ಆ್ಯಪ್ನಗರ

ನೇಣು ಹಾಕಿ ಕೊಲೆ

ಆಲಮೇಲ : ಹಿಂದು ಸಂಘಟನೆಯ ಕಾರ್ಯಕರ್ತ, ಗೋರಕ್ಷ ಕ ಶಿವಕುಮಾರ ಉಪ್ಪಾರನ್ನು ಬೆಳಗಾವಿ ಜಿಲ್ಲೆಯ ಬಾಗೇವಾಡಿಯಲ್ಲಿ ಗೋ ಹಂತಕರು ಕೊಲೆ ಮಾಡಿ ಬಾಗೇವಾಡಿ ಬಸ್‌ ನಿಲ್ದಾಣದಲ್ಲಿ ನೇಣು ಹಾಕಿ ಕೊಲೆ ಮಾಡಿದ್ದನ್ನು ವಿಶ್ವ ಹಿಂದು ಪರಿಷದ್‌ ಬೆಳಗಾವಿ ವಿಭಾಗದ ಮುಖಂಡ ಶ್ರೀಮಂತ ದುದ್ದಗಿ ಖಂಡಿಸಿದ್ದಾರೆ.

Vijaya Karnataka 28 May 2019, 5:00 am
ಆಲಮೇಲ : ಹಿಂದು ಸಂಘಟನೆಯ ಕಾರ್ಯಕರ್ತ, ಗೋರಕ್ಷ ಕ ಶಿವಕುಮಾರ ಉಪ್ಪಾರನ್ನು ಬೆಳಗಾವಿ ಜಿಲ್ಲೆಯ ಬಾಗೇವಾಡಿಯಲ್ಲಿ ಗೋ ಹಂತಕರು ಕೊಲೆ ಮಾಡಿ ಬಾಗೇವಾಡಿ ಬಸ್‌ ನಿಲ್ದಾಣದಲ್ಲಿ ನೇಣು ಹಾಕಿ ಕೊಲೆ ಮಾಡಿದ್ದನ್ನು ವಿಶ್ವ ಹಿಂದು ಪರಿಷದ್‌ ಬೆಳಗಾವಿ ವಿಭಾಗದ ಮುಖಂಡ ಶ್ರೀಮಂತ ದುದ್ದಗಿ ಖಂಡಿಸಿದ್ದಾರೆ.
Vijaya Karnataka Web hanging and killing
ನೇಣು ಹಾಕಿ ಕೊಲೆ

ಇಲ್ಲಿಯವರೆಗೆ ಪೋಲಿಸರು ಯಾರನ್ನು ಬಂಧಿಸಿಲ್ಲ. ಕರ್ನಾಟಕ ಸಮ್ಮ್ಮಿಶ್ರ ಸರ್ಕಾರ ಹಿಂದು ಸಂಘಟನೆ ಕಾರ್ಯಕರ್ತರನ್ನು ದಮನ ಮಾಡಲಿಕ್ಕೆ ಹೊರಟಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರ ಕುಂಭಕರ್ಣ ನಿದ್ರೆಯಲ್ಲಿದೆ. ರಾಜ್ಯದ ಗೃಹ ಮಂತ್ರಿಗಳು ಎಲ್ಲಿ ಕಾಣೆಯಾಗಿದ್ದಾರೆ ಹುಡುಕಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರಕಾರ ಶಿವುಕುಮಾರ ಉಪ್ಪಾರ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ಘೋಷಿಸಬೇಕು. ಕೊಲೆ ಮಾಡಿದ ಗೋ-ಹಂತಕರನ್ನು ಕೂಡಲೇ ಪೋಲಿಸಲು ಬಂಧಿಸಬೇಕೆಂದು ಕೊಲೆಗಡಕರನ್ನು ಬಂಧಿಸದೇ ಇದ್ದಲ್ಲಿ ವಿಶ್ವ ಹಿಂದು ಪರಿಷತ್‌ ಭಜರಂಗ ದಳ ಸಂಘಟನೆಯ ಕಾರ್ಯಕರ್ತರು ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ