ಆ್ಯಪ್ನಗರ

ಸಭೆಗೆ ಗೈರು, ನೋಟಿಸ್‌ಗೆ ಸೂಚನೆ

ಇಂಡಿ: ಸಭೆ ಆರಂಭಗೊಂಡು ಅರ್ಧ ಗಂಟೆಯಾದರೂ ಸಭೆಗೆ ಬಾರದ ತಾಲೂಕು ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡುವಂತೆ ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಖಡಕ್‌ ಸೂಚನೆ ನೀಡಿದರು.

Vijaya Karnataka 19 Nov 2019, 5:00 am
ಇಂಡಿ: ಸಭೆ ಆರಂಭಗೊಂಡು ಅರ್ಧ ಗಂಟೆಯಾದರೂ ಸಭೆಗೆ ಬಾರದ ತಾಲೂಕು ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡುವಂತೆ ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಖಡಕ್‌ ಸೂಚನೆ ನೀಡಿದರು.
Vijaya Karnataka Web notice of absentee meeting notice
ಸಭೆಗೆ ಗೈರು, ನೋಟಿಸ್‌ಗೆ ಸೂಚನೆ


ಪಟ್ಟಣದ ತಾಪಂ ಸಭಾ ಭವನದಲ್ಲಿಸೋಮವಾರ ತಮ್ಮ ಅಧ್ಯಕ್ಷತೆಯಲ್ಲಿನಡೆದ ತಾಲೂಕಿನ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿಈ ಸೂಚನೆ ನೀಡಿದರು.

ಸಭೆ ಆರಂಭಿಸಿ ಅರ್ಧ ಗಂಟೆಯಾದರೂ ಸಭೆಗೆ ಹಲವು ಅಧಿಕಾರಿಗಳು ಗೈರಾಗಿದ್ದನ್ನು ಗಮನಿಸಿದ ಜಿಪಂ ಅಧ್ಯಕ್ಷರು, ತಾಪಂ ಅಧಿಕಾರಿ ಡಾ. ವಿಜಯಕುಮಾರ ಆಜೂರ ಅವರಿಗೆ ಈ ಕೂಡಲೇ ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡಲು ತಿಳಿಸಿದರು.

ಕೃಷಿ ಹೊಂಡಕ್ಕೆ ಅನುದಾನ ನೀಡಿ:

ಕೃಷಿ ಇಲಾಖೆ ಅಧಿಕಾರಿ ಮಹದೇವಪ್ಪ ಏವೂರ ಅವರಿಗೆ ಇಲಾಖೆಯ ಮಾಹಿತಿ ನೀಡುವಂತೆ ಜಿಪಂ ಅಧ್ಯಕ್ಷರು ಸೂಚಿಸಿದರು. ವಾರ್ಷಿಕ ವಾಡಿಕೆ ಪ್ರಕಾರ 630 ಮಿಮೀ ಮಳೆಯಾಗಬೇಕಾಗಿತ್ತು, ಈ ವರೆಗೆ 557 ಮಿಮೀ ಮಳೆಯಾಗಿದೆ. ತೊಗರಿ ಬೆಳೆ ಬಾಡುವ ಹಂತದಲ್ಲಿದ್ದಾಗ ಮಳೆಯಾಗಿದೆ. ಹೀಗಾಗಿ ಈ ಬಾರಿ ಫಸಲು ಚೆನ್ನಾಗಿದೆ ಎಂದು ಮಹದೇವಪ್ಪ ತಿಳಿಸಿದರು. ತಾಲೂಕಿನಲ್ಲಿಅನೇಕ ರೈತರು ಕೃಷಿ ಹೊಂಡ ನಿರ್ಮಾಣ ಮಾಡಿದ್ದಾರೆ. ಆದರೆ ಅವರಿಗೆ ಈವರೆಗೆ ಹಣ ನೀಡಿಲ್ಲಏಕೆ ಎಂದು ಜಿಪಂ ಅಧ್ಯಕ್ಷ ಪ್ರಶ್ನಿಸಿದರು. ಸರಕಾರದಿಂದ ಅನುದಾನ ಬಂದಿಲ್ಲ. ಬಂದ ತಕ್ಷಣವೇ ನೀಡುತ್ತೇವೆ ಎಂದರು. ರೈತರು ದಿನಾಲು ಕೃಷಿ ಹೊಂಡದ ಹಣಕ್ಕಾಗಿ ಅಲೆದಾಡುತ್ತಿದ್ದಾರೆ. ರೈತರಿಗೆ ಸರಿಯಾಗಿ ಮಾರ್ಗದರ್ಶನ ನೀಡಿ ಎಂದು ಅಧ್ಯಕ್ಷರು ತಿಳಿಸಿದರು.

ಚಡಪಡಿಸಿದ ತೋಟಗಾರಿಕೆ ಅಧಿಕಾರಿ:

ತೋಟಗಾರಿಕೆ ಇಲಾಖೆಯ ಅಧಿಕಾರಿ ಆರ್‌.ಟಿ.ಹಿರೇಮಠ ಅವರಿಗೆ ಪಾಲಿಹೌಸ್‌ ಎಷ್ಟು ನಿರ್ಮಾಣ ಮಾಡಿದ್ದೀರಿ ಎಂದು ನೇದಲಗಿ ಪ್ರಶ್ನಿಸಿದಾಗ, ಅಧಿಕಾರಿ ಚಡಪಡಿಸಿದ ಘಟನೆ ನಡೆಯಿತು. ನಿಮ್ಮ ಇಲಾಖೆಯಲ್ಲಿಕೃಷಿ ಹೊಂಡ ನಿರ್ಮಾಣಕ್ಕೆ ರೈತರಿಂದ ಹಣ ಪಡೆಯುತ್ತಿರುವ ದೂರುಗಳಿವೆ. ನಿಮ್ಮ ಅಭಿಪ್ರಾಯವೇನು ? ಎಂದು ಅಧ್ಯಕ್ಷ ಪ್ರಶ್ನಿಸಿದಾಗ, ರೈತರಿಂದ ಹಣ ತೆಗೆದುಕೊಂಡಿಲ್ಲಎಂದು ಉತ್ತರಿಸಿದರು.

ಇಂಡಿ ಹಾಗೂ ಚಡಚಣ ಹೆಸ್ಕಾಂ ಅಧಿಕಾರಿ ಮೇಡೆದಾರ ಹಾಗೂ ಬಿರಾದಾರ ಜಿಪಂ ಹಾಗೂ ತಾಪಂದಿಂದ ನಮ್ಮ ಇಲಾಖೆಗೆ ಯಾವುದೇ ಅನುದಾನ ಬರುವುದಿಲ್ಲ. ಎಸ್‌ಸಿಎಸ್‌ಟಿ ಹಾಗೂ ಕುಡಿಯುವ ನೀರಿನ ಬಗ್ಗೆ ಜವಾಬ್ದಾರಿಯಿಂದ ಕೆಲಸ ಮಾಡಿದ್ದೇವೆ. ನೆರೆ ಹಾವಳಿಯಿಂದ ವಿದ್ಯುತ ಪರಿವರ್ತಕ ಹಾಗೂ ಕಂಬಗಳನ್ನು ಜೋಡಿಸಿದ್ದರ ಕುರಿತು ಪ್ರಶ್ನಿಸಿದಾಗ, 3 ಪರಿವರ್ತಕ ಹಾನಿಯಾಗಿದ್ದವು. ಸರಿಪಡಿಸಿ ಕಂಬಗಳನ್ನು ಹಾಕಲಾಗಿದೆ. ಆ ಗ್ರಾಮಗಳಲ್ಲಿಈಗ ವಿದ್ಯುತ್‌ ಪೂರೈಕೆ ಸಮಸ್ಯೆ ಇಲ್ಲಎಂದು ತಿಳಿಸಿದರು.

ವಸತಿ ನಿಲಯಗಳಲ್ಲಿಸಾಕಷ್ಟು ಸಮಸ್ಯೆಗಳು ಇವೆ ಎಂಬ ದೂರಗಳು ಬಂದಿವೆ. ಸಂಬಂಧಿಸಿದ ಅಧಿಕಾರಿಗಳು ವಿಧ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಿ ಕಲಿಕೆಗೆ ಪ್ರೋತ್ಸಾಹ ನೀಡಿ. ಎಲ್ಲವಸತಿ ನಿಲಯಕ್ಕೆ ಭೇಟಿ ನೀಡಲಾಗುವುದು ಎಂದು ಜಿಪಂ ಅಧ್ಯಕ್ಷರು ತಿಳಿಸಿದರು.

ತಾಪಂ ಅಧ್ಯಕ್ಷ ಶೇಖರ ನಾಯಕ, ತಾಪಂ ಅಧಿಕಾರಿ ಡಾ.ವಿಜಯಕುಮಾರ ಆಜೂರ, ಜಿಪಂ ಯೋಜನಾಧಿಕಾರಿ ಎಂ.ಕೆ.ಘೋಠೆ, ತಹಸೀಲ್ದಾರ್‌ ಚಿದಾನಂದ ಕುಲಕರ್ಣಿ, ತಾಪಂ ಯೋಜನಾಧಿಕಾರಿ ವಿಠ್ಠಲ ಹಳ್ಳಿಕರ್‌, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರಮೇಶ ಕನಮಡಿ, ಜಿಪಂ ಇಇ ರಾಜುಕುಮಾರ ತೋರವಿ, ಸಮಾಜ ಕಲ್ಯಾಣಾಧಿಕಾರಿ ಉಮೇಶ ಲಮಾಣಿ, ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಂ.ಬಂಡಗಾರ, ಪಶು ಇಲಾಖೆ ವೈಧ್ಯಾಧಿಕಾರಿ ಸಿ.ಬಿ.ಕುಂಬಾರ, ಡಾ. ಅರ್ಚನಾ ಕುಲಕರ್ಣಿ, ವಿ.ಬಿ.ಬಿರಾದಾರ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ