ಆ್ಯಪ್ನಗರ

ತಿಕೋಟಾ: ಹಾಲಗಂಬ ಓಕಳಿ

ತಿಕೋಟಾ : ಪಟ್ಟಣದ ಹನುಮಾನ ದೇವರ ಓಕುಳಿ ಸಂಭ್ರಮದಿಂದ ನಡೆಯಿತು.

Vijaya Karnataka 13 Jun 2019, 5:00 am
ತಿಕೋಟಾ : ಪಟ್ಟಣದ ಹನುಮಾನ ದೇವರ ಓಕುಳಿ ಸಂಭ್ರಮದಿಂದ ನಡೆಯಿತು.
Vijaya Karnataka Web hanuman held the excitement of the lord
ತಿಕೋಟಾ: ಹಾಲಗಂಬ ಓಕಳಿ


ಯುವಕರು ಕಂಬ ಏರಲು ನಾ ಮುಂದು ತಾ ಮುಂದು ಎನ್ನುತ್ತಿದ್ದರೆ, ಜನರು ಅವರಿಗೆ ನೀರು ಎರಚಿ ಸಂಭ್ರಮಿಸುತ್ತಿದ್ದರು.

ಕೊನೆಗೆ ಕಲ್ಲಪ್ಪ ತೋರವಿ ಎಂಬುವರು ಕಂಬ ಏರಿ ಎಲ್ಲರಿಂದಲೂ ಶಬ್ಬಾಸಗಿರಿ ಪಡೆದನು. ಬೆಳಗ್ಗೆಯೇ ಇಲ್ಲಿನ ಕೋಳೋಲಮಠದ ಹತ್ತಿರ ಎತ್ತರದ ಕಂಬ ನೆಡಲಾಗಿತ್ತು. ಹಾಲುಮತ ಸಮಾಜದ ಹನಮಂತ ಶಿಗೊಂಡಿ ಲಂಗುಟಿ ತಲೆ ಮೇಲೆ ಕಂಬಳಿ ಹೊತ್ತು ಅದರ ಮೇಲೆ ಅಂಬಲಿ ಗಡಿಗೆ ಇಟ್ಟುಕೊಂಡು ಮೆರವಣಿಗೆಯಲ್ಲಿ ಕಂಬದ ಹತ್ತಿರ ಬಂದನು. ಗಡಿಗೆಯಲ್ಲಿ ತಂದಿದ್ದ ಅಂಬಲಿಯನ್ನು ಕಂಬಕ್ಕೆ ಹಚ್ಚಲಾಯಿತು. ನಂತರ ಬಿಂದು ಬಡಿಗೇರ ಎಂಬುವರನ್ನು ಮೆರವಣಿಗೆಯಲ್ಲಿ ಕರೆತಂದು ತೊಟ್ಟಿಲ ಮುಖಾಂತರ ಮೇಲೆರಿಸಿ ಕಂಬದ ಮೇಲೆ ಕುಳಿತುಕೊಳ್ಳುವಂತೆ ಮಾಡಿದರು. ಆಗ ಉಳಿದ ಯುವಕು ಕಂಬ ಏರಲು ಇನ್ನಿಲ್ಲದ ಹರಸಾಹಸ ಮಾಡಿದರು. ಪಕ್ಕದಲ್ಲಿದ್ದವರು ತಮ್ಮ ಕೈಯಲ್ಲಿದ್ದ ಚಂಬು, ಜಗ್ಗುಗಳಿಂದ ಯುವಕರಿಗೆ ನೀರು ಎರಚುತ್ತಿದ್ದರು. ಆಗ ಎಲ್ಲೆಲ್ಲೂ ಹರ್ಷೋದ್ಘಾರ ಕೇಳುತ್ತಿತ್ತು. ಕೊನೆಗೆ ಕಲ್ಲಪ್ಪ ತೊರವಿ ಕಂಬ ಹತ್ತಿದಾಗ ಮೇಲಿದ್ದ ಬಿಂದು ಬಡಿಗೇರ ಆತನನ್ನು ಕೈ ಹಿಡಿದು ಮೇಲಕ್ಕೆ ಕರೆದುಕೊಂಡರು. ನಂತರ ತಮ್ಮ ಕೈಯಲ್ಲಿದ್ದ ಚಂಬುವಿನಿಂದ ಗುಲಾಬಿ ಬಣ್ಣವನ್ನು ಸೇರಿದ್ದ ಜನರ ಮೇಲೆ ಎರಚಿದನು. ನಂತರ ಇಬ್ಬರನ್ನು ಕೆಳಗಿಸಿ ಸಿಹಿ ಹಂಚಲಸಾಯಿತು.

ಈ ಸಂದರ್ಭದಲ್ಲಿ ಅಪ್ಪಯ್ಯ ಕೋಳೊಲಮಠ, ಸಿ.ಬಿ.ಪಾಟೀಲ, ಶಿದ್ರಾಮ ಪೂಜಾರಿ, ಶ್ರೀಶೈಲ ಶಿರಹಟ್ಟಿ, ಗುರುಪಾದ ಕುಂಬಾರ, ಹನಮಂತ ಕೋಳಿ, ಅಬ್ಬಾಸ ಗೌಂಡಿ, ಅಪ್ಪು ಭೋಸಲೆ, ಸುರೇಶ ಬಿರಾದಾರ, ವಿಠ್ಠಲ ಮಾಳಿ, ಸಂತೋಷ ಮಾಳಿ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ