಮಿಸುವಂತೆ ಬಸವರಾಜ ಬೊಮ್ಮಾಯಿ ಆಹ್ವಾನಿಸಿದರು.

ಸಿಂದಗಿ ಉಪ ಚುನಾವಣೆ: ಜೆಡಿಎಸ್ ಲೆಕ್ಕಕ್ಕೇ ಇಲ್ಲ ಎಂದ ಸಿದ್ದರಾಮಯ್ಯಚುನಾವಣೆ ಬಳಿಕ ಬಾಡ ಗ್ರಾಮಕ್ಕೆ ಬಾಂಧವರು ಬನ್ನಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ