ಆ್ಯಪ್ನಗರ

ಎತ್ತುಗಳಿಗೆ ವೈರಸ್‌ ತಗುಲಬಾರದೆಂದು ರೈತ ಮಾಡಿದ ಪ್ಲಾನ್‌, ಎಲ್ಲೆಡೆ ಮೆಚ್ಚುಗೆ

ಗ್ರಾಮಗಳಲ್ಲಿ ರೈತರು ತಮ್ಮನ್ನು ತಾವು ವೈರಸ್‌ನಿಂದ ಕಾಪಾಡಿಕೊಳ್ಳುತ್ತಿರುವುದು ಮಾತ್ರವಲ್ಲ ತಮ್ಮ ನೆಚ್ಚಿನ ಸಾಕು ಪ್ರಾಣಿಗಳನ್ನು ಮಹಾಮಾರಿಯಿಂದ ದೂರ ಇಡಲು ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

Vijaya Karnataka Web 30 Mar 2020, 12:50 pm
ಬೆಂಗಳೂರು: ಕೊರೊನಾ ವೈರಸ್‌ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ಭಯದ ಜಗತ್ತಿಗೆ ದೂಡಿದೆ. ಇಡೀ ವಿಶ್ವದಲ್ಲಿ ಈಗ ಕೊರೊನಾ ತಡೆಗೆ ಭಾರಿ ಮುನ್ನೆಚ್ಚರಿಕೆ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
Vijaya Karnataka Web ವಿಜಯಪುರ ರೈತ
ವಿಜಯಪುರ ರೈತ


ಭಾರತ ಮತ್ತು ಕರ್ನಾಟಕದಲ್ಲಿಯೂ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಅಭೂತಪೂರ್ವ ರೀತಿಯಲ್ಲಿ ಜಾರಿಗೆ ತರಲಾಗಿದೆ. ಇದು ನಗರ ಪ್ರದೇಶದಲ್ಲಿ ಮಾತ್ರವಲ್ಲ, ಗ್ರಾಮಗಳಲ್ಲಿಯೂ ಜಾಗೃತಿ ಮೂಡಿಸಿದೆ.

ಗ್ರಾಮಗಳಲ್ಲಿ ರೈತರು ತಮ್ಮನ್ನು ತಾವು ವೈರಸ್‌ನಿಂದ ಕಾಪಾಡಿಕೊಳ್ಳುತ್ತಿರುವುದು ಮಾತ್ರವಲ್ಲ ತಮ್ಮ ನೆಚ್ಚಿನ ಸಾಕು ಪ್ರಾಣಿಗಳನ್ನು ಮಹಾಮಾರಿಯಿಂದ ದೂರ ಇಡಲು ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ವಿಜಯಪುರದ ರೈತನೊಬ್ಬರು ತಾವು ಮಾತ್ರವಲ್ಲದೇ ಎತ್ತುಗಳನ್ನು ಕಾಪಾಡಿಕೊಂಡ ರೀತಿಗೆ ನಿಜಕ್ಕೂ ಹ್ಯಾಟ್ಸಾಫ್‌ ಎನ್ನಬೇಕು.

ಉತ್ತರ ಕರ್ನಾಟಕದ ವಿಭಿನ್ನ ರೀತಿಯ ಬುದ್ಧಿಮತ್ತೆಯನ್ನು ಕಂಡುಕೊಂಡಿದ್ದಾರೆ ಈ ಅನ್ನದಾತರಾದ ವಿಜಯಪುರದ ಹೊಸೂರು ಗ್ರಾಮದ ರೇವಪ್ಪ ಮದರಿ.

ಈ ಎತ್ತುಗಳು ಗ್ರಾಮದ ರಾಮಕೃಷ್ಣ ಓಂಕಾರರವರಿಗೆ ಸೇರಿದ್ದಾಗಿದೆ. ಇದರ ದೇಕರೇಕಿ ಮಾಡುತ್ತಿರುವ ರೇವಪ್ಪ ಮದರಿ ಟವಲ್‌ ಅನ್ನು ಮಾಸ್ಕ್‌ ಮಾದರಿಯಲ್ಲಿ ಧರಿಸಿಕೊಂಡಿದ್ದಾರೆ. ಅಲ್ಲದೇ ಕೆಲವು ಎರಡು ಚೀಲಗಳನ್ನು ಎತ್ತುಗಳ ಮುಖಕ್ಕೆ ಕಟ್ಟಿ ವೈರಸ್ ನಿಯಂತ್ರಣಕ್ಕೆ ತಮ್ಮದೇ ರೀತಿಯಲ್ಲಿ

ತಮಗೆ ಅನ್ನ ನೀಡುತ್ತಿರುವ ಎತ್ತುಗಳಿಗೂ ಮಾಸ್ಕ್‌ ತೊಡಗಿಸಿದ ರೈತರ ರೇವಪ್ಪ ಮದರಿಯ ಕಾರ್ಯ ನಿಜಕ್ಕೂ ಎಲ್ಲರಿಗೂ ಮಾದರಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ