ಆ್ಯಪ್ನಗರ

ರಂಗೇರಲಿದೆಯೇ ರಂಗಪಂಚಮಿ ?

ಬಸವನಬಾಗೇವಾಡಿ ಕಾಮಣ್ಣನ ಬೆಂಕಿಯಲ್ಲಿ ಕಡಲೆ ಸುಟ್ಟುಕೊಂಡವರು ಬೆರಳಣಿಕೆಯಷ್ಟು, ಬಣ್ಣ ಆಡಿದ ಸಣ್ಣವರು, ಊರಿಂದಾಚೆ ಹೋದ ದೊಡ್ಡವರು, ರಂಗಪಂಚಮಿ ಬಣ್ಣದಾಟವಾದರೂ ರಂಗಾಗಲಿದೆಯೇ ಎಂದು ಪ್ರಶ್ನಿಸಿದ ಹಲವರು..

Vijaya Karnataka 22 Mar 2019, 5:00 am
ವಿಕ ವಿಶೇಷ ಬಸವನಬಾಗೇವಾಡಿ
Vijaya Karnataka Web news/vijayapura/collar
ರಂಗೇರಲಿದೆಯೇ ರಂಗಪಂಚಮಿ ?


ಕಾಮಣ್ಣನ ಬೆಂಕಿಯಲ್ಲಿ ಕಡಲೆ ಸುಟ್ಟುಕೊಂಡವರು ಬೆರಳಣಿಕೆಯಷ್ಟು, ಬಣ್ಣ ಆಡಿದ ಸಣ್ಣವರು, ಊರಿಂದಾಚೆ ಹೋದ ದೊಡ್ಡವರು, ರಂಗಪಂಚಮಿ ಬಣ್ಣದಾಟವಾದರೂ ರಂಗಾಗಲಿದೆಯೇ ಎಂದು ಪ್ರಶ್ನಿಸಿದ ಹಲವರು..

ವರ್ಷಕ್ಕೊಮ್ಮೆ ಬರುವ ಕಾಮ ದಹನ, ಬಣ್ಣದ ಹಬ್ಬ ರಂಗು ಕಳೆದುಕೊಳ್ಳುತ್ತಿದೆ. ಹೋಳಿ ಹುಣ್ಣಿಮೆಯ ಕಾಮದಹನ ಬುಧವಾರ ರಾತ್ರಿ ನೈವೇದ್ಯೆ ಸ್ವೀಕರಿಸುವ ಮೂಲಕ ನಗರದ ಹಲವೆಡೆ ಅಗ್ನಿ ಸ್ಪರ್ಶ ಮಾಡಿ ಕಾಮಣ್ಣನ ದಹನ ಮಾಡಿದರು. ಹಿಂದೆ ಬೆಳಗ್ಗೆ ಎದ್ದ (ಕಾಮ ದಹನದ ಮರುದಿವಸ) ತಕ್ಷ ಣ ಮಹಿಳೆಯರು ಕಾಮನ ಬೆಂಕಿ ಒಯ್ದು ತಮ್ಮ ಒಲೆ ಹಚ್ಚಿ ಅಡುಗೆ ಮಾಡುತ್ತಿದ್ದರು. ಕಾಮನ ಬೆಂಕಿಯಲ್ಲಿ ಕಡಲೆ ಸುಟ್ಟು ತಿನ್ನುತ್ತಿದ್ದರು. ಇಂದು ಅದರ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ಹೋಳಿ ಹಬ್ಬ ಈ ಮೂಲಕ ರಂಗು ಕಳೆದುಕೊಳ್ಳುತ್ತಿದೆ.

ರಂಗಾಗಲಿದೆಯೇ ರಂಗಪಂಚಮಿ:

ಗುರುವಾರ ನಡೆದ ಬಣ್ಣದಾಟದಲ್ಲಿ ಬರೀ ಸಣ್ಣ ಹುಡುಗರೇ ಹೆಚ್ಚು ಸಂಖ್ಯೆಯಲ್ಲಿ ಇದ್ದರು. ವರ್ಷಗಳಿಂದ ದೊಡ್ಡವರು ಬಣ್ಣದಾಟವಾಡದೇ ಊರಾಚೆ ಹೋಗುತ್ತಿದ್ದರಿಂದ ಬಣ್ಣದಾಟ ಕಳೆ ಕಳೆದುಕೊಳ್ಳುತ್ತಿದೆ. ಮಾ. 24 ಭಾನುವಾರದಂದು ನಡೆಯುವ ರಂಗಪಂಚಮಿಯಂದಾದರೂ ಬಣ್ಣದಾಟ ರಂಗಾಗಿ ನಡೆಯಲಿದೆಯೇ?. ದೊಡ್ಡವರೇ ಮುಂದೆ ನಿಂತು ಬಣ್ಣದಾಟಕ್ಕೆ ಮೆರಗು ನೀಡುತ್ತಾರೆಯೇ? ಎಂಬುದನ್ನು ನಾನಾ ಯುವಕರು ಎದುರು ನೋಡುತ್ತಿದ್ದಾರೆ. ಮೊದಲು ಊರಿನ ಹಿರಿಯರು ಯುವಕರೊಂದಿಗೆ ಬಣ್ಣದ ಬ್ಯಾರಲ್‌ಗಳನ್ನು ಎತ್ತಿನ ಬಂಡಿಯಲ್ಲಿ ಹೇರಿ ಹೋಳಿ ಹಾಡುಗಳೊಂದಿಗೆ ಬಣ್ಣದೋಕುಳಿ ಆಟವಾಡುತ್ತಿದ್ದರು. ಅಂದಿನ ಹೋಳಿ ಆಟವೇ ವಿಶೇಷವಾಗಿರುತ್ತಿತ್ತು. ಈಗ ಮತ್ತೆ ಅದು ಮರುಕಳಿಸಲಿ ಎಂಬ ಆಶಯ ಸಾವಿರಾರು ಜನರದ್ದಾಗಿದೆ.

ಭಾನುವಾರ ರಂಗಪಂಚಮಿ:

ಸೋಮವಾರ ಬಂತೆಂದರೆ ಬಸವನಬಾಗೇವಾಡಿಯಲ್ಲಿ ಜಾತ್ರೆ ವಾತಾವರಣ ಸೃಷ್ಟಿಯಾಗುತ್ತದೆ. ಅಂದು ಸಂತೆ ಇರುವುದು ಇದಕ್ಕೆ ಕಾರಣ. ಹೋಳಿ ಕಾಮದಹನವನ್ನು ಒಂದು ದಿನ ಮುಂಚೆಯೇ ಮಾಡಿ ರಂಗಪಂಚಮಿಯನ್ನು ಭಾನುವಾರ ಆಚರಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ