ಆ್ಯಪ್ನಗರ

ವಲಸೆ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ

ತಿಕೋಟಾ: ಭಾರತ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕೆಲಸವಿಲ್ಲದೆ ತೊಂದರೆಯಾಗಿ ಸ್ವಗ್ರಾಮ ಕಳ್ಳಕವಟಗಿ ತಾಂಡಾಕ್ಕೆ ಮರಳಿದ ಕುಟುಂಬಗಳಿಗೆ ಘೋಣಸಗಿ ಗ್ರಾಪಂ ಅಧ್ಯಕ್ಷ ಗುರುಲಿಂಗ ಮಾಳಿ ನೇತೃತ್ವದಲ್ಲಿಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

Vijaya Karnataka 31 Mar 2020, 5:00 am
ತಿಕೋಟಾ: ಭಾರತ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕೆಲಸವಿಲ್ಲದೆ ತೊಂದರೆಯಾಗಿ ಸ್ವಗ್ರಾಮ ಕಳ್ಳಕವಟಗಿ ತಾಂಡಾಕ್ಕೆ ಮರಳಿದ ಕುಟುಂಬಗಳಿಗೆ ಘೋಣಸಗಿ ಗ್ರಾಪಂ ಅಧ್ಯಕ್ಷ ಗುರುಲಿಂಗ ಮಾಳಿ ನೇತೃತ್ವದಲ್ಲಿಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
Vijaya Karnataka Web food grain distribution to migrant families
ವಲಸೆ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ


ತಾಂಡಾಕ್ಕೆ ಆಗಮಿಸಿದ 30 ಜನರ ಮಾಹಿತಿ ಪಡೆದ ಗ್ರಾಪಂ ಅಧ್ಯಕ್ಷ ಗುರಲಿಂಗ ಮಾಳಿ ಘೋಣಸಗಿ, ಆರೋಗ್ಯ ಉಪಕೇಂದ್ರದ ಆರೋಗ್ಯಾಧಿಕಾರಿ ಜಮಾಲುದ್ದಿನ ಮುಲ್ಲಾ, ಪಿಡಿಒ ರಾಜಶ್ರೀ ತುಂಗಳ ಭೇಟಿ ನೀಡಿ ಜೋಳ, ಬೇಳೆ, ಸಕ್ಕರೆ, ಅಕ್ಕಿ , ಅಡುಗೆ ಎಣ್ಣೆ ಮತ್ತಿತರ ವಸ್ತುಗಳನ್ನು ವಿತರಿಸಿದರು.

ಆರೋಗ್ಯಾಧಿಕಾರಿ ಜಮಾಲುದ್ದೀನ್‌ ಮುಲ್ಲಾಮಾತನಾಡಿ, ಎಲ್ಲಕುಟುಂಬದವರು 14 ದಿನ ಮನೆಯಲ್ಲೇ ಇರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಯಾರಿಗಾದರೂ ಜ್ವರ ಕೆಮ್ಮು , ನೆಗಡಿ ಕಂಡುಬಂದರೆ ತಕ್ಷಣೆ ಸಹಾಯವಾಣಿಗೆ ಕರೆ ಮಾಡಬೇಕು, ಗ್ರಾಪಂ ಗಮನಕ್ಕೆ ತರಬೇಕೆಂದು ಸೂಚನೆ ನೀಡಿದರು.

ಎಂ.ಬಿ.ಪಾಟೀಲ ಫೌಂಡೇಶನ್‌ ನಿರ್ದೇಶಕ ಶಂಕರಗೌಡ ಬಿರಾದಾರ, ಗ್ರಾಪಂ ಸಿಬ್ಬಂದಿ ಶ್ರೀಶೈಲ ಖವಿ, ಆಶಾ ಕಾರ್ಯಕರ್ತೆ ಅಶ್ವಿನಿ ಗಿಡ್ನವರ್‌, ಸಿದ್ದಪ್ಪ ಗದ್ಯಾಳ ಸಚಿನ ಝಂಡೆ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ