ಆ್ಯಪ್ನಗರ

ಮೋದಿ ಅಲೆಯಲ್ಲಿ ಕಾಂಗ್ರೆಸ್‌ ಆಟ ಬಂದ್‌: ಯಡಿಯೂರಪ್ಪ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬ ಮಹಿಳೆಯರು ಒಂದಲ್ಲ ಒಂದು ಸೌಲಭ್ಯ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ರಾಜ್ಯದಲ್ಲೂ 1200 ರೂ.ವೃದ್ಧಾಪ್ಯ ವೇತನ ಕೊಟ್ಡಿದೆ. ಮೋದಿಯವರನ್ನು ವಿಶ್ವ ನಾಯಕ ಎಂದು ಅನೇಕ ರಾಷ್ಟ್ರಗಳು ಗೌರವದಿಂದ ಕಾಣುತ್ತಿವೆ

Vijaya Karnataka 20 Oct 2021, 8:35 pm
ಮೋರಟಗಿ (ವಿಜಯಪುರ): ಹಣ, ಹೆಂಡ, ತೋಳ್ಬಲದಿಂದ, ಜಾತಿಯ ವಿಷ ಬೀಜ ಬಿತ್ತಿ ಕಾಂಗ್ರೆಸ್‌ನವರು ಗೆಲ್ಲುತ್ತಿದ್ದರು. ಆದರೀಗ ನರೇಂದ್ರ ಮೋದಿ ಅಲೆಯಲ್ಲಿ ಕಾಂಗ್ರೆಸ್‌ ಆಟ ನಡೆಯದಾಗಿದೆ. ನಾವು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಂಬ ಭೇದ ಭಾವ ಮಾಡಿಲ್ಲ. ಹೀಗಾಗಿ ಜನತೆ ಬಿಜೆಪಿ ಬೆಂಬಲಿಸುತ್ತಿದೆ. ಇನ್ನೇನಿದ್ದರೂ ದೇಶಾದ್ಯಂತ ಬಿಜೆಪಿಯದ್ದೇ ಹವಾ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪಕ್ಷದ ಪರ ಬ್ಯಾಟಿಂಗ್‌ ಮಾಡಿದರು.
Vijaya Karnataka Web ಯಡಿಯೂರಪ್ಪ
ಯಡಿಯೂರಪ್ಪ


ಕೆಲ ದಿನಗಳ ನಂತರ ರಾಜಕೀಯ ಚಟುವಟಿಕೆಗೆ ಎಂಟ್ರಿ ಕೊಟ್ಟ ಅವರು, ಬುಧವಾರ ಸಿಂದಗಿ ಉಪಸಮರಕ್ಕಾಗಿ ಮೋರಟಗಿ ಗ್ರಾಮದಲ್ಲಿ ಪಕ್ಷದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಲ್ಲದೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಈಗ ಜನ ಜಾಗೃತರಾಗಿದ್ದಾರೆ. ನಾವು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಂಬ ಭೇದಭಾವ ಮಾಡಿಲ್ಲ. ಮೋದಿ ಅವರ ಪ್ರಭಾವದಿಂದಾಗಿ ಬಿಜೆಪಿ 26 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಮೋದಿಯವರನ್ನು ವಿಶ್ವ ನಾಯಕ ಎಂದು ಅನೇಕ ರಾಷ್ಟ್ರಗಳು ಬಹಳ ಗೌರವದಿಂದ ಕಾಣುತ್ತಿರಬೇಕಾದರೆ ಕಾಂಗ್ರೆಸ್‌ನವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ತಿರುಗೇಟು ನೀಡಿದರು.

ಬಿಜೆಪಿಯಿಂದ ಸರ್ವರ ಅಭಿವೃದ್ಧಿ

ಪ್ರಧಾನಿ ಮೋದಿ ಅವರು ಪ್ರತಿಯೊಬ್ಬ ಮಹಿಳೆಯರು ಒಂದಲ್ಲ ಒಂದು ಸೌಲಭ್ಯ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ರಾಜ್ಯದಲ್ಲೂ 1200 ರೂ.ವೃದ್ಧಾಪ್ಯ ವೇತನ ಕೊಟ್ಡಿದೆ. ಸುವರ್ಣಭೂಮಿ ಯೋಜನೆ, ಪ್ರವಾಹ ಸಂತ್ರಸ್ತರಿಗೆ ಸ್ಪಂದನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ವಾಲ್ಮೀಕಿ, ಕನಕ ಜಯಂತಿ ಆಚರಣೆ, ಕಾಗಿನೆಲೆ ಅಭಿವೃದ್ಧಿ ಸೇರಿದಂತೆ ಎಲ್ಲವರ್ಗದವರ ಅಭಿವೃದ್ಧಿಗೆ ಶ್ರಮಿಸಿದ್ದೇವೆ ಎಂದು ತಮ್ಮ ಸಾಧನೆಯನ್ನು ವಿವರಿಸಿದರು.

ರೈತರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಮುಂದಿನ 2-3 ವರ್ಷಗಳಲ್ಲಿಸೂರಿಲ್ಲದವರಿಗೆ ಮನೆ ನಿರ್ಮಿಸಿಕೊಡುವ ನಿರ್ಧಾರ ಮಾಡಿದ್ದೇವೆ. ರಾಜ್ಯ ಹಾಗೂ ಮೋದಿ ಸರಕಾರದ ಮೇಲೆ ವಿಶ್ವಾಸ ಇಟ್ಡು ಸಿಂದಗಿಯಲ್ಲಿಬಿಜೆಪಿಯನ್ನು ಗೆಲ್ಲಿಸಬೇಕೆಂದು ಯಡಿಯೂರಪ್ಪ ಮನವಿ ಮಾಡಿದರು.

ಗೋಲಗೇರಿ ಗ್ರಾಮದಲ್ಲೂ ಯಡಿಯೂರಪ್ಪ ಪ್ರಚಾರ ಮಾಡಿದರು. ಆದರೆ ರಾಜಾಹುಲಿಯ ಖದರ್‌ ಇರಲಿಲ್ಲ. ಇದಕ್ಕೂ ಮುನ್ನ ಡೊಳ್ಳು ಕುಣಿತು, ಲಂಬಾಣಿ ಮಹಿಳೆಯರ ಸಾಂಪ್ರದಾಯಿಕ ನೃತ್ಯದ ಮೂಲಕ ಯಡಿಯೂರಪ್ಪರನ್ನು ಸ್ವಾಗತಿಸಲಾಯಿತು.

ಕಾಂಗ್ರೆಸ್‌ ಆಡಳಿತ ದೇಶಕ್ಕೆ ಶಾಪ

ಸಂವಿಧಾನ ರಕ್ಷಣೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಖರ್ಗೆ ಹೇಳಿದ್ದಾರೆ. ಶ್ರೇಷ್ಠ ಸಂವಿಧಾನ ಕೊಟ್ಟ ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನೇ ಸೋಲಿಸಿದವರು ಕಾಂಗ್ರೆಸ್‌ನವರು. ಅಂಬೇಡ್ಕರ್‌ ಅವರು ಸತ್ತಾಗ ಅಂತ್ಯಕ್ರಿಯೆಗೆ ದಿಲ್ಲಿಯಲ್ಲಿ ಆರಡಿ ಜಾಗ ಕೊಡದ ಕಾಂಗ್ರೆಸ್‌ನಿಂದ ದೀನ ದಲಿತರ ಉದ್ಧಾರ ಸಾಧ್ಯವೇ? ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಆಡಳಿತ ದೇಶಕ್ಕೆ ವರ ಆಗದೆ, ಶಾಪ ಆಯ್ತು. ಆದರೆ, ಪ್ರಧಾನಿ ಮೋದಿ ಅವರಿಗೆ 180 ರಾಷ್ಟಗಳು ರತ್ನಗಂಬಳಿ ಹಾಕಿ ತಮ್ಮ ರಾಷ್ಟ್ರಕ್ಕೆ ಅಹ್ವಾನಿಸಿರುವುದು ಬಿಜೆಪಿ ಹಿರಿಮೆ ಎಂದರು.

ಕಾಂಗ್ರೆಸ್‌ ಸರಕಾರವಿದ್ದಾಗ ಬಡವರಿಗೆ ಸರಕಾರಿ ಸೌಲಭ್ಯ ಕೊಡಿಸಲು ಏಜೆಂಟರನ್ನು ಹುಟ್ಟು ಹಾಕಿದರು. ಆದರಿಂದು ಮೋದಿ ಅವರು ಕಿಸಾನ್‌ ಸಮ್ಮಾನ್‌ ಯೋಜನೆ ಮೂಲಕ ರೈತರ ಖಾತೆಗೆ 6 ಸಾವಿರ, ಯಡಿಯೂರಪ್ಪ ಸಿಎಂ ಆಗಿದ್ದಾಗ ರಾಜ್ಯ ಸರಕಾರದಿಂದ 4 ಸಾವಿರ ಸೇರಿಸಿ 10 ಸಾವಿರ ರೂ. ಹಣ ಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾರಜೋಳ ತಮ್ಮ ಸರಕಾರದ ಸಾಧನೆ ಹೇಳಿಕೊಂಡರು.

ಕಾಂಗ್ರೆಸ್‌ ಖಾಲಿ ಚೀಲ ನೀಡಿದೆ

ರೈತರಿಗೆ ಹಣ ಕೊಡಿಸಲು ಬಿಜೆಪಿ ಏಜೆಂಟರನ್ನು ಸೃಷ್ಟಿಸಿಲ್ಲ. ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತಿದೆ. ಮೋದಿ ಅವರಿಂದ ದೇಶದಲ್ಲಿಭ್ರಷ್ಟಾಚಾರ ಮುಕ್ತ ಆಗುತ್ತಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಸಿದ್ದರಾಮಯ್ಯ ತಾವು 7 ಕೆಜಿ ಅಕ್ಕಿ ಕೊಟ್ಟಿದ್ದೇವೆಂದು ಹೇಳಿಕೊಳ್ಳುತ್ತಾರೆ. ಆದರೆ, ಅನ್ನಭಾಗ್ಯ ಅಕ್ಕಿ ನರೇಂದ್ರ ಮೋದಿ ಸರಕಾರದ್ದು. ಅಕ್ಕಿ ತುಂಬಿದ ಖಾಲಿ ಚೀಲ ಮಾತ್ರ ಕಾಂಗ್ರೆಸ್‌ನವರದು. ಅಕ್ಕಿ ಒಳ್ಳೆಯದೋ, ಚೀಲ ಒಳ್ಳೆಯದೋ ವಿಚಾರ ಮಾಡಿ ಎಂದು ನೆರೆದ ಜನತೆಗೆ ಗೋವಿಂದ ಕಾರಜೋಳ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ