ಆ್ಯಪ್ನಗರ

ನಾಪತ್ತೆಯಾಗಿದ್ದ ಮೀನುಗಾರರು ಶವವಾಗಿ ಪತ್ತೆ

ಕೃಷ್ಣಾ ನದಿ ಹಿನ್ನೀರಿನಲ್ಲಿಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರು ಶನಿವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

Vijaya Karnataka Web 14 Jun 2020, 5:00 am
ವಿಜಯಪುರ: ಕೃಷ್ಣಾ ನದಿ ಹಿನ್ನೀರಿನಲ್ಲಿಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರು ಶನಿವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.
Vijaya Karnataka Web missing fishermen found dead
ನಾಪತ್ತೆಯಾಗಿದ್ದ ಮೀನುಗಾರರು ಶವವಾಗಿ ಪತ್ತೆ


ಕೊಲ್ಹಾರ ತಾಲೂಕಿನ ಸಿದ್ದನಾಥ ಬಳಿ ಗ್ರಾಮದ ಮೂವರು ಮೀನುಗಾರರಾದ ಪರಶುರಾಮ ಲಮಾಣಿ (36), ರಮೇಶ ಲಮಾಣಿ ಹಾಗೂ ಅಕ್ಷಯ ಲಮಾಣಿ ಗುರುವಾರ ತೆಪ್ಪದಲ್ಲಿಕೃಷ್ಣಾ ನದಿಗೆ ತೆರಳಿದ್ದರು. ಅಂದು ಸಂಜೆ ಭಾರೀ ಗಾಳಿ ಸಹಿತ ಮಳೆ ಸುರಿಯಲಾರಂಭಿಸಿತು. ಭಾರೀ ಗಾಳಿಯ ರಭಸಕ್ಕೆ ತೆಪ್ಪ ಮುಗುಚಿದೆ. ಇದರಿಂದಾಗಿ ಮೂವರು ನೀರು ಪಾಲಾಗಿದ್ದರು.

ಮೂವರ ಪೈಕಿ ಅಕ್ಷಯ ಲಮಾಣಿ ಈಜಿ ದಡ ಸೇರಿದ್ದ. ಆದರೆ ಪರಶುರಾಮ ಹಾಗೂ ರಮೇಶ ಲಮಾಣಿ ಕೃಷ್ಣಾ ನದಿಯಲ್ಲಿನಾಪತ್ತೆಯಾಗಿದ್ದರು. ಸುದ್ದಿ ತಿಳಿದ ಕೊಲ್ಹಾರ ತಹಸೀಲ್ದಾರ್‌ಎಂ.ಎಸ್‌. ಬಾಗವಾನ ಹಾಗೂ ಪೊಲೀಸರು ಸ್ಥಳೀಯ ಮೀನುಗಾರರ ಸಹಯೋಗದಲ್ಲಿನಾಪತ್ತೆಯಾದವರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದರು. ಇವರೊಟ್ಟಿಗೆ ಅಗ್ನಿಶಾಮಕ ಠಾಣೆ ಸಿಬ್ಬಂದಿಯೂ ಸೇರಿ ಕಳೆದ ಎರಡೂ ದಿನಗಳಿಂದ ಪ್ರಯತ್ನ ನಡೆಸಿದ್ದರು. ಆದರೆ ಸತತ ಎರಡೂ ದಿನಗಳ ಹುಡುಕಾಟದ ಬಳಿಕ ನೀರು ಪಾಲಾಗಿದ್ದ ಇಬ್ಬರ ಶವಗಳು ಪತ್ತೆಯಾಗಿವೆ. ಒಬ್ಬನ ಶವ ಗಣಿ ಗ್ರಾಮದ ಬಳಿ ಪತ್ತೆಯಾದರೆ, ಇನ್ನೊಬ್ಬನ ಶವ ಸಿದ್ದನಾಥ ತಾಂಡಾ ಬಳಿ ಪತ್ತೆಯಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೊಲ್ಹಾರ ಠಾಣೆ ಪೊಲೀಸರು ತಿಳಿಸಿದ್ದಾರೆ. ಬಳಿಕ ಪೊಲೀಸರು ಪಂಚನಾಮೆ ನಡೆಸಿದ, ಶವಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರು.

ಮುಗಿಲು ಮುಟ್ಟಿದ ಆಕ್ರಂದನ
ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕುಟುಂಬದ ಮುಖ್ಯಸ್ಥರು, ಹೆಣವಾಗಿದ್ದಾರೆ ಎಂಬ ಸುದ್ದಿ ತಿಳಿದ ಎರಡೂ ಕುಟುಂಬಗಳಲ್ಲಿಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ದುಡಿದು ಮನೆ ನಡೆಸುತ್ತಿದ್ದ ವ್ಯಕ್ತಿಗಳೇ ಸತ್ತರೇ ಏನು ಗತಿ ಎಂದು ಎರಡೂ ಕುಟುಂಬಗಳಲ್ಲಿಮಹಿಳೆಯರು ಎದೆ ಬಡಿದು ಅಳುತ್ತಿರುವ ದೃಶ್ಯ ಮನಕಲಕುವಂತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ