ಆ್ಯಪ್ನಗರ

ಅಖಾಡದಲ್ಲಿ ‘ಡಜನ್‌’ಅಭ್ಯರ್ಥಿಗಳ ಸೆಣಸಾಟ

ವಿಜಯಪುರ : ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದಿಂದ 15 ಅಭ್ಯರ್ಥಿಗಳ ಪೈಕಿ 3 ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದು, ಅಂತಿಮ ಕಣದಲ್ಲಿ 12 ಅಭ್ಯರ್ಥಿಗಳಿದ್ದಾರೆ.

Vijaya Karnataka 9 Apr 2019, 5:00 am
ವಿಜಯಪುರ : ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದಿಂದ 15 ಅಭ್ಯರ್ಥಿಗಳ ಪೈಕಿ 3 ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದು, ಅಂತಿಮ ಕಣದಲ್ಲಿ 12 ಅಭ್ಯರ್ಥಿಗಳಿದ್ದಾರೆ.
Vijaya Karnataka Web fighting dozen candidates in the ring
ಅಖಾಡದಲ್ಲಿ ‘ಡಜನ್‌’ಅಭ್ಯರ್ಥಿಗಳ ಸೆಣಸಾಟ


ಬಿಜೆಪಿಯಿಂದ ರಮೇಶ ಜಿಗಜಿಣಗಿ, ಮೈತ್ರಿ ಅಭ್ಯರ್ಥಿ ಡಾ.ಸುನಿತಾ ದೇವಾನಂದ ಚೌಹಾಣ್‌ ಹಾಗೂ ಬಿಎಸ್‌ಪಿಯಿಂದ ಶ್ರೀನಾಥ ಪೂಜಾರಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.

ಸೋಮವಾರ ನಾಮಪತ್ರ ವಾಪಸ್‌ ಪಡೆಯುವ ಪ್ರಕ್ರಿಯೆ ಮುಕ್ತಾಯಗೊಂಡಿದ್ದು , ನಾಮಪತ್ರ ಕ್ರಮಬದ್ಧ ಆಗಿದ್ದ 15 ಅಭ್ಯರ್ಥಿಗಳ ಪೈಕಿ ಶಿವಸೇನಾದ ಮಹಾದೇವ ರಾಠೋಡ, ಪಕ್ಷೇತರರಾದ ಮರಗಣ್ಣ ಹೊನ್ನೂರ ಹಾಗೂ ರಾಹುಲ್‌ ಭಾಸ್ಕರ್‌ ಅವರು ಉಮೇದುವಾರಿಕೆ ವಾಪಸ್‌ ಪಡೆದುಕೊಂಡರು. ಅಂತಿಮ ಕಣದಲ್ಲಿ ಡಜನ್‌ ಅಭ್ಯರ್ಥಿಗಳಿದ್ದು, ಗೆಲುವಿಗೆ ಸೆಣೆಸಲಿದ್ದಾರೆ.

ಅಖಾಡದಲ್ಲಿನ ಅಭ್ಯರ್ಥಿಗಳು:

ರಮೇಶ ಜಿಗಜಿಣಗಿ (ಬಿಜೆಪಿ), ಶ್ರೀನಾಥ ಪೂಜಾರಿ (ಬಹುಜನ ಸಮಾಜ ಪಾರ್ಟಿ), ಡಾ.ಸುನಿತಾ ಚೌಹಾಣ್‌ (ಜೆಡಿಎಸ್‌), ಗುರುಬಸವ ರಬಕವಿ (ಉತ್ತಮ ಪ್ರಜಾಕೀಯ ಪಾರ್ಟಿ), ದೀಪಕ್‌ ಗಂಗಾರಾಮ ಕಟಕದೊಂಡ ಉರ್ಫ ವೆಂಕಟೇಶ್ವರ ಮಹಾಸ್ವಾಮೀಜಿ (ಹಿಂದೂಸ್ತಾನ ಜನತಾ ಪಾರ್ಟಿ), ಯಮನಪ್ಪ ವಿಠ್ಠಲ ಗುಣದಾಳ (ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ), ರುದ್ರಪ್ಪ ಚಲವಾದಿ (ಭಾರಿಪಾ ಬಹುಜನ ಮಹಾಸಂಘ) ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ದಾದಾಸಾಬ ಸಿದ್ದಪ್ಪ ಬಾಗಾಯತ, ದೊಂಡಿಬಾ ರಾಠೋಡ, ಧರೆಪ್ಪ ಮಹದೇವ ಅರ್ಧವರ, ಬಾಲಾಜಿ ದ್ಯಾಮಣ್ಣ ವಡ್ಡರ, ರಾಮಪ್ಪ ಹರಿಜನ ಉರ್ಫ ಹೊಲೇರ ಅಂತಿಮ ಕಣದಲ್ಲಿದ್ದಾರೆ.

ಅಖಾಡದಲ್ಲಿ 12 ಅಭ್ಯರ್ಥಿಗಳಿರುವುದರಿಂದ ಒಂದೇ ಇವಿಎಂ ಬಳಕೆಯಾಗಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾಗಠಾಣ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ದೀಪಕ ಗಂಗಾರಾಮ ಕಟಕದೊಂಡ ಉರ್ಫ ವೆಂಕಟೇಶ್ವರ ಮಹಾಸ್ವಾಮೀಜಿ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ