ಆ್ಯಪ್ನಗರ

ವಿಜಯಪುರ: ರೈತರ ಉತ್ಪನ್ನ ಸಾಗಾಟಕ್ಕೆ ಅನುಮತಿ ; ಶಾಸಕ ಎಂ.ಬಿ ಪಾಟೀಲ್ ರವರಿಂದ ಜಿಲ್ಲಾಧಿಕಾರಿಗೆ ಮನವಿ

ಪ್ರಸಕ್ತ ಲಾಕ್‍ಡೌನ್‍ನಿಂದಾಗಿ ಈ ರೈತರ ಬೆಳೆಗಳು ಸಕಾಲದಲ್ಲಿ ಕೋಲ್ಡ್ ಸ್ಟೋರೆಜ್, ನಿತ್ಯದ ಮಾರುಕಟ್ಟೆ, ಗ್ರಾಹಕರಿಗೆ ತಲುಪದೇ ತೊಂದರೆಯಾಗುತ್ತಿದೆ. ರೈತರು ಬೆಳೆದ ಉತ್ಪನ್ನಗಳನ್ನು ವಿವಿಧ ಸ್ಥಳಗಳಿಗೆ ಸಾಗಾಟ ಮಾಡಲು ಅನುಮತಿ ನೀಡಬೇಕು ಎಂದು ಶಾಸಕ ಎಂ.ಬಿ.ಪಾಟೀಲ್ ರವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Vijaya Karnataka Web 26 Mar 2020, 11:05 am
ವಿಜಯಪುರ: ರೈತರು ಬೆಳೆದ ಉತ್ಪನ್ನಗಳನ್ನು ವಿವಿಧ ಸ್ಥಳಗಳಿಗೆ ಸಾಗಾಟ ಮಾಡಲು ಅನುಮತಿ ನೀಡಬೇಕು ಎಂದು ಶಾಸಕ ಎಂ.ಬಿ.ಪಾಟೀಲ್
Vijaya Karnataka Web mb-patil

ರವರು ವಿಜಯಪುರ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ವಿಜಯಪುರ ಜಿಲ್ಲೆ ತೋಟಗಾರಿಕಾ ಬೆಳೆಗಳಿಗೆ ಪ್ರಸಿದ್ಧಿಯನ್ನು ಹೊಂದಿದ್ದು, ಇಲ್ಲಿಂದ ಪ್ರತಿನಿತ್ಯ ನೂರಾರು ಟನ್‍ಗಳಷ್ಟು ದ್ರಾಕ್ಷಿ, ದಾಳಿಂಬೆ, ಬಾಳೆ, ಕಲ್ಲಂಗಡಿ, ಪಪ್ಪಾಯಿ, ಕರಬೂಜ, ನಿಂಬೆ, ಹಾಗೂ ವಿವಿಧ ತರಕಾರಿಗಳು ಸೇರಿದಂತೆ ಹಲವು ಉತ್ಪನ್ನಗಳು ರಾಜ್ಯದ ಹಾಗೂ ನೆರ ರಾಜ್ಯ ಬೇರೆ ಬೇರೆ ಪ್ರದೇಶಗಳಿಗೆ ಸರಕು ಸಾಗಾಟವಾಗುತ್ತದೆ.

ಪ್ರಸಕ್ತ ಲಾಕ್‍ಡೌನ್‍ನಿಂದಾಗಿ ಈ ರೈತರ ಬೆಳೆಗಳು ಸಕಾಲದಲ್ಲಿ ಕೋಲ್ಡ್ ಸ್ಟೋರೆಜ್, ನಿತ್ಯದ ಮಾರುಕಟ್ಟೆ, ಗ್ರಾಹಕರಿಗೆ ತಲುಪದೇ ತೊಂದರೆಯಾಗುತ್ತಿದೆ. ರೈತರ ಉತ್ಪನ್ನಗಳು ಸಕಾಲದಲ್ಲಿ ಗ್ರಾಹಕರಿಗೆ ದೊರೆಯದಿದ್ದರೆ, ಜಿಲ್ಲೆಯ ರೈತರ ಕೋಟ್ಯಾಂತರ ರೂ.ಗಳ ಬೆಳೆ ನಾಶವಾಗುವ ಭಯದಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಇದರಿಂದ ರೈತರಿಗೂ ಹಾಗೂ ಗ್ರಾಹಕರಿಗೂ ತೀವ್ರ ತೊಂದರೆಯಾಗುತ್ತದೆ.

ಸರಕು ಸಾಗಾಟ ವಾಹನಕ್ಕೆ ಕೇಂದ್ರ ಸರಕಾರವೇ ಅನುಮತಿ ನೀಡಿರುವುದನ್ನು ಗಮನದಲ್ಲಿರಿಸಿಕೊಂಡು ರೈತರು ಬೆಳೆದ ಎಲ್ಲ ರೀತಿಯ ಮಾಲುಗಳನ್ನು ಸಂಬಂಧಿಸಿದ ಸ್ಥಳಗಳಿಗೆ ಸಾಗಾಟ ಮಾಡಲು ಅನುಮತಿ ನೀಡಬೇಕು ಎಂದು ಶಾಸಕ ಎಂ.ಬಿ. ಪಾಟೀಲ್ ಜಿಲ್ಲಾಧಿಕಾರಿಗಳಲ್ಲಿ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ