ಆ್ಯಪ್ನಗರ

ಟ್ಯಾಕ್ಸ್‌ ಬಾಕಿ ಇದ್ದರೆ ಭವನ ಲಾಕ್‌

ವಿಜಯಪುರದಲ್ಲಿಲಕ್ಷ ಲಕ್ಷ ಬಾಕಿ ಪಡೆಯುವ ಸಮುದಾಯಭವನಗಳು ನಗರಪಾಲಿಕೆಗೆ ಸಾವಿರ ಲೆಕ್ಕದಲ್ಲಿಬಾಕಿ ತುಂಬಲು ಜಿಪುಣತನ ತೋರುತ್ತಿರುವುದು ಬೆಳಕಿಗೆ ಬಂದಿದೆ.

Vijaya Karnataka Web 17 Mar 2020, 5:00 am
ವಿಜಯಪುರ: ವಿಜಯಪುರದಲ್ಲಿಲಕ್ಷ ಲಕ್ಷ ಬಾಕಿ ಪಡೆಯುವ ಸಮುದಾಯಭವನಗಳು ನಗರಪಾಲಿಕೆಗೆ ಸಾವಿರ ಲೆಕ್ಕದಲ್ಲಿಬಾಕಿ ತುಂಬಲು ಜಿಪುಣತನ ತೋರುತ್ತಿರುವುದು ಬೆಳಕಿಗೆ ಬಂದಿದೆ.
Vijaya Karnataka Web house lock if tax is pending
ಟ್ಯಾಕ್ಸ್‌ ಬಾಕಿ ಇದ್ದರೆ ಭವನ ಲಾಕ್‌


ಗುಂಡಿ ಬಿದ್ದ ರಸ್ತೆಗಳು, 24*7 ನೀರು ಬರುತ್ತಿಲ್ಲ, ನಗರ ಅಭಿವೃದ್ಧಿಯಾಗುತ್ತಿಲ್ಲ ಎಂಬ ದೂರಿನ ನಡುವೆಯೂ ಮಹಾನಗರ ಪಾಲಿಕೆಯಿಂದ ನಾನಾ ಸೇವೆ ಪಡೆಯುವ ಸಮುದಾಯ ಭವನಗಳು ಕರ ಬಾಕಿ ಉಳಿಸಿಕೊಂಡಿವೆ. ಇದರಿಂದಾಗಿ ಪಾಲಿಕೆ ಸಂಪನ್ಮೂಲ ಕ್ರೋಢೀಕರಣಕ್ಕೆ ಪೆಟ್ಟು ಬಿದ್ದಿದೆ.

ಪಾಲಿಕೆ ವ್ಯಾಪ್ತಿಯಲ್ಲಿಒಟ್ಟು 42 ಸಮುದಾಯ ಭವನಗಳಿವೆ. ಅದರಲ್ಲಿ29 ಸಮುದಾಯ ಭವನಗಳು ಈಗಾಗಲೇ ಕರ ಪಾವತಿಸಿದ್ದು ಇನ್ನೂ 13 ಸಮುದಾಯ ಭವನಗಳು ಕರ ಬಾಕಿ ಉಳಿಸಿಕೊಂಡಿವೆ. ಇದರಿಂದ ಪಾಲಿಕೆಗೆ ಬರಬೇಕಿದ್ದ ಅಂದಾಜು ಏಳೆಂಟು ಲಕ್ಷ ರೂ.ಕರ ಬಾಕಿ ಉಳಿದಂತಾಗಿದೆ.

4 ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದ ಹೂಗಾರ ಸಮುದಾಯ ಭವನವನ್ನು ಪಾಲಿಕೆ ಅಧಿಕಾರಿಗಳು ಈಚೆಗೆ ಆಸ್ತಿ ಜಪ್ತಿ ಮಾಡಿಕೊಂಡು ಇತರೆ ಸಮುದಾಯ ಭವನಗಳಿಗೆ ಎಚ್ಚರಿಕೆ ನೀಡಿದ್ದಾರೆ. ಒಬ್ಬರಿಗೊಂದು ನ್ಯಾಯ ಎನ್ನುವಂತೆ ಕೆಲ ಮಂಗಲ ಕಾರ್ಯಾಲಯಗಳು ಐದಾರು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲಎಂಬ ಆರೋಪಗಳು ಪಾಲಿಕೆ ಮೇಲಿವೆ.

ಶಾಸಕರ, ಸಂಸದರ ಅನುದಾನ ಬಳಕೆ ಹಾಗೂ ಪಾಲಿಕೆಯಿಂದ ನೀರು, ವಿದ್ಯುತ್‌, ರಸ್ತೆ ಸೇರಿದಂತೆ ನಾನಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವ ಕೆಲ ಸಮುದಾಯ ಭವನಗಳ ಮದುವೆ, ಸಭೆ, ಸಮಾರಂಭಗಳಿಗೆ ದುಬಾರಿ ಬಾಡಿಗೆ ಆಕರಿಸುತ್ತವೆ. ಆದರೆ ಪಾಲಿಕೆಗೆ ಮಾತ್ರ ಆಸ್ತಿ ತೆರಿಗೆ ಪಾವತಿಸಲು ಹಿಂದೇಟು ಹಾಕುತ್ತಿವೆ. ಕೆಲ ಸಮುದಾಯ ಭವನಗಳು ಮುನ್ನಚ್ಚರಿಕೆ ಕ್ರಮವಾಗಿ ಗ್ರಾಹಕರಿಂದ ಮುಂಗಡ ಹಣ ಪಡೆದುಕೊಂಡು ಬಾಡಿಗೆ ನೀಡುತ್ತವೆ ಎನ್ನುತ್ತಾರೆ ಸಾರ್ವಜನಿಕರು.

ಪಾಲಿಕೆ ಕ್ರಮವೇನು?
ನಗರದಲ್ಲಿಆಯಾ ಸ್ಥಳದಲ್ಲಿಆಸ್ತಿ ಮೌಲ್ಯಕ್ಕೆ ತಕ್ಕಂತೆ ಸಮುದಾಯ ಭವನಗಳ ಕರ ವಸೂಲಾತಿ ಮಾಡಲಾಗುತ್ತದೆ. ನಿವೇಶನ, ಕಟ್ಟಡ ಹೀಗೆ ನಾನಾ ರೀತಿಯಲ್ಲಿಆಯಾ ಸ್ಥಳದಲ್ಲಿನ ಮೌಲ್ಯವನ್ನು ನೋಂದಣಾಧಿಕಾರಿ ಕಚೇರಿಗಳಲ್ಲಿನಮೂದಾಗಿರುವ ಮೌಲ್ಯದ ಆಧಾರದ ಮೇಲೆ ಟ್ಯಾಕ್ಸ್‌ ನಿಗದಿಪಡಿಸಲಾಗಿದೆ.

ಆಸ್ತಿ ಕರ ಬಾಕಿ ಇರಿಸಿಕೊಂಡಿರುವ ಸಮುದಾಯ ಭವನಗಳಿಗೆ ಮೊದಲು 2-3 ಬಾರಿ ನೋಟಿಸ್‌ ನೀಡಲಾಗುವುದು, ನೋಟಿಸ್‌ ನೀಡಿದರೂ ಕರ ಪಾವತಿಸದಿದ್ದಾಗ ಪಾಲಿಕೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದವರಿಗೆ ಕರ ತುಂಬುವಂತೆ ಸೂಚಿಸಲಾಗುತ್ತದೆ. ಪಾಲಿಕೆ ಅಭಿಯಂತರರ ಮೂಲಕ ಲೀಗಲ್‌ ನೋಟಿಸ್‌ ನೀಡಲಾಗುತ್ತದೆ. ಅಂತಿಮವಾಗಿ ಕೋರ್ಟ್‌ನಲ್ಲಿದೂರು ದಾಖಲಿಸಿ ಜಪ್ತಿ ಮಾಡಲಾಗುತ್ತದೆ.ಅಂತಿಮವಾಗಿ ಜಪ್ತಿ ಮಾಡಿದ ಆಸ್ತಿಯನ್ನು ಹರಾಜು ಮಾಡಲಾಗುತ್ತದೆ ಎನ್ನುತ್ತಾರೆ ಪಾಲಿಕೆ ಆಯುಕ್ತರು.


ಯಾರಾರ‍ಯರು ಬಾಕಿದಾರರು?
ರೋಶನ್‌ ಮಂಗಲ ಕಾರ್ಯಾಲಯ(6ವರ್ಷ), ಕೆಇಬಿ ಸಮುದಾಯ ಭವನ (ನೌಕರರ ಭವನ) (3 ವರ್ಷ), ಸಂಗನಬಸವ ಕಾರ್ಯಾಲಯ(3 ವರ್ಷ), ಕೆಇಬಿ ಸಮುದಾಯ ಭವನ (2 ವರ್ಷ), ಸಂಗನಬಸವ ಕಲ್ಯಾಣ ಮಂಟಪ (2 ವರ್ಷ), ಸಂಗಮೇಶ್ವರ ಮಂಗಲ ಕಾರ್ಯಾಲಯ (2 ವರ್ಷ), ಪ್ರಗತಿ ಮಂಗಲ ಕಾರ್ಯಾಲಯ (2 ವರ್ಷ), ಸಹರಾ ಮ್ಯಾರೇಜ್‌ ಹಾಲ್‌ ನವಭಾಗ(2 ವರ್ಷ), ಚಾಂದನಿ ಹಾಲ್‌ ಮಂಗಲ ಕಾರ್ಯಾಲಯ, ಚಾಂದಬೀಬಿ ಕಲ್ಯಾಣ ಮಂಟಪ, ಜಗದಾರಾಧ್ಯ ಜಯಶಾಂತ ಲಿಂಗೇಶ್ವರ ವಿಶ್ವಶಾಂತಿ ಭವನ, ಶ್ರೀ ಸಿದ್ಧೇಶ್ವರ ಸಂಸ್ಥೆಯ ಕಲಾಭವನ, ಶ್ರೀ ಕಾಳಿಕಾ ದೇವಸ್ಥಾನ ಗುಂಡಬಾವಡಿ ರಸ್ತೆ (ಪ್ರಸಕ್ತ ವರ್ಷ),

ಆಸ್ತಿ ತೆರಿಗೆ ಪಾವತಿಸದ ಸಮುದಾಯ ಭವನ(ಮಂಗಲ ಕಾರ್ಯಾಲಯ)ಗಳಿಗೆ ಲೀಗಲ್‌ ನೋಟಿಸ್‌ ನೀಡಲಾಗುವುದು. ಅದಾಗ್ಯೂ ಕರ ತುಂಬದಿದ್ದರೆ ಕೋರ್ಟ್‌ನಲ್ಲಿದೂರು ದಾಖಲಿಸಿ ಆಸ್ತಿ ಜಪ್ತಿಗೆ ಕ್ರಮಕೈಗೊಳ್ಳಲಾಗುವುದು.
-ಹರ್ಷ ಶೆಟ್ಟಿ, ಆಯುಕ್ತರು ಪಾಲಿಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ