ಆ್ಯಪ್ನಗರ

ಕಿತ್ತಾಡಿಕೊಂಡ ಇನ್ಸಪೆಕ್ಟರ್‌, ಸಬ್‌ ಇನ್ಸಪೆಕ್ಟರ್‌

ವಿಜಯಪುರ: ಅಬಕಾರಿ ಹಾಗೂ ಆರ್‌ಟಿಒ ಅಧಿಕಾರಿಗಳ ಪರಸ್ಪರ ಕಿತ್ತಾಡಿಕೊಂಡ ಘಟನೆ ಇಂಡಿ ತಾಲೂಕಿನ ಝಳಕಿ ಹತ್ತಿರದ ಅಣಚಿ ಕ್ರಾಸ್‌ ಬಳಿಯಿರುವ ಆರ್‌ಟಿಒ ಕಚೇರಿಯಲ್ಲಿನಡೆದಿದೆ.

Vijaya Karnataka 14 Sep 2019, 5:00 am
ವಿಜಯಪುರ: ಅಬಕಾರಿ ಹಾಗೂ ಆರ್‌ಟಿಒ ಅಧಿಧಿಕಾರಿಗಳ ಪರಸ್ಪರ ಕಿತ್ತಾಡಿಕೊಂಡ ಘಟನೆ ಇಂಡಿ ತಾಲೂಕಿನ ಝಳಕಿ ಹತ್ತಿರದ ಅಣಚಿ ಕ್ರಾಸ್‌ ಬಳಿಯಿರುವ ಆರ್‌ಟಿಒ ಕಚೇರಿಯಲ್ಲಿನಡೆದಿದೆ.
Vijaya Karnataka Web inspector sub inspector emasculated
ಕಿತ್ತಾಡಿಕೊಂಡ ಇನ್ಸಪೆಕ್ಟರ್‌, ಸಬ್‌ ಇನ್ಸಪೆಕ್ಟರ್‌


ಕಿತ್ತಾಡಿದ್ದು ಯಾರು, ಏಕೆ?

ಆರ್‌ಟಿಓ ಇನ್ಸಪೆಕ್ಟರ್‌ ನಾಗರಾಜ ಶೆಳ್ಳಗಿ ಭಾರಿ ವಾಹನಗಳ ನಿಲ್ಲಿಸಿ, ಚಾಲಕರನ್ನು ವಿಚಾರಣೆಗೆ ಒಳಪಡಿಸುತ್ತಿದ್ದರು. ಆಗ ಅಬಕಾರಿ ಸಬ್‌ ಇನ್ಸಪೆಕ್ಟರ್‌ ಸದಾಶಿವ ಕೊರ್ತಿ ಚಾಲಕರಿಗೆ ಏಕೆ ಸುಮ್ಮನೆ ಕಿರುಕುಳ ನೀಡುತ್ತಿದ್ದಿರೆಂದು ಆರ್‌ಟಿಒ ಶೆಳ್ಳಗಿ ಅವರ ವಿರುದ್ಧ ಆವಾಜ್‌ ಹಾಕಿದ್ದಾರೆ. ಅಲ್ಲದೆ ಏಕೆ ಲಂಚ ಬೇಡುತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಇದಕ್ಕೆ ಗರಂ ಆದ ಆರ್‌ಟಿಒ ಶೆಳ್ಳಗಿ, ಮೊಬೈಲ್‌ ತಗೆದು ವಿಡಿಯೋ ಮಾಡುತ್ತಲೇ ಅಬಕಾರಿ ಅಧಿಧಿಕಾರಿ ಮೇಲೆ ಏರಿ ಹೋಗಿದ್ದಾರೆ. ಅಲ್ಲದೇ, ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದೀರಿ ಎಂಬುದಾಗಿ ದೂರು ದಾಖಲಿಸುವುದಾಗಿಯೂ ಉಲ್ಟಾ ಆವಾಜ್‌ ಹಾಕಿದ್ದಾರೆ. ಆಗ ಇಬ್ಬರ ಮಧ್ಯೆಯೂ ಬರೋಬ್ಬರಿ 1 ಗಂಟೆಗಳ ಕಾಲ ಮಾತಿನ ಚಕಮಕಿ ನಡೆದಿದೆ. ಅಧಿಧಿಕಾರಿಗಳ ಈ ಕಚ್ಚಾಟವನ್ನು ಲೈವ್‌ ನೋಡಿದ ವಾಹನ ಚಾಲಕರು ಮುಸಿ-ಮುಸಿ ನಕ್ಕಿದ್ದಾರೆ. ಎರಡೂ ಇಲಾಖೆ ಅಧಿಕಾರಿಗಳ ಮಧ್ಯೆ ನಡೆದ ಈ ವಾಗ್ಯುದ್ಧ ಚಿತ್ರೀಕರಣವಾಗಿದ್ದು, ಅದು ಜಾಲತಾಣಗಳಲ್ಲಿವೈರಲ್‌ ಆಗಿದೆ.

ಇಬ್ಬರಿಗೂ ನೊಟೀಸ್‌ ಜಾರಿ

ಪರಸ್ಪರ ಕಿತ್ತಾಡಿಕೊಂಡ ಅಬಕಾರಿ ಹಾಗೂ ಆರ್‌ಟಿಒ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಾರಣ ಕೇಳಿ ನೋಟೀಸ್‌ ಜಾರಿ ಮಾಡಿದ್ದಾರೆ. ಅಬಕಾರಿ ಸಬ್‌ ಇನ್ಸಪೆಕ್ಟರ್‌ ಸದಾಶಿವ ಕೊರ್ತಿ ಹಾಗೂ ಆರ್‌ಟಿಒ ಇನ್ಸಪೆಕ್ಟರ್‌ ನಾಗರಾಜ ಶೆಳ್ಳಗಿ ಜಿಲ್ಲಾಧಿಕಾರಿ ನೀಡಿದ ನೋಟೀಸ್‌ ಸ್ವೀಕರಿಸಿದ ಅಧಿಕಾರಿಗಳು.

5 ದಿನಗಳೊಳಗೆ ಉತ್ತರ ನೀಡುವಂತೆ ಜಿಲ್ಲಾಧಿಕಾರಿ ನೊಟೀಸ್‌ನಲ್ಲಿಸೂಚಿಸಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆ ಸ್ಪಿರಿಟ್‌ ಸಾಗಣೆ ಮಾಡುತ್ತಿದ್ದ ಲಾರಿ ತಡೆದಿದ್ದರಿಂದಾಗಿ ಅಬಕಾರಿ ಇನ್ಸಪೆಕ್ಟರ್‌ ಆರ್‌ಟಿಓ ಅಧಿಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ತೀವ್ರವಾಗಿತ್ತು. ಅಲ್ಲದೇ ಈ ಘಟನೆಯ ವಿಡಿಯೋ ವೈರಲ್‌ ಆಗಿತ್ತು. ಈ ಹಿನ್ನೆಲೆಯಲ್ಲಿತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಏಕೆ ಕೈಗೊಳ್ಳಬಾರದು ಎಂದು ಕಾರಣ ಕೇಳಿ ಜಿಲ್ಲಾಧಿಕಾರಿ ನೊಟೀಸ್‌ ಜಾರಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ