ಆ್ಯಪ್ನಗರ

ಚೀಲಗಳ ಕೊರತೆ, ಸಾಗಣೆ ಸಮಸ್ಯೆ, ಮುಚ್ಚಿದ ಕೇಂದ್ರ

ವಿಜಯಪುರ: ಗೋಣಿ ಚೀಲಗಳ ಕೊರತೆ ಹಾಗೂ ಸಾಗಣೆ ಸಮಸ್ಯೆಯಿಂದ ಜಿಲ್ಲೆಯ ಕೆಲ ತೊಗರಿ ಖರೀದಿ ಕೇಂದ್ರಗಳಿಗೆ ಖರೀದಿ ಗ್ರಹಣ ಹಿಡಿದಿದೆ. ಇನ್ನೂ ಕೆಲವೆಡೆ ನೋಂದಣಿಯಾದರೂ ಖರೀದಿ ಪ್ರಕ್ರಿಯೆ ಪ್ರಾರಂಭಗೊಂಡಿಲ್ಲ.

Vijaya Karnataka 18 Feb 2020, 5:00 am
ವಿಜಯಪುರ: ಗೋಣಿ ಚೀಲಗಳ ಕೊರತೆ ಹಾಗೂ ಸಾಗಣೆ ಸಮಸ್ಯೆಯಿಂದ ಜಿಲ್ಲೆಯ ಕೆಲ ತೊಗರಿ ಖರೀದಿ ಕೇಂದ್ರಗಳಿಗೆ ಖರೀದಿ ಗ್ರಹಣ ಹಿಡಿದಿದೆ. ಇನ್ನೂ ಕೆಲವೆಡೆ ನೋಂದಣಿಯಾದರೂ ಖರೀದಿ ಪ್ರಕ್ರಿಯೆ ಪ್ರಾರಂಭಗೊಂಡಿಲ್ಲ.
Vijaya Karnataka Web closed center
ಚೀಲಗಳ ಕೊರತೆ, ಸಾಗಣೆ ಸಮಸ್ಯೆ, ಮುಚ್ಚಿದ ಕೇಂದ್ರ


ಜಿಲ್ಲೆಯ ಕೆಲ ಖರೀದಿ ಕೇಂದ್ರಗಳಲ್ಲಿಗೋಣಿ ಚೀಲಗಳ ಸಮಸ್ಯೆಹಾಗೂ ಖರೀದಿಸಿ ಸಂಗ್ರಹಿಸಿದ ತೊಗರಿ ಸಾಗಣೆಗೆ ಸಕಾಲಕ್ಕೆ ಲಾರಿಗಳು ಬಾರದ ಕಾರಣ ಖರೀದಿ ಪ್ರಕ್ರಿಯೆ ಕೆಲವೆಡೆ ಬಂದ್‌ ಆಗಿವೆ. ತೊಗರಿ ಮಾರಾಟ ಮಾಡಲು ಗ್ರಾಮೀಣ ಪ್ರದೇಶಗಳಿಂದ ಬಂದ ರೈತರು ಮರಳಿ ಹೋಗುವ ಅನಿವಾರ್ಯತೆ ಉಂಟಾಗಿದೆ.

ರೈತರು ಹಾಗೂ ಸಂಘಟನೆಗಳ ಹೋರಾಟದ ಫಲವಾಗಿ ಜಿಲ್ಲಾದ್ಯಂತ ಕಳೆದು ತಿಂಗಳು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಆದರೆ, ಕೆಲ ಕೇಂದ್ರಗಳಲ್ಲಿರೈತರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಜಿಲ್ಲಾಡಳಿತ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.

ಪ್ರತಿ ಕ್ವಿಂಟಲ್‌ಗೆ 6100 ರೂ. ದರದಲ್ಲಿತೊಗರಿ ಖರೀದಿಸುವುದರಿಂದ ಬಹುತೇಕ ಎಲ್ಲರೈತರು ಖರೀದಿ ಕೇಂದ್ರಕ್ಕೆ ತರುತ್ತಿದ್ದಾರೆ. ದಿನಕ್ಕೆ ಸಾವಿರಾರು ಕ್ವಿಂಟಲ್‌ ತೊಗರಿ ಬರುತ್ತಿದೆ. ಆದರೆ ಕೆಲ ಕೇಂದ್ರಗಳಲ್ಲಿಸಂಗ್ರಹಿಸಿದ ತೊಗರಿ ಸಾಗಣೆಗೆ ಲಾರಿಗಳು ಸಕಾಲಕ್ಕೆ ಬಾರದ ಕಾರಣ ಖರೀದಿಗೆ ಕೇಂದ್ರಗಳಿಗೆ ಬೀಗ ಜಡಿದು ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.

ಸಂಗ್ರಹಿಸಿದ ತೊಗರಿ ಸಾಗಣೆ ಮಾಡುವಂತೆ ಬೇಡಿಕೆ ಸಲ್ಲಿಸಿದ್ದರು, ಇದುವರೆಗೂ ಲಾರಿಗಳು ಬಂದಿಲ್ಲ. ರೈತರು ಮಾತ್ರ ಕೇಂದ್ರಕ್ಕೆ ತೊಗರಿ ತರುವುದು ನಿರಂತರವಾಗಿ ನಡೆದೆ ಇದೆ. ಕೇಂದ್ರಕ್ಕೆ ಬೀಗ ಹಾಕಿಕೊಂಡು ಹೋದ ತೊಗರಿ ಖರೀದಿ ಕೇಂದ್ರದ ವ್ಯವಸ್ಥಾಪಕರು ಇಲ್ಲದ ಕಾರಣ ಯಾರನ್ನು ವಿಚಾರಿಸಬೇಕು ಎಂದು ತಿಳಿಯದೇ ಮರಳಿ ಹೋಗುವ ಅನಿವಾರ್ಯತೆ ರೈತರದ್ದಾಗಿದೆ.

-----

2 ಕೆಜಿ ಕಟ್‌, 100 ರೂ. ಸಾದಿಲ್ವಾರು

ಕೆಲ ಖರೀದಿ ಕೇಂದ್ರದವರು ಬೆಂಬಲ ಬೆಲೆಗೆ ಆಸೆಗೆ ಬರುವ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ತೂಕ, ಚೀಲ, ಸಾಗಣೆ ಸೇರಿದಂತೆ ಯಾವುದಕ್ಕೂ ರೈತರು ಹಣ ನೀಡುವಂತಿಲ್ಲ. ಆದರೆ ಕೆಲ ಕೇಂದ್ರದವರು ಪ್ರತಿ ಕ್ವಿಂಟಾಲ್‌ಗೆ 2 ಕೆಜಿ ಕಟ್‌ ಮಾಡುವುದು ಹಾಗೂ ಸಾದಿಲ್ವಾರು ಎಂದು 100 ರೂ.ಗಳನ್ನು ವಸೂಲಿ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಖರೀದಿ ಯಾವಾಗ?

ಫ್ರೂಟ್ಸ್‌ ತಂತ್ರಾಂಶದಲ್ಲಿಕೆಲ ವಿವರಗಳು ನಮೂದಾಗದ ಕಾರಣ ನೋಂದಣಿ ಅವಧಿಯನ್ನು ಫೆ.25ರವರೆಗೆ ಹಾಗೂ ಖರೀದಿ ಅವಧಿಯನ್ನು ಮಾ.15ರವರೆಗೆ ವಿಸ್ತರಿಸಿ ಸರಕಾರ ಆದೇಶಿಸಿದೆ. ಫೆ.25ರಿಂದ ಮಾ.15ರೊಳಗೆ ಎಲ್ಲರೈತರ ತೊಗರಿ ಖರೀದಿ ಸಾಧ್ಯವಾಗುವುದಿಲ್ಲಕೂಡಲೇ ಎಲ್ಲೆಡೆ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂಬುದು ರೈತರ ಆಗ್ರಹ.

ಜಿಲ್ಲಾದ್ಯಂತ ಎಷ್ಟು ಪ್ರಮಾಣದಲ್ಲಿತೊಗರಿ ಬೆಳೆಯಲಾಗಿದೆ ಎಂಬುದು ಅಧಿಕಾರಿಗಳಿಗೆ ಗೊತ್ತಿರುತ್ತದೆ. ಆ ಪ್ರಮಾಣದಲ್ಲಿಏನೆಲ್ಲಅವಶ್ಯಕತೆ ಬೇಕು ಎಂದು ತಿಳಿಯದೇ ಒಂದಲ್ಲಒಂದು ಕಾರಣ ಹೇಳಿ ರೈತರಿಗೆ ಸಂಕಷ್ಟ ನೀಡುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ತೊಗರಿ ಕೇಂದ್ರಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎನ್ನುತ್ತಾರೆ ರೈತ ಬಾಂಧವರು.

---------

ಗೊಳಸಂಗಿಯಲ್ಲಿನೋಂದಣಿ ಆರಂಭಿಸಲಾಗಿದ್ದು ಖರೀದಿ ಪ್ರಕ್ರಿಯೆ ಆರಂಭವಾಗಿಲ್ಲ. ರಾಶಿ ಮಾಡಿಟ್ಟ ತೊಗರಿ ಕಾಪಾಡುವುದು ರೈತರಿಗೆ ಸವಾಲಾಗಿದೆ. ಕೆಲ ದಿನಗಳ ಹಿಂದೆ ಗ್ರಾಮದ ರೈತರೊಬ್ಬರ ತೊಗರಿ ಕಳ್ಳತನವಾದ ಪ್ರಕರಣ ಪೊಲೀಸ್‌ ಠಾಣೆಯಲ್ಲಿದಾಖಲಾಗಿದೆ. ಕೂಡಲೇ ಎಲ್ಲೆಡೆ ತೊಗರಿ ಖರೀದಿ ಆರಂಭಿಸಬೇಕು.

-ಅಮೃತ ಯಾದವ. ತಾಪಂ ಸದಸ್ಯರು. ಗೊಳಸಂಗಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ