ಆ್ಯಪ್ನಗರ

ಭಟ್ಟಿಗೆ ಬಂದ ನಾಯಿಗಳ ಕೊಂದ

ಚಡಚಣ : ಬೇರೆಯವರು ಸಾಕಿದ ನಾಯಿಗಳು ತನ್ನ ಇಟ್ಟಂಗಿ ಭಟಿಯ ಮಣ್ಣನ್ನು ಹಾಳು ಮಾಡುತ್ತಿವೆ ಎಂಬ ಕ್ಷ ುಲ್ಲಕ್ಕ ಕಾರಣಕ್ಕೆ ಮಾಲಿಕ ಗೊಲ್ಲರ ಸಹಾಯದಿಂದ ಸುಮಾರು 15 ನಾಯಿಗಳ ಮಾರಣಹೋಮ ನಡೆಸಿದ ಹ್ರದಯ ಕಲುಕುವ ಘಟನೆ ಪಟ್ಟಣದಲ್ಲಿ ನಡೆದಿದೆ.

Vijaya Karnataka 12 Dec 2018, 5:00 am
ಚಡಚಣ : ಬೇರೆಯವರು ಸಾಕಿದ ನಾಯಿಗಳು ತನ್ನ ಇಟ್ಟಂಗಿ ಭಟಿಯ ಮಣ್ಣನ್ನು ಹಾಳು ಮಾಡುತ್ತಿವೆ ಎಂಬ ಕ್ಷ ುಲ್ಲಕ್ಕ ಕಾರಣಕ್ಕೆ ಮಾಲಿಕ ಗೊಲ್ಲರ ಸಹಾಯದಿಂದ ಸುಮಾರು 15 ನಾಯಿಗಳ ಮಾರಣಹೋಮ ನಡೆಸಿದ ಹ್ರದಯ ಕಲುಕುವ ಘಟನೆ ಪಟ್ಟಣದಲ್ಲಿ ನಡೆದಿದೆ.
Vijaya Karnataka Web news/vijayapura/dogs
ಭಟ್ಟಿಗೆ ಬಂದ ನಾಯಿಗಳ ಕೊಂದ


ಪಟ್ಟಣದ ಪಂಡರಪೂರ ರಸ್ತೆಯ ಪಕ್ಕದಲ್ಲಿರುವ ಮಕಾಂದಾರ ಇಟ್ಟಿಂಗಿ ಭಟ್ಟಿ ಮಾಲಿಕ ಇದಕ್ಕೆ ಕಾರಣ ಎಂದು ನಾಯಿಗಳ ಮಾಲೀಕರಾದ ಹುಮಾಯುನ ಪಟೇಲ, ಸಂಗಪ್ಪ ಅಚ್ಚಿಗಾಂವ, ಮಹಾದೇವ ಕೇಶೆಟ್ಟಿ, ಸೋಮು ಬಡಗೇರಿ ಆರೋಪಿಸಿದ್ದಾರೆ.

ಈತನ ಭಟ್ಟಿ ಸುತ್ತಮುತ್ತಲಿನ ಹೊಲಗಳಲ್ಲಿ ಸಾಕಿದ 15 ನಾಯಿಗಳನ್ನು ಈತ ಕೊಲ್ಲಿಸಿದ್ದಾನೆ. ಪಂಡರಪೂರ ರಸ್ತೆಯ ಪಕ್ಕದಲ್ಲಿ ಗುಂಡಿಯನ್ನು ತೊಡಿ ಮುಚ್ಚಿದ್ದಾನೆ. ಕಳೆದ ನಾಲ್ಕು ದಿನಗಳಿಂದ ತಮ್ಮ ನಾಯಿಗಳಿಗಾಗಿ ಹುಡುಕಾಡುತ್ತಿದ್ದ ಮಾಲೀಕರಿಗೆ ಮಂಗಳವಾರ ಮಧ್ಯಾಹ್ನ ತಮ್ಮ ನಾಯಿಗಳನ್ನು ಕ್ಷ ುಲ್ಲಕ ಕಾರಣಕ್ಕೆ ಕೆಲವು ದಿನಗಳ ಹಿಂದೆ ಕೊಂದು ಹಾಕಲಾಗಿದೆ ಎಂದು ತಿಳಿದು ಮರಗಿದ್ದಾರೆ..ಇದನ್ನು ತಿಳಿದ ಸ್ಥಳಕ್ಕೆ ಆಗಮಿಸಿದ್ದ ನಾಯಿಗಳ ಮಾಲಿಕರು ಜಿಸಿಬಿ ಮುಖಾಂತರ ಗುಂಡಿಯನ್ನು ಅಗೆದಾಗ ಸುಮಾರು 15 ನಾಯಿಗಳ ಕಳೆಬರಹಗಳು ಸಿಕ್ಕಿವೆ.ನಾಯಿಗಳನ್ನು ಕಳೆದುಕೊಂಡ ಮಾಲಿಕರು ಅಕ್ಷ ರಶಃ ಕಂಗಾಲಾಗಿದ್ದಾರೆ.

ತಮ್ಮ ನಾಯಿಗಳಿಂದ ಇಟ್ಟಿಂಗಿ ಭಟ್ಟಿಗೆ ನಷ್ಟವಾಗಿ ಅದನ್ನು ತಮ್ಮ ಗಮನಕ್ಕೆ ತಂದಿದ್ದರೆ ನಾವು ಹಣವನ್ನು ನೀಡುತ್ತಿದ್ದೆವು. ಆದರೆ ಅನೇಕ ವರ್ಷಗಳಿಂದ ಪ್ರಾಣಕ್ಕಿಂತಲೂ ಹೆಚ್ಚಾಗಿ ಸಾಕಿದ ನಾಯಿಗಳನ್ನು ನಿರ್ದಾಕ್ಷಿಣ್ಯವಾಗಿ ಕೊಂದಿರುವುದು ನಮ್ಮ ಕರಳು ಕೊಯದಂತೆ ಆಗಿದೆ.ಈ ಪ್ರಾಣಿಗಳ ಹತ್ಯೆಯನ್ನು ಮಾಡಿದ ಈ ವ್ಯಕ್ತಿಗೆ ಶಿಕ್ಷೆಯಾಗಬೇಕು ಎಂದು ಮಾಲಿಕರು ಆಗ್ರಹಿಸಿದ್ದಾರೆ.

' ನನ್ನ ಹತ್ತಿರ ಮೂರು ನಾಯಿಗಳಿದ್ದವು. ನನ್ನ ಹೊಲದಲ್ಲಿ ಲಕ್ಷಾಂತರ ಬೆಲೆಬಾಳುವ ವಸ್ತುಗಳಿದ್ದು ಅವುಗಳನ್ನು ಮನೆ ಮಕ್ಕಳಂತೆ ಕಾಯುತ್ತಿದ್ದವು.ನಾನು ರಾತ್ರಿ ಮನೆಯಲಿದ್ದಾಗ ನನ್ನ ಜಮೀನಿನ್ನು ಮತ್ತು ಜಾನುವಾರುಗಳನ್ನು ಕಾಯುವದು ನನ್ನ ಪ್ರೀತಿಯ ನಾಯಿಗಳೆ. ಸುಮಾರು 10 ಸಾವಿರ ಖರ್ಚುಮಾಡಿ ಎರಡು ನಾಯಿಗಳನ್ನು ಮತ್ತು ಒಂದು ಜವಾರಿ ನಾಯಿಯನ್ನು ತಂದು ವರ್ಷಗಳಿಂದ ಅತ್ಯಂತ ಪ್ರೀತಿಯಿಂದ ಸಾಕಿದ್ದೆ. ಆದರೆ ನನ್ನ ಮೂರು ನಾಯಿಗಳನ್ನು ವ್ಯಕ್ತಿಯೊರ್ವ ಕೊಂದಿರುವುದು ನನಗೆ ಕತ್ತು ಹಿಸುಕಿದಂತಾಗಿದೆ ' ಎಂದು ನಾಯಿಯ ಮಾಲಿಕ ಹುಮಾಯುನ ಪಟೇಲ ಬೇಸರದಿಂದಲೇ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ