ಆ್ಯಪ್ನಗರ

ಮಾರುತಿ ಸುಜುಕಿ ಕಾರು ದರ ₹15,000 ಹೆಚ್ಚಳ: ಜು. 12ರಿಂದಲೇ ಹೊಸದರ ಅನ್ವಯ

ದೇಶದ ಅತಿ ದೊಡ್ಡ ಕಾರು ಉತ್ಪಾದಕ ಮಾರುತಿ ಸುಜುಕಿ, ದಿಲ್ಲಿಯಲ್ಲಿ ತನ್ನ ಕಾರುಗಳ ದರದಲ್ಲಿ 15,000 ರೂ. ತನಕ ಏರಿಕೆ ಮಾಡಿರುವುದಾಗಿ ಮಾರುಕಟ್ಟೆ ನಿಯಂತ್ರಕಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ. 2021ರ ಜುಲೈ 12ರಿಂದ ಹೊಸ ದರ ಅನ್ವಯವಾಗಿದೆ.

Vijaya Karnataka 12 Jul 2021, 11:01 pm
ಹೊಸದಿಲ್ಲಿ: ದೇಶದ ಅತಿ ದೊಡ್ಡ ಕಾರು ಉತ್ಪಾದಕ ಮಾರುತಿ ಸುಜುಕಿ, ದಿಲ್ಲಿಯಲ್ಲಿ ತನ್ನ ಕಾರುಗಳ ದರದಲ್ಲಿ 15,000 ರೂ. ತನಕ ಏರಿಕೆ ಮಾಡಿರುವುದಾಗಿ ಮಾರುಕಟ್ಟೆ ನಿಯಂತ್ರಕಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.
Vijaya Karnataka Web Maruti Suzuki


''ದಿಲ್ಲಿಯ ಶೋ ರೋಮ್‌ಗಳಲ್ಲಿ ಸ್ವಿಫ್ಟ್‌ ಮತ್ತು ಇತರ ಕಾರುಗಳ ಸಿಎನ್‌ಜಿ ಮಾದರಿಯಲ್ಲಿ ದರವನ್ನು 15,000 ರೂ. ತನಕ ಹೆಚ್ಚಳವಾಗಿದೆ'' ಎಂದು ಕಂಪನಿ ತಿಳಿಸಿದೆ. ಉತ್ಪಾದನೆಯ ವೆಚ್ಚ ಹೆಚ್ಚಳವಾಗಿರುವುದರಿಂದ ದರ ಏರಿಕೆ ಅನಿವಾರ್ಯ ಎಂದಿದ್ದು, 2021ರ ಜುಲೈ 12ರಿಂದ ದರ ವೃದ್ಧಿಸಿದೆ.

ದಿಲ್ಲಿಯ ಶೋ ರೂಮ್‌ಗಳಲ್ಲಿದರ ಹೆಚ್ಚಳಕ್ಕೆ ಮುನ್ನ ಸ್ವಿಫ್ಟ್‌ ಕಾರು ದರ 5.73 ಲಕ್ಷ ರೂ.ಗಳಿಂದ 8.27 ಲಕ್ಷ ರೂ. ತನಕ ಲಭ್ಯವಿರುತ್ತಿತ್ತು. ಮಾರುತಿ ಸುಜುಕಿಯು ಆಲ್ಟೊ, ಸೆಲೆರಿಯೊ, ಎಸ್‌-ಪ್ರಸ್ಸೊ, ವ್ಯಾಗನ್‌ಆರ್‌, ರೆಕೊ ಮತ್ತು ಎರ್ಟಿಗಾದ ಸಿಎನ್‌ಜಿ ಮಾದರಿಯನ್ನು ಒಳಗೊಂಡಿದೆ. ಇವುಗಳ ದರ 4.43 ಲಕ್ಷ ರೂ.ಗಳಿಂದ 9.36 ಲಕ್ಷ ರೂ. ತನಕ ಇದೆ.

ಮಾರುತಿ ಸುಜುಕಿ ಕಾರುಗಳ ಬೆಲೆ ಹೆಚ್ಚಳ, ಜುಲೈನಲ್ಲಿ ದರ ಏರಿಕೆ ನಿರೀಕ್ಷೆ

ಕಳೆದೊಂದು ವರ್ಷದಿಂದೀಚೆಗೆ ವಾಹನಗಳ ಉತ್ಪಾದನಾ ವೆಚ್ಚದಲ್ಲಿ ಗಣನೀಯ ಏರಿಕೆಯಾಗಿದೆ. ಆದ್ದರಿಂದ ಹೆಚ್ಚುವರಿ ವೆಚ್ಚವನ್ನು ದರ ಏರಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ಇತ್ತೀಚೆಗಷ್ಟೇ ಮಾರುತಿ ಸುಜುಕಿ ತಿಳಿಸಿತ್ತು.

ಮಾರ್ಚ್‌ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿಗೆ 1,166 ಕೋಟಿ ರೂ. ನಿವ್ವಳ ಲಾಭ, ಪ್ರತಿ ಷೇರಿಗೆ 45 ರೂ. ಲಾಭಾಂಶ ಘೋಷಣೆ

ಇದೀಗ ನಾನಾ ಮಾದರಿಯ ಕಾರುಗಳ ದರ ಹೆಚ್ಚಳವಾಗಿದೆ. ಕಳೆದ ಏಪ್ರಿಲ್‌ 16ರಂದು ಮಾರುತಿ ಸುಜುಕಿ ದಿಲ್ಲಿಯಲ್ಲಿ ಕಾರುಗಳ ದರದಲ್ಲಿ ಶೇ.1.6ರಷ್ಟು ದರ ಏರಿಸಿತ್ತು. ಜನವರಿ 18ರಂದು ಆಯ್ದ ಮಾದರಿಗಳಲ್ಲಿ 34,000 ರೂ. ತನಕ ದರ ಹೆಚ್ಚಳ ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ