ಆ್ಯಪ್ನಗರ

ವಿಜಯಪುರ ಪರೀಕ್ಷಾ ಕೇಂದ್ರದಲ್ಲಿ‌‌ ಭಾರಿ ಎಡವಟ್ಟು

ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟು ನಡೆದ ಸಂಗತಿ‌ ತಿಳಿದು‌ ಬಿಇಒ ಶರೀಫ್ ನದಾಫ್, ತಹಶೀಲ್ದಾರ್ ಮೋಹನಕುಮಾರಿ ಭೇಟಿ‌ ಪರಿಶೀಲಿಸಿದ್ದಾರೆ. ಅಧಿಕಾರಿಗಳ ಭೇಟಿ ಬಳಿಕ ಉತ್ತರ ಪತ್ರಿಕೆಗಳನ್ನು ವಾಹನದಲ್ಲಿ ರವಾನಿಸಿದ್ದಾರೆ.

Vijaya Karnataka Web 1 Jul 2020, 8:58 pm
ವಿಜಯಪುರ: ಪರೀಕ್ಷಾ ಅಕ್ರಮ ಹಾಗೂ ಎಡವಟ್ಟುಗಳಿಗೆ ವಿಜಯಪುರ ಕುಖ್ಯಾತಿ‌ ಪಡೆದುಕೊಳ್ಳುತ್ತಿದೆ. ಕೊರೊನಾ ಆತಂಕದ ಮಧ್ಯೆ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ‌ ಪರಿಕ್ಷೆಯಲ್ಲಿ ಮತ್ತೆ ಎಡವಟ್ಟಾಗಿದ್ದು ತಡವಾಗಿ‌ ಬೆಳಕಿಗೆ ಬಂದಿದೆ.
Vijaya Karnataka Web ಪರೀಕ್ಷೆ
ಪರೀಕ್ಷೆ


ನಗರದ ದರಬಾರ ಹೈಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ‌ ಈ ಘಟನೆ ನಡೆದಿದೆ.

ನಡೆದಿದ್ದು ಏನು?

ಪರೀಕ್ಷೆಗೆ ಹಾಜರಾಗಿದ್ದ ಹಳೆ ವಿದ್ಯಾರ್ಥಿಗಳಿಗೆ ಎ ವರ್ಷನ್ ಪ್ರಶ್ನೆ ಪತ್ರಿಕೆ ನೀಡಬೇಕಾಗಿತ್ತು. ಆದರೆ ಮೇಲ್ವಿಚಾರಕರು, ಬಿ ವರ್ಷನ್ ಪ್ರಶ್ನೆ ಪತ್ರಿಕೆ ನೀಡಿ ಎಡವಟ್ಟು‌ ಮಾಡಿಕೊಂಡಿದ್ದಾರೆ. ಬಳಿಕ ಮತ್ತೆ ಹೆಚ್ಚುವರಿಯಾಗಿ‌ ಸಮಯ ನೀಡಿ ಸರಿಪಡಿಸಿದ್ದಾರೆ. ಆದರೆ ಪರೀಕ್ಷಾ ಅವಧಿ‌ ಮುಗಿದು ನಾಲ್ಕು ಗಂಟೆಗಳು ಕಳೆದರೂ ಪರೀಕ್ಷಾ ಸಿಬ್ಬಂದಿ ಉತ್ತರ ಪತ್ರಿಕೆ ಕಳುಹಿಸದೇ‌ ಮತ್ತೆ‌ ಪರೀಕ್ಷೆ ಬರೆಸಿದ್ದು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಹಳೆ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ವರ್ಷನ್ ಅದಲು‌‌ ಬದಲಾಗಿತ್ತು.‌ ಗೊತ್ತಾದ ಬಳಿಕ ಹೆಚ್ವುವರಿ ಸಮಯ ನೀಡಿ ಪರಿಕ್ಷೆ ಬರೆಸಿದ್ದೇವೆ. ಎಲ್ಲವೂ‌ ಸರಿಯಾಗಿದೆ.
ಸಿ.ಪ್ರಸನ್ನಕುಮಾರ, ಡಿಡಿಪಿಐ, ವಿಜಯಪುರ

ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟು ನಡೆದ ಸಂಗತಿ‌ ತಿಳಿದು‌ ಬಿಇಒ ಶರೀಫ್ ನದಾಫ್, ತಹಶೀಲ್ದಾರ್ ಮೋಹನಕುಮಾರಿ ಭೇಟಿ‌ ಪರಿಶೀಲಿಸಿದ್ದಾರೆ. ಅಧಿಕಾರಿಗಳ ಭೇಟಿ ಬಳಿಕ ಉತ್ತರ ಪತ್ರಿಕೆಗಳನ್ನು ವಾಹನದಲ್ಲಿ ರವಾನಿಸಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟಾಗಿರುವುದು ಗಮನಕ್ಕೆ ಬಂದಿದೆ. ಈ ಘಟನೆ ಕುರಿತು ಬಿಇಒ ತನಿಖೆ ನಡೆಸುತ್ತಿದ್ದಾರೆ. ಬಿಇಒ ವರದಿ ಬಂದ ಬಳಿಕ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದ ವಿಜಯಪುರ ತಹಶೀಲ್ದಾರ್‌ ಮೋಹನ ಕುಮಾರಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ