ಆ್ಯಪ್ನಗರ

ನೆಲ-ಜಲ ಪ್ರಶ್ನೆ ಬಂದಾಗ ರಾಜಿ ಮಾತೇ ಇಲ್ಲ..! ಬೆಳಗಾವಿಯ ಒಂದಿಂಚು ಭೂಮಿ ಬಿಡಲ್ಲ ಎಂದ ಕಾರಜೋಳ

ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಟ್ವೀಟ್‌ ಮೂಲಕ ಬೆಳಗಾವಿ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ನೆಲ-ಜಲ ಪ್ರಶ್ನೆ ಬಂದಾಗ ರಾಜಿ ಮಾತೇ ಇಲ್ಲ. ಬೆಳಗಾವಿಯ ಒಂದಿಂಚು ಭೂಮಿ ಬಿಡಲ್ಲ ಎಂದು ಹೇಳಿದ್ದಾರೆ.

Vijaya Karnataka Web 18 Jan 2021, 6:03 pm
ವಿಜಯಪುರ: ಬೆಳಗಾವಿಯ ಒಂದಿಂಚೂ ನೆಲ ಬಿಡುವ ಮಾತೇ ಇಲ್ಲ. ಸಿಎಂ ಆದವರು ಸಂವಿಧಾನದ ಚೌಕಟ್ಟಿನಲ್ಲಿ ಮಾತನಾಡಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
Vijaya Karnataka Web Govind Karjol
ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ (ಸಂಗ್ರಹ ಚಿತ್ರ)


ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿಯಲ್ಲಿ ಬೋರಿ ಹಳ್ಳದ ಬ್ಯಾರೇಜ್ ನಿರ್ಮಾಣಕ್ಕೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಒಕ್ಕೂಟ ವ್ಯವಸ್ಥೆ. ಸಿಎಂ ಆದವರಿಗೆ ಒಕ್ಕೂಟ ವ್ಯವಸ್ಥೆಯ ಪ್ರಜ್ಞೆ ಇರಬೇಕು. ಉದ್ಧಟತನದ ಹೇಳಿಕೆ ನೀಡುವುದು ಸರಿಯಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಸಿಎಂ ಆದವರು ಮಾತನಾಡಬೇಕು ಎಂದು ಬುದ್ಧಿವಾದ ಹೇಳಿದರು.

ದೇಶದಲ್ಲಿ ಎಲ್ಲ ಭಾಷೆ ಕಲಿತು ಮಾತನಾಡಬೇಕು. ಹಾದಿ-ಬೀದಿಯಲ್ಲಿ ನಿಂತು ಮಾತನಾಡುವುದು ಸರಿಯಲ್ಲ. ನಮ್ಮ ನೆಲ-ಜಲ ಪ್ರಶ್ನೆ ಬಂದಾಗ ರಾಜಿ ಪ್ರಶ್ನೆಯೇ ಇಲ್ಲ. ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದಾಗ ಮರಾಠಿಗರು ತುಂಬಾ ಸಹಕಾರದಿಂದ ಸಹೋದರರಂತೆ ಕನ್ನಡಾಂಬೆ ಹಬ್ಬವನ್ನು ಆಚರಿಸಿದ್ದರು ಎಂದು ಕಾರಜೋಳ ತಿಳಿಸಿದರು.
ಅತೃಪ್ತಿಯಿದ್ದರೆ ಪಕ್ಷದ ವೇದಿಕೆಯಲ್ಲೇ ಕಾರಿಕೊಳ್ಳಬೇಕು: ಯತ್ನಾಳ್‌ ವಿರುದ್ಧ ರಮೇಶ್‌ ಜಿಗಜಿಣಗಿ ವಾಗ್ದಾಳಿ'ಸಿದ್ದರಾಮಯ್ಯ ಬಿಜೆಪಿ ವಕ್ತಾರ ಅಲ್ಲ'
ಏಪ್ರಿಲ್‌ನಲ್ಲಿ ಸಿಎಂ ಬದಲಾವಣೆ ಆಗುತ್ತದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಏನು ಬಿಜೆಪಿ ವಕ್ತಾರರೇನು? ಎಂದು ಪ್ರಶ್ನಿಸಿದರು. ಅವರು ಮತ್ತೊಮ್ಮೆ ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದಾರೆ, ಅದು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.
ಏಪ್ರಿಲ್‌ ಬಳಿಕ ಯಡಿಯೂರಪ್ಪ ತಲೆದಂಡ ಖಚಿತ: ಮೈಸೂರಲ್ಲಿ ಸಿದ್ದರಾಮಯ್ಯ ಪುನರುಚ್ಛಾರಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಭಾನುವಾರ ಟ್ವೀಟ್‌ ಮಾಡುವ ಮೂಲಕ ಗಡಿ ವಿವಾದವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದರು. ಭಾಷಾವಾರು ಪ್ರಾಂತ್ಯ ವಿಂಗಡಣೆ ವೇಳೆ ಕರ್ನಾಟಕಕ್ಕೆ ಸೇರ್ಪಡೆಯಾಗಿರುವ ಪ್ರದೇಶಗಳನ್ನು ಮರಳಿ ಪಡೆಯುವುದೇ ಮರಾಠಾ ಹುತಾತ್ಮರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದ್ದರು.
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು: ಕರ್ನಾಟಕ ಆಕ್ರಮಿತ ಪ್ರದೇಶ ಎನ್ನುವ ಮೂಲಕ ಠಾಕ್ರೆ ಮತ್ತೆ ವಿವಾದಅದಲ್ಲದೇ ಮರಾಠಾ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಬೆಳಗಾವಿ ಹಾಗೂ ಇತರ ಪ್ರದೇಶಗಳು ಮತ್ತೆ ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕು. ಈ ವಿಚಾರದಲ್ಲಿ ರಾಜ್ಯದ ರಾಜಕೀಯ ಪಕ್ಷಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಈ ಪ್ರದೇಶಗಳನ್ನು ಕರ್ನಾಟಕ ಆಕ್ರಮಿತ ಪ್ರದೇಶವೆಂದು ಘೋಷಿಸುತ್ತೇವೆ ಎಂದೂ ಠಾಕ್ರೆ ತಿಳಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ