ಇಂಡಿಯಲ್ಲಿ ಹನಿಟ್ರಾಪ್: ಮೂವರ ಬಂಧನ
ಇಂಡಿ: ಹನಿ ಟ್ರ್ಯಾಪ್ ಮಾಡುತ್ತಿದ್ದ ಮೂವರನ್ನು ಇಂಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka 21 Aug 2019, 5:00 am
ಇಂಡಿ: ಹನಿ ಟ್ರ್ಯಾಪ್ ಮಾಡುತ್ತಿದ್ದ ಮೂವರನ್ನು ಇಂಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅನೀಲ ಕಾಲೇಬಾಗ, ರಾಹುಲ್ ಗುಡಮಿ, ಸುಜ್ಞಾನಿ ಮಡ್ಡಿಮನಿ ಬಂಧಿತರು. ತಾಲೂಕಿನ ಹಿರೇಬೇವನೂರ ಗ್ರಾಮದ ದತ್ತಾತ್ರೆಯ ಕುಂಬಾರ ದೂರುದಾರ.
ಮೊದಲೇ ಪರಿಚಯವಿದ್ದ ಮಹಿಳೆ ನನಗೆ ದೂರವಾಣಿ ಕರೆ ಮಾಡಿ ಪಟ್ಟಣದ ಲಾಡ್ಜ್ ಒಂದಕ್ಕೆ ಬರಲು ಹೇಳಿದ್ದಳು. ಲಾಡ್ಜ್ಗೆ ಬಂದು ರೂಮ್ ಒಳಗೆ ಹೋದ ಐದು ನಿಮಿಷಗಳ ಒಳಗಾಗಿ ಇಬ್ಬರು ಒಳಗೆ ನುಗ್ಗಿ ವಿಡಿಯೋ ಮಾಡಿ 8 ಲಕ್ಷ ರೂ ಬೇಡಿಕೆ ಇಟ್ಟರು. ಭಯಗೊಂಡ ನಾನು ನನ್ನ ಬಳಿಯಿದ್ದ ಸ್ವಲ್ಪ ಹಣ ಕೊಟ್ಟು ಉಳಿದ ಹಣ ಕೊಡುತ್ತೇನೆ ಎಂದು ಹೇಳಿ ಹೊರಬಂದೆ. ತದ ನಂತರ ದೂರವಾಣಿ ಕರೆ ಮಾಡಿ ಉಳಿದ ಹಣ ಕೊಡಿ ಇಲ್ಲವಾದರೆ ಆ ಮಹಿಳೆಯನ್ನು ನಿಮ್ಮ ಮನೆಗೆ ಕಳುಹಿಸುತ್ತೇವೆ ಎಂದು ಹೇಳಿದ್ದರಿಂದ ಭಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಇಂಡಿ ನಗರ ಪೊಲೀಸ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ದತ್ತಾತ್ರೆಯ ಕುಂಬಾರ ತಿಳಿಸಿದ್ದಾರೆ.
ಕುಂಬಾರ ದೂರು ಆಧರಿಸಿ ವಿಚಾರಣೆ ನಡೆಸಿದಾಗ ಮೇಲ್ನೋಟಕ್ಕೆ ಸತ್ಯ ಎಂದು ಕಂಡುಬಂದಿದ್ದರಿಂದ ಇಂಡಿ ನಗರ ಪಿಎಸ್ಐ ರವಿ ಯಡವಣ್ಣವರ ನೇತೃತ್ವದಲ್ಲಿ ಇಬ್ಬರನ್ನೂ ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.