ಆ್ಯಪ್ನಗರ

ಐದುವರೆ ತಾಸಿನಲ್ಲಿ 424 ಭಕ್ತರರಿಂದ ದರ್ಶನ

ಇಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿವಿಶೇಷ ಅಲಂಕಾರ ಪೂಜೆಯಿಂದ ಕಂಗೊಳಿಸಿದ ಬಸವಣ್ಣನವರ ದರ್ಶನವನ್ನು ಭಕ್ತರು ಪಡೆದು ಪುನೀತರಾದರು. ಬಸವಣ್ಣನವರ ವಾರ ಸೋಮವಾರವಾಗಿದ್ದರಿಂದ ಪೂಜೆಯ ಮೆರಗು ಬಂದಿತ್ತು. ಬೆಳಗ್ಗೆ ದೇವರಿಗೆ ಬೆಳ್ಳಿಮುಖದಿಂದ ಪೂಜೆ ನಡೆಸಲಾಯಿತು. ಬಸವ ಜನ್ಮಸ್ಥಳ ಖ್ಯಾತಿಯ ಪಟ್ಟಣದಲ್ಲಿದೇವಸ್ಥಾನ ಬಂದ್‌ನಿಂದ ಪರ ಊರಿನ ಭಕ್ತ ವೃಂದವೂ ಹಳಹಳಿಸಿತ್ತು.

Vijaya Karnataka Web 9 Jun 2020, 5:00 am
ಮಹಾಂತೇಶ ಭೀ.ಸಂಗಮ, ಬಸವನಬಾಗೇವಾಡಿ: ಇಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿವಿಶೇಷ ಅಲಂಕಾರ ಪೂಜೆಯಿಂದ ಕಂಗೊಳಿಸಿದ ಬಸವಣ್ಣನವರ ದರ್ಶನವನ್ನು ಭಕ್ತರು ಪಡೆದು ಪುನೀತರಾದರು. ಬಸವಣ್ಣನವರ ವಾರ ಸೋಮವಾರವಾಗಿದ್ದರಿಂದ ಪೂಜೆಯ ಮೆರಗು ಬಂದಿತ್ತು. ಬೆಳಗ್ಗೆ ದೇವರಿಗೆ ಬೆಳ್ಳಿಮುಖದಿಂದ ಪೂಜೆ ನಡೆಸಲಾಯಿತು. ಬಸವ ಜನ್ಮಸ್ಥಳ ಖ್ಯಾತಿಯ ಪಟ್ಟಣದಲ್ಲಿದೇವಸ್ಥಾನ ಬಂದ್‌ನಿಂದ ಪರ ಊರಿನ ಭಕ್ತ ವೃಂದವೂ ಹಳಹಳಿಸಿತ್ತು.
Vijaya Karnataka Web 08BBD1 [A] (BASAV)_38


ಲಾಕ್‌ಡೌನ್‌ ತೆರವು ನಂತರ ಕೆಲವು ಕಟ್ಟಳೆಗಳೊಂದಿಗೆ ತಿಂಗಳುಗಳ ಬಳಿಕ ತೆರೆದುಕೊಂಡ ದೇವಸ್ಥಾನಕ್ಕೆ ಪವಿತ್ರ ಸೋಮವಾರ 5 ತಾಸು 38 ನಿಮಿಷದಲ್ಲಿ424 ಭಕ್ತರು ದರ್ಶನ ಪಡೆದರು. ಬೆಳಗ್ಗೆ 6.30ಕ್ಕೆ ತೆರೆದ ದೇವಸ್ಥಾನ ಮುಖ್ಯ ದ್ವಾರ, ಗರ್ಭಗುಡಿ ಬಾಗಿಲು ಮಧ್ಯಾಹ್ನದ 12 ಗಂಟೆ 8 ನಿಮಿಷಕ್ಕೆ ಬಾಗಿಲು ಮುಚ್ಚಿದವು. ದೇವಸ್ಥಾನದ ಪ್ರವೇಶ ವಿಶಾಲ ಬಾಗಿಲಲ್ಲಿಸ್ಕ್ರೀನಿಂಗ್‌ ಮಾಡಿ, ಸ್ಯಾನಿಟೈಸರ್‌ ಹಾಕಿದ್ದಲ್ಲದೇ ದರುಶನಕಾರರ ಹೆಸರು, ದೂರವಾಣಿ ಸಂಖ್ಯೆ ಬರೆದುಕೊಂಡು ಒಳ ಬಿಡಲಾಯಿತು.

ಭಕ್ತರು ತೆಂಗಿನಕಾಯಿ, ಕರ್ಪೂರ ಸಮೇತ ಬಂದರೂ ತೆಂಗು ಒಡೆಯಲು ಅವಕಾಶ ಇಲ್ಲದ್ದರಿಂದ ದೇವಸ್ಥಾನದ ಒಂದು ಮೂಲೆಯಲ್ಲಿಅವುಗಳನ್ನು ಇರಿಸಲಾಯಿತು. ಜತೆಗೆ ಇನ್ನೂ ಪ್ಲಾಸ್ಟಿಕ್‌ ಬಳಕೆ ಜಗಜ್ಜಾಹೀರು ಎಂಬುದನ್ನು ತೆಂಗು ಇರಿಸಿಕೊಂಡ ಪ್ಲಾಸ್ಟಿಕ್‌ ಚೀಲಗಳು ಸಾರಿ ಹೇಳಿದವು. ಆವರಣದ ನಾನಾ ಕಡೆ ಅಂತರಕ್ಕಾಗಿ ಬಾಕ್ಸ್‌ ಬರೆಯಲಾಗಿದೆ. ಒಟ್ಟಾರೆ ಪ್ರಸಿದ್ಧ ಬಸವೇಶ್ವರ ದೇವಸ್ಥಾನ ತೆರೆದಿದ್ದು ಭಕ್ತರಲ್ಲಿನೆಮ್ಮದಿ ತಂದಿದೆ.

ಕೊರೊನಾ ಶುಚಿತ್ವ ದೃಷ್ಟಿಯಿಂದ ತೀರ್ಥ ಪ್ರಸಾದ, ತೆಂಗು ಒಡೆಯಲು ಅವಕಾಶವಿಲ್ಲದಿದ್ದರೂ ಗರ್ಭಗುಡಿವರೆಗೆ ಪ್ರವೇಶಿಸಿ ದರ್ಶನ ಭಾಗ್ಯ ಕಲ್ಪಿಸಿಕೊಟ್ಟಿರುವುದು ಸಂತಸ ತಂದಿದೆ. ಸ್ಕ್ರೀನಿಂಗ್‌, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಿದ್ದಾರೆ.
- ಶರಣಪ್ಪ, ಭಕ್ತ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ