ಆ್ಯಪ್ನಗರ

‘ಕೈಗೆ’ ಸಿಗುವಂತೆ ಒತ್ತಡ

ವಿಜಯಪುರ : ವಿಜಯಪುರ ಎಸ್‌ಸಿ ಮೀಸಲು ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವಂತೆ ನಾವೂ ಕೇಳಿದ್ದೇವೆ, ಜೆಡಿಎಸ್‌ನವರೂ ಕೇಳಿದ್ದಾರೆ. ಈ ಬಗ್ಗೆ ಮಾ.11ರಂದು ದಿಲ್ಲಿ ನಡೆಯುವ ಚುನಾವಣೆ ಸ್ಕ್ರೀನಿಂಗ್‌ ಕಮೀಟಿ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

Vijaya Karnataka 9 Mar 2019, 5:00 am
ವಿಜಯಪುರ : ವಿಜಯಪುರ ಎಸ್‌ಸಿ ಮೀಸಲು ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವಂತೆ ನಾವೂ ಕೇಳಿದ್ದೇವೆ, ಜೆಡಿಎಸ್‌ನವರೂ ಕೇಳಿದ್ದಾರೆ. ಈ ಬಗ್ಗೆ ಮಾ.11ರಂದು ದಿಲ್ಲಿ ನಡೆಯುವ ಚುನಾವಣೆ ಸ್ಕ್ರೀನಿಂಗ್‌ ಕಮೀಟಿ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
Vijaya Karnataka Web news/vijayapura/hands
‘ಕೈಗೆ’ ಸಿಗುವಂತೆ ಒತ್ತಡ


ಕವಟಗಿಯಲ್ಲಿ ಶುಕ್ರವಾರ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಕಳೆದೆರಡು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಜೆಡಿಎಸ್‌ಗಿಂತ ಕಾಂಗ್ರೆಸ್‌ ಹೆಚ್ಚು ಮತಗಳನ್ನು ಪಡೆದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಜೆಡಿಎಸ್‌ಗಿಂತ 3 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡಿದೆ. ಹೀಗಾಗಿ ಮೈತ್ರಿ ಅಭ್ಯರ್ಥಿಯಾಗುವ ಅವಕಾಶವನ್ನು ನಮಗೇ ಕೊಡಬೇಕೆಂದು ನಾವು ಕೇಳಿದ್ದೇವೆ ಎಂದರು.

ನಾನು, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಸಿ.ಎಸ್‌,ನಾಡಗೌಡರು ಚರ್ಚಿಸಿ, ವಿಜಯಪುರ ಕ್ಷೇತ್ರವನ್ನು ನಮ್ಮ ಪಕ್ಷಕೆ ಬಿಟ್ಟುಕೊಡುವಂತೆ ವರಿಷ್ಠರಿಗೂ ಕೇಳಿಕೊಂಡಿದ್ದೇವೆ, ನಾನು ಸ್ಕ್ರೀನಿಂಗ್‌ ಕಮಿಟಿ ಸದಸ್ಯನಿರುವುದರಿಂದ ಇನ್ನಷ್ಟು ಒತ್ತಡ ಹಾಕಿದ್ದೇನೆ ಎಂದೂ ಎಂ.ಬಿ.ಪಾಟೀಲ ತಿಳಿಸಿದರು.

-------

ಮಂಡ್ಯ ಲೋಕಸಭೆ ಕ್ಷೇತ್ರ ಬಹುತೇಕ ಜೆಡಿಎಸ್‌ ಪಾಲಾಗಲಿದ್ದು , ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧಿಸುವ ವಿಚಾರ ನನಗೆ ಗೊತ್ತಿಲ್ಲ.

-ಎಂ.ಬಿ.ಪಾಟೀಲ , ಗೃಹ ಸಚಿವ

--------

ಡೆಡ್‌ಲೈನ್‌ ಎಷ್ಟಾಗಿವೆ ?

ವಿಜಯಪುರ : ಸಮ್ಮಿಶ್ರ ಸರಕಾರ ಪತನಗೊಳ್ಳುತ್ತದೆಂದು ಹೇಳಿಕೊಳ್ಳುವ ಯಡಿಯೂರಪ್ಪ ಅವರಿಗೆ ಅವರಿಗೆ ಅಮಾವಾಸ್ಯೆ, ಹುಣ್ಣಿಮೆ, ಸಂಕ್ರಾಂತಿ, ದೀಪಾವಳಿ ಎಲ್ಲ ಡೆಡ್‌ಲೈನ್‌ ಮುಗಿದಿವೆ. ಆದರೂ ಸರಕಾರ ಮಾತ್ರ ಸುಭದ್ರವಾಗಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಟಾಂಗ್‌ ನೀಡಿದರು.

ಲೋಕಸಭಾ ಚುನಾವಣೆ ಮುಗಿದ ಮೇಲೂ ಸರಕಾರಕ್ಕೆ ಏನು ಆಗಲ್ಲ. ಯಡಿಯೂರಪ್ಪ ಅವರ ಡೆಡ್‌ಲೈನ್‌ ಎಷ್ಟಾಗಿವೆ ನೀವೇ ವಿಚಾರ ಮಾಡಿ ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ