ಆ್ಯಪ್ನಗರ

ನೆರೆ ಊರುಗಳಲ್ಲಿ ಸ್ವಾತಂತ್ರ್ಯೋತ್ಸವ

ಹುಲ್ಲೂರು :ಕೃಷ್ಣಾ ನದಿ ತೀರದ ಪ್ರವಾಹ ಪೀಡಿತ ಮುದೂರು ಗ್ರಾಮದಲ್ಲಿ ಸಂತ್ರಸ್ತರೊಂದಿಗೆ ಸರಳ ಹಾಗೂ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

Vijaya Karnataka 16 Aug 2019, 5:00 am
ಹುಲ್ಲೂರು :ಕೃಷ್ಣಾ ನದಿ ತೀರದ ಪ್ರವಾಹ ಪೀಡಿತ ಮುದೂರು ಗ್ರಾಮದಲ್ಲಿ ಸಂತ್ರಸ್ತರೊಂದಿಗೆ ಸರಳ ಹಾಗೂ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
Vijaya Karnataka Web independence day in neighboring villages
ನೆರೆ ಊರುಗಳಲ್ಲಿ ಸ್ವಾತಂತ್ರ್ಯೋತ್ಸವ


ಧ್ವಜಾರೋಹಣ ನೆರವೇರಿಸಿದ ಮುಖ್ಯಗುರು ಎಂ.ವೈ.ಕಳ್ಳಿಮನಿ ಮಾತನಾಡಿ, ಸಂತ್ರಸ್ತರು ಭಯ ಪಡುವ ಅಗತ್ಯವಿಲ್ಲ. ಜಿಲ್ಲಾಡಳಿತ ಎಲ್ಲ ಕ್ರಮಕೈಗೊಳ್ಳಲಿದೆ. ನಿಮ್ಮೆಲ್ಲರ ಕಷ್ಟ ಸುಖಗಳಿಗೆ ನಾವೆಲ್ಲ ಭಾಗಿಯಾಗುತ್ತೇವೆ ಎಂದು ಭರವಸೆ ನೀಡಿದರು.

ಎಸ್ಡಿಎಂಸಿ ಅಧ್ಯಕ್ಷ ಶಿವಾನಂದ ಉಂಡಿ, ಗ್ರಾಪಂ ಸದಸ್ಯ ಗೌಡಪ್ಪಗೌಡ ಪಾಟೀಲ, ಮಹಾಂತೇಶ ಹೆಬ್ಬಾಳ, ಬಸವರಾಜ ಗಂಗೂರ, ಸಂತ್ರಸ್ತರಾದ ಯಲ್ಲಪ್ಪ ಮಾದರ, ಕರೆಪ್ಪ ಮಾದರ, ಸಂಗಪ್ಪ ತಳವಾರ, ರೇಣುಕಾ ತಳವಾರ ಸೇರಿದಂತೆ ಗ್ರಾಮದ ಸಂತ್ರಸ್ತರು ಪಾಲ್ಗೊಂಡಿದ್ದರು.

ನಿಡಗುಂದಿ ತಾಲೂಕಿನ ಹೊಳೆ ಮಸೂತಿ, ಅರಳದಿನ್ನಿ, ಯಲಗೂರು, ಯಲ್ಲಮ್ಮನಬೂದಿಹಾಳ, ಕಾಶೀನಕುಂಟಿ, ವಡವಡಗಿ ಸೇರಿದಂತೆ ಇತರೆ ನೆರೆ ಪೀಡಿತ ಗ್ರಾಮಗಳಲ್ಲೂ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ