ಆ್ಯಪ್ನಗರ

ಅತೃಪ್ತ ಶಾಸಕರು ಬಂದರೆ ಮತ್ತೆ ಮೈತ್ರಿ ಸರಕಾರ ರಚನೆ ಸಾಧ್ಯತೆ: ಶಿವಾನಂದ ಪಾಟೀಲ್‌

ಕರ್ನಾಟಕ ರಾಜಕೀಯ ನಾಟಕ ಇನ್ನು ಮುಗಿಯುವ ಸಾಧ್ಯತೆ ಇಲ್ಲ. ಈಗ ಬಿಜೆಪಿ ಸರಕಾರಕ್ಕೆ ಹೊಸ ಸವಾಲುಗಳು ಇವೆ. ಇದರ ಬೆನ್ನಲ್ಲೇ ಅತೃಪ್ತ ಶಾಸಕರು ವಾಪಸ್‌ ಬರಲಿ ಎಂದು ದೋಸ್ತಿಗಳು ಕಾಯುತ್ತಿದ್ದಾರೆ.

Vijaya Karnataka Web 26 Jul 2019, 7:34 pm
ವಿಜಯಪುರ: ಅತೃಪ್ತ ಶಾಸಕರು ತಪ್ಪಿನ ಅರಿವಾಗಿ ವಾಪಸ್ ಬಂದರೆ ಮತ್ತೆ ಮೈತ್ರಿ ಸರಕಾರ ರಚನೆ ಸಾಧ್ಯತೆ ಇದೆ ಎಂದು ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
Vijaya Karnataka Web ಶಿವಾನಂದ ಪಾಟೀಲ್‌
ಶಿವಾನಂದ ಪಾಟೀಲ್‌


ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಶಿವಾನಂದ ಪಾಟೀಲ್‌ ಮಾತನಾಡಿದರು.

ಅತೃಪ್ತ ಶಾಸಕರ ರಾಜೀನಾಮೆ/ಅನರ್ಹತೆ ವಿಚಾರ ಸ್ಪೀಕರ್ ಅಂಗಳದಲ್ಲಿದ್ದಾಗ ಆ ವಿಚಾರದ ಬಗ್ಗೆ ಏನನ್ನೂ ಹೇಳಲಾಗದು ಎಂದರು.

ಬಿಜೆಪಿಯವರು ಕೂಡ ಬಹುಮತ ಸಾಬೀತುಪಡಿಸಬೇಕು. ಹೇಗೆ ಸಾಬೀತುಪಡಿಸುತ್ತಾರೆಂಬುದನ್ನು ಕಾದು ನೋಡಬೇಕು ಎಂದು ಮಾಜಿ ಸಚಿವರು ತಿಳಿಸಿದರು.

ಅತೃಪ್ತ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಅವರು ತಾತ್ವಿಕವಾಗಿ ಹೇಳಿದ್ದಾರೆ ಎಂದಷ್ಡೇ ಶಿವಾನಂದ ಪಾಟೀಲ್‌ ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ