ಆ್ಯಪ್ನಗರ

ವಿಜಯಪುರ: 121 ಜನಕ್ಕೆ ಪಾಸಿಟಿವ್, ಇಬ್ಬರು ಸೋಂಕಿಗೆ ಬಲಿ, ಸೋಂಕಿತರ ಸಂಖ್ಯೆ 4215ಕ್ಕೆ ಏರಿಕೆ

ವಿಜಯಪುರದ ರೈಲ್ವೆ ಸ್ಟೇಷನ್ ಬಳಿಯ ನಿವಾಸಿ 75 ವರ್ಷದ (ಪಿ109936) ಸೋಂಕಿತ ವೃದ್ಧ ಶ್ವಾಸಕೋಶ ಸಮಸ್ಯೆಯಿಂದ ಜು.29ರಂದು ಆಸ್ಪತ್ರೆಗೆ ದಾಖಲಾಗಿದ್ದು, ಆ.9ರಂದು ಮೃತಪಟ್ಟಿದ್ದಾರೆ. ಶಿಷ್ಟಾಚಾರದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನಿಲ್‌ಕುಮಾರ್ ತಿಳಿಸಿದ್ದಾರೆ.

Vijaya Karnataka Web 12 Aug 2020, 8:09 pm
ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಆಟ ಮುಂದುವರಿದಿದ್ದು, ಬುಧವಾರ 121 ಜನಕ್ಕೆ ಪಾಸಿಟಿವ್ ಬಂದಿದೆ. ಇಬ್ಬರು ಸೋಂಕಿತ ವೃದ್ಧರು ಮೃತಪಟ್ಟಿದ್ದಾರೆ.
Vijaya Karnataka Web ಕೊರೊನಾ
ಕೊರೊನಾ

ಮುದ್ದೇಬಿಹಾಳ ತಾಲೂಕಿನ ಮಿಣಜಗಿ ಗ್ರಾಮದ 71 ವರ್ಷದ (ಪಿ134577)ಸೋಂಕಿತ ವೃದ್ಧ ಶ್ವಾಸಕೋಶ, ಸಕ್ಕರೆ ಕಾಯಿಲೆ, ರಕ್ತದೊತ್ತಡ ಬಳಲುತ್ತಿದ್ದು, ಜು.30ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆ.6ರಂದು ಮೃತಪಟ್ಟಿದ್ದಾರೆ.

ವಿಜಯಪುರದ ರೈಲ್ವೆ ಸ್ಟೇಷನ್ ಬಳಿಯ ನಿವಾಸಿ 75 ವರ್ಷದ (ಪಿ109936) ಸೋಂಕಿತ ವೃದ್ಧ ಶ್ವಾಸಕೋಶ ಸಮಸ್ಯೆಯಿಂದ ಜು.29ರಂದು ಆಸ್ಪತ್ರೆಗೆ ದಾಖಲಾಗಿದ್ದು, ಆ.9ರಂದು ಮೃತಪಟ್ಟಿದ್ದಾರೆ. ಶಿಷ್ಟಾಚಾರದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನಿಲ್‌ಕುಮಾರ್ ತಿಳಿಸಿದ್ದಾರೆ.

90 ಮಂದಿ ಗುಣಮುಖ

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4215ಕ್ಕೆ ಏರಿಕೆಯಾಗಿದ್ದು, ಬುಧವಾರ 90 ಮಂದಿ ಕೊರೊನಾದಿಂದ ಮುಕ್ತರಾಗಿ ಬಿಡುಗಡೆಯಾದರು.

ಈವರೆಗೆ 3189 ಸೋಂಕಿತರು ಗುಣಮುಖರಾಗಿದ್ದಾರೆ. 45 ಸೋಂಕಿತರು ಮೃತಪಟ್ಟಿದ್ದಾರೆ. 981 ಸಕ್ರಿಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ