ಆ್ಯಪ್ನಗರ

ಬೆಳಗಾವಿ ಅಧಿವೇಶನದಲ್ಲಿ ಎರಡು ದಿನ ಮಹದಾಯಿ ಚರ್ಚೆ: ಈಶ್ವರಪ್ಪ

ಬೆಳಗಾವಿ ಅಧಿವೇಶನದಲ್ಲಿ ಮಹದಾಯಿ ಕುರಿತು ಎರಡು ದಿನ ಚರ್ಚೆ ನಡೆಸಲು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸರಕಾರವನ್ನು ಆಗ್ರಹಿಸಿದ್ದಾರೆ.

ವಿಕ ಸುದ್ದಿಲೋಕ 21 Oct 2016, 12:56 pm
ವಿಜಯಪುರ: ಬೆಳಗಾವಿ ಅಧಿವೇಶನದಲ್ಲಿ ಮಹದಾಯಿ ಕುರಿತು ಎರಡು ದಿನ ಚರ್ಚೆ ನಡೆಸಲು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸರಕಾರವನ್ನು ಆಗ್ರಹಿಸಿದ್ದಾರೆ.
Vijaya Karnataka Web mahadayi discus in belagavi session eshwarappa
ಬೆಳಗಾವಿ ಅಧಿವೇಶನದಲ್ಲಿ ಎರಡು ದಿನ ಮಹದಾಯಿ ಚರ್ಚೆ: ಈಶ್ವರಪ್ಪ


ಮಹದಾಯಿ ಬಿಕ್ಕಟ್ಟಿಗೆ ಕಾಂಗ್ರೆಸ್ಸಿಗರೇ ಕಾರಣ. ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯ ಮಾತುಕತೆಗೆ ದಿನ ನಿಗದಿ ಮಾಡಲಾಗಿತ್ತು. ಗೋವಾ ಕಾಂಗ್ರೆಸ್ಸಿಗರು ಹನಿ ನೀರು ಬಿಡುವುದಿಲ್ಲ ಎಂದು ಮತ್ತೆ ಕ್ಯಾತೆ ಎಬ್ಬಿಸಿದ್ದಾರೆ ಎಂದರು.

ಒಟ್ಟಾರೆ ಕುಡಿಯುವ ನೀರಿನ ಯೋಜನೆಗೆ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ ಎಂದು ಈಶ್ವರಪ್ಪ ಅವರು ಆರೋಪಿಸಿದರು.

ಮಹದಾಯಿ ನೀರು ಹಂಚಿಕೆ ವಿಚಾರದದಲ್ಲಿ ಮುಂಬಯಿನಲ್ಲಿ ನಿಗದಿಗೊಂಡಿದ್ದ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮುಖ್ಯಮಂತ್ರಿಗಳ ಸಭೆ ಮುಂದೂಡಿಕೆಯಾಗಿದೆ. ಈ ಮಾತುಕತೆ ನಡೆಯಬಾರದು ಎಂದು ಎಂಇಎಸ್‌ ಆಗ್ರಹಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ