ಆ್ಯಪ್ನಗರ

ಬಾಯ್ತಪ್ಪಿ ಶೂಟೌಟ್ ಹೇಳಿಕೆ ನೀಡಿದೆ: ಸಿಎಂ ಕುಮಾರಸ್ವಾಮಿ

ಜೆಡಿಎಸ್ ಮುಖಂಡನ ಹತ್ಯೆಯಿಂದ ದೊಂಬಿಯಾಗಲಿ ಗಲಾಟೆಯಾಗಲಿ ಸಂಭವಿಸಿಲ್ಲ. ಪ್ರಕಾಶ್ ಕೊಲೆಗಾರರು ಈ ಹಿಂದೆ ಎರಡು ಕೊಲೆಯಲ್ಲಿ ಭಾಗಿಯಾಗಿರುವ ಸಂಶಯ ವ್ಯಕ್ತವಾಗುತ್ತಿದೆ.

Vijaya Karnataka Web 25 Dec 2018, 3:23 pm
ವಿಜಯಪುರ: ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಪ್ರಕರಣದಲ್ಲಿ ಭಾಗಿಯಾದವರನ್ನು ಶೂಟೌಟ್ ಮಾಡಿ ಎಂದು ಬಾಯ್ತಪ್ಪಿ ಹೇಳಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮರ್ಥನೆ ನೀಡಿದ್ದಾರೆ.
Vijaya Karnataka Web hdk


ಮದ್ದೂರು ಜೆಡಿಎಸ್‌ ನಾಯಕ ಹಂತಕರನ್ನು ಶೂಟೌಟ್‌ ಮಾಡಿ

ಮದಬಾವಿ ತಾಂಡಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮುಖಂಡನ ಹತ್ಯೆಯಿಂದ ದೊಂಬಿಯಾಗಲಿ ಗಲಾಟೆಯಾಗಲಿ ಸಂಭವಿಸಿಲ್ಲ. ಪ್ರಕಾಶ್ ಕೊಲೆಗಾರರು ಈ ಹಿಂದೆ ಎರಡು ಕೊಲೆಯಲ್ಲಿ ಭಾಗಿಯಾಗಿರುವ ಸಂಶಯ ವ್ಯಕ್ತವಾಗುತ್ತಿದೆ. ಘಟನೆ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಪ್ರಕಾಶ್ ಹತ್ಯೆಯಿಂದ ನನಗೆ ತುಂಬಾ ನೋವಾಗಿದೆ: ಚಲುವರಾಯಸ್ವಾಮಿ

ಮಂಡ್ಯ: ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆಯಿಂದ ನನಗೆ ತುಂಬಾ ನೋವಾಗಿದೆ. ಇಂತ ಘಟನೆ ನಡೆಯಬಾರದಿತ್ತು ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಒಬ್ಬ ಮುಖಂಡನನ್ನು ರಸ್ತೆಯಲ್ಲಿ ಹತ್ಯೆ ಮಾಡಿರೋದು ಎಷ್ಟು ಸರಿ? ಈ ಬಗ್ಗೆ ಪೊಲೀಸ್ ಇಲಾಖೆ ಮೊದಲೇ ಕ್ರಮ ವಹಿಸಬೇಕಿತ್ತು. ವೈಯಕ್ತಿಕವಾಗಿ ಪ್ರಕಾಶ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದೆ. ಈ ಬಗ್ಗೆ ನಾನು ಹೆಚ್ಚು ಮಾತನಾಡೋದಿಲ್ಲ. ಅಪರಾಧಿಗೆ ಶಿಕ್ಷೆ ನೀಡೋದ್ರಿಂದ ಪ್ರಕಾಶ್ ಮರಳಿ ಬರಲ್ಲ. ಇಂತಹ ಘಟನೆಗಳು ನಡೆಯದಂತೆ ಜಾಗೃತಿ ವಹಿಸಬೇಕು ಎಂದರು.

ಇನ್ನು ಘಟನೆ ನಡೆದ ವೇಳೆ ಪ್ರಕಾಶ್ ಜೊತೆಗಿದ್ದ ಸ್ನೇಹಿತ ಮೊಗಣ್ಣ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಒಂದೇ ನಿಮಿಷದಲ್ಲಿ ಆರೋಪಿಗಳು ಹತ್ಯೆ ಮಾಡಿದರು ಎಂದರು. ಕಾರಿನ ಸೀಟ್ಗೆ ಹೊಲಿಗೆ ಹಾಕಿಸುವಾಗ ಘಟನೆ ನಡೆದಿದೆ. ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಹತ್ಯೆ ನಡೆಸಿದ್ದಾರೆ. ಆರರಿಂದ ಏಳು ಮಂದಿಯಿಂದ ಕೃತ್ಯ ನಡೆದಿದೆ. ಪ್ರಕಾಶರನ್ನು ಕಾರಿನೊಳಗೆ ಎಳೆದುಕೊಂಡು ಹತ್ಯೆ ಮಾಡಿದ್ದಾರೆ. ನಾವು ನೋಡಿದ್ದು ಕೇವಲ ಮೂರು ಮಂದಿಯನ್ನು, ಆದರೆ ಅವರು ಆರಿಂದ ಏಳು ಮಂದಿ ಬಂದಿದ್ದಾರಂತೆ ಎಂದು ಪ್ರತಿಕ್ರಿಯಿಸಿದರು.

7 ಜನರ ವಿರುದ್ಧ ಪ್ರಕರಣ

ಪ್ರಕಾಶ್ ಹತ್ಯೆ ಪ್ರಕರಣ ಸಂಬಂಧ ತೊಪ್ಪನಹಳ್ಳಿ ಗ್ರಾಮದ ಪ್ರಸನ್ನ, ಸ್ವಾಮಿ, ಮುತ್ತೇಶ್, ಶಿವರಾಜು, ಯೋಗೇಶ್ ಹೇಮಂತ್ ಸೇರಿದಂತೆ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮೃತ ಪ್ರಕಾಶ್ ಜೊತೆ ಕಾರಿನಲ್ಲಿದ್ದ ತೊಪ್ಪನಹಳ್ಳಿಯ ಅಭಿಲಾಷ್ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.

ಪ್ರಕಾಶ್ ಕೊಲೆ ಪ್ರಕರಣ ಸಂಬಂಧ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿರುವ ಐಜಿ‌ ಶರತ್ ಚಂದ್ರ, ಜೆಡಿಎಸ್ ಕಾರ್ಯಕರ್ತರು ಹಾಗೂ ಮದ್ದೂರಿನ ಜನ ಉದ್ವೇಗಕ್ಕೆ ಒಳಗಾಗಬೇಡಿ ಎಂದು ತಿಳಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ