ಆ್ಯಪ್ನಗರ

ನಿಧಿ ಆಸೆ, ವಿಗ್ರಹ ವಿರೂಪಕ್ಕೆ ಯತ್ನ

ಸಿಂದಗಿ: ನಿಧಿ ಆಸೆಗಾಗಿ ಚಾಲುಕ್ಯರ ಕಾಲದ ಕಕ್ಕಳಮೇಲಿ ಶಂಭುಲಿಂಗ ದೇವಸ್ಥಾನದಲ್ಲಿ ನಂದಿ ವಿಗ್ರಹ ವಿರೂಪಗೊಳಿಸಲು ಯತ್ನಿಸಿದ ಘಟನೆ ಸಿಂದಗಿ ತಾಲೂಕಿನ ಕಕ್ಕಳಮೇಲಿಯಲ್ಲಿ ನಡೆದಿದೆ.

Vijaya Karnataka 5 May 2019, 5:00 am
ಸಿಂದಗಿ: ನಿಧಿ ಆಸೆಗಾಗಿ ಚಾಲುಕ್ಯರ ಕಾಲದ ಕಕ್ಕಳಮೇಲಿ ಶಂಭುಲಿಂಗ ದೇವಸ್ಥಾನದಲ್ಲಿ ನಂದಿ ವಿಗ್ರಹ ವಿರೂಪಗೊಳಿಸಲು ಯತ್ನಿಸಿದ ಘಟನೆ ಸಿಂದಗಿ ತಾಲೂಕಿನ ಕಕ್ಕಳಮೇಲಿಯಲ್ಲಿ ನಡೆದಿದೆ.
Vijaya Karnataka Web fundraising attempting idol deformation
ನಿಧಿ ಆಸೆ, ವಿಗ್ರಹ ವಿರೂಪಕ್ಕೆ ಯತ್ನ


ಅಮಾವಾಸ್ಯೆ ಹಿನ್ನೆಲೆಯಲ್ಲಿ ಶುಕ್ರವಾರ ತಡರಾತ್ರಿ ಗ್ರಾಮದಿಂದ ಅಂದಾಜು 1.5 ಕಿಮೀ ದೂರದಲ್ಲಿರುವ ದೇವಸ್ಥಾನದಲ್ಲಿ ದುಷ್ಕರ್ಮಿಗಳು ನಿಧಿ ಆಸೆಗಾಗಿ ಲಿಂಗದ ಮುಂದಿರುವ ನಂದಿ ವಿಗ್ರಹವನ್ನು ಪಕ್ಕಕ್ಕೆ ಸರಿಸಿ ಕಬ್ಬಿಣದ ಸಲಾಕೆಯಿಂದ ಅಗೆಯಲು ಯತ್ನಿಸಿದ್ದಾರೆ. ವಿಗ್ರಹದ ಕೆಳಭಾಗ ಕಾಂಕ್ರಿಟ್‌ ಹಾಕಿರುವುದರಿಂದ ಅವರ ಪ್ರಯತ್ನ ಫಲಕಾರಿಯಾಗಿಲ್ಲ ಎನ್ನಲಾಗುತ್ತಿದೆ.

ಅಲ್ಲದೇ ಅಲ್ಲಿರುವ ಲಕ್ಷ್ಮೀ ಮತ್ತು ಗಣಪತಿ ವಿಗ್ರಹಗಳನ್ನು ಕದ್ದುಕೊಂಡು ಹೋಗಿದ್ದು, ಗ್ರಾಮದಲ್ಲಿ ಆತಂಕದ ಛಾಯೆ ಮೂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಂದ ಯಾವುದೇ ದೂರು ದಾಖಲಾಗಿಲ್ಲ. ಪೊಲೀಸರೇ ಸ್ವಯಂ ಪ್ರೇರಿತರಾಗಿ ಸ್ಥಳಕ್ಕೆ ಭೇಟಿ ನೀಡಿ, ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ